'ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್' ಸುದ್ದಿ ವೈರಲ್; ಪುಷ್ಪ-2, ವಾರಿಸು ಸಿನಿಮಾಗಳಿಗೆ ಶುರುವಾಯ್ತು ಭಯ

By Shruthi Krishna  |  First Published Nov 25, 2022, 1:49 PM IST

ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಪುಷ್ಪ-2 ಮತ್ತು ವರಿಸು ಸಿನಿಮಾ ತಂಡಕ್ಕೆ ಭಯ ಶುರುವಾಗಿದೆ ಎನ್ನುವ ಮಾತು ಕೇಳಿಬಂದಿದೆ. 


ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ಬೇರೆ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಿದರು. ಮೊದಲ ಸಿನಿಮಾವೇ ರಶ್ಮಿಕಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಈ ಸಿನಿಮಾದ ಸಕ್ಸಸ್ ಬಳಿಕ ರಶ್ಮಿಕಾ ಪರಭಾಷೆಗೆ ಹಾರಿದರು. ಬಳಿಕ ಕನ್ನಡ ಕಡೆ ರಶ್ಮಿಕಾ ಮುಖ ಮಾಡಿಲ್ಲ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಆಕ್ಷನ್ ಮಾಡಿ ತೊರಿಸಿದ್ದರು. ರಶ್ಮಿಕಾ ಅವರ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಷ್ಟೆಯಲ್ಲದೇ ರಶ್ಮಿಕಾ ಸಿನಿಮಾ ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು, ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್ ಗಳು ಹರಿದಾಡುತ್ತಿವೆ. 

ಸ್ಯಾಂಡಲ್‌ವುಡ್ ನಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾ ಬ್ಯಾನ್ ಮಾಡಲಾಗುತ್ತೆ ಎನ್ನುವ ಸುದ್ದಿ ವೈರಲ್ ಆಗುತ್ತಿರುವ ಬೆನ್ನಲ್ಲೇ ರಶ್ಮಿಕಾ ನಟನೆಯ ಸಿನಿಮಾ ತಂಡಕ್ಕೆ ಭಯ ಶುರುವಾಗಿದೆ ಎನ್ನಲಾಗಿದೆ. ಅದರಲ್ಲೂ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ 'ಪುಷ್ಪ-2' ಮತ್ತು ದಳಪತಿ ವಿಜಯ್ ನಟನೆಯ 'ವರಿಸು' ಸಿನಿಮಾತಂಡ ಸಂಕಷ್ಟಕ್ಕೆ ಸಿಲುಕಿವೆ ಎನ್ನುವ ಮಾತು ಟಾಲಿವುಡ್ ಮತ್ತು ಕಾಲಿವುಡ್ ‌ನಲ್ಲಿ ಗುಲ್ಲಾಗಿದೆ. ಕೋಟಿ ಕೋಟಿ ಹಣ ಹೂಡಿ ಸಿನಿಮಾ ಮಾಡಿರುತ್ತಾರೆ. ರಶ್ಮಿಕಾ ವಿಚಾರಕ್ಕೆ ಸಿನಿಮಾ ಬ್ಯಾನ್ ಆದರೆ ದೊಡ್ಡ ಹೊಡೆತ ಬೇಳಲಿದೆ. ಅದರಲ್ಲೂ ತಮಿಳು ಮತ್ತು ತೆಲುಗು ಸಿನಿಮಾಗಳಿಗೆ ಕರ್ನಾಟಕ ದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ ರಶ್ಮಿಕಾ ಕಾರಣಕ್ಕೆ ಸಿನಿಮಾಗೆ ತೊಂದರೆ ಆದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ ಎನ್ನಲಾಗಿದೆ. ಬ್ಯಾನ್ ಮಾಡುವ ನಿರ್ಧಾರದಿಂದ ರಶ್ಮಿಕಾ ಸಿನಿ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ಮುಂದೆ ನಿರ್ಮಾಪಕರು ರಶ್ಮಿಕಾರನ್ನು ತಮ್ಮ ಸಿನಿಮಾಗೆ ಆಯ್ಕೆ ಮಾಡಲು ಹಿಂದೇಟು ಹಾಕುವ ಸಾಧ್ಯತೆ ಇದೆ. 

Rishabh Shetty: ರಶ್ಮಿಕಾಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ತಿರುಗೇಟು ಕೊಟ್ರು ನೋಡಿ ರಿಷಬ್, ಶಭಾಷ್ ಅಂದ್ರು ನೆಟ್ಟಿಗರು!

Tap to resize

Latest Videos

ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಅವಮಾನಿಸಿದ್ದ ಬೆನ್ನಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಟಾಂಗ್ ಕೊಟ್ಟಿದ್ದರು. ಸಂದರ್ಶನದಲ್ಲಿ ರಿಷಬ್ ಕೈಯಲ್ಲಿ ಆಕ್ಷನ್ ಮಾಡಿ ಅಂಥ ನಟಿಯರ ಜೊತೆ ಕೆಲಸ ಮಾಡಲ್ಲ ಎಂದು ಹೇಳಿದ್ದರು. ರಿಷಬ್ ಶೆಟ್ಟಿ ರಿಯಾಕ್ಷನ್ ಕೂಡ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಕನ್ನಡ ಸಿನಿಮಾರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್: ಹೀಗೊಂದು ಸುದ್ದಿ ವೈರಲ್

ಕನ್ನಡ ಸಿನಿಮಾ ಮೂಲಕವೇ ರಶ್ಮಿಕಾ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದರು. ರಶ್ಮಿಕಾ ಸಿನಿಮಾ ಜೀವನಕ್ಕೆ ಬ್ರೇಕ್ ನೀಡಿದ ಸಿನಿಮಾ ಕಿರಿಕ್ ಪಾರ್ಟಿ. ಹೀಗಿರುವಾಗ ಹೆಸರನ್ನೂ ಹೇಳದೆ ಅವಮಾನ ಮಾಡಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗಾಗಿ ಕನ್ನಡ ಥಿಯೇಟರ್ ಮಾಲೀಕರು, ಚಲನಚಿತ್ರೋದ್ಯಮ ಶೀಘ್ರದಲ್ಲೇ ರಶ್ಮಿಕಾ ವಿರುದ್ಧ ಕ್ರಮ ಕೈಗೊಳ್ಳಲಿದೆ ಮತ್ತು ಕೃತಜ್ಞತೆ ಇಲ್ಲದ ನಟಿಯನ್ನು ಚಿತ್ರರಂಗದಿಂದ ನಿಷೇಧಿಸುವ ಸಾಧ್ಯತೆ ಇದೆ  ಎನ್ನುವ ಪೋಸ್ಟರ್‌ಗಳು ವೈರಲ್ ಆಗಿವೆ. 

click me!