
ಸರಣಿ ಸೋಲಿನ ಸುಳಿಯಲ್ಲಿದ್ದ ಬಾಲಿವುಡ್‌ಗೆ ಅಜಯ್ ದೇವಗನ್ ನಟನೆಯ ದೃಶ್ಯಂ-2 ಸಿನಿಮಾ ಕೊಂಚ ಧೈರ್ಯ ನೀಡಿದೆ. ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ನೆಲಕಚ್ಚುತ್ತಿವೆ. ಸ್ಟಾರ್ ನಟನ ಸಿನಿಮಾಗಳು, ಬಿಗ್ ಬಜೆಟ್ ಸಿನಿಮಾಗಳು ಸಹ ಅಭಿಮಾನಿಗಳ ಹೃದಯ ಗೆಲ್ಲಲು ವಿಫಲವಾಗಿವೆ. ಬಾಕ್ಸ್ ಆಫೀಸ್‌ನಲ್ಲೂ ಹೀನಾಯ ಸೋಲು ಕಂಡಿವೆ. ಸೌತ್ ಸಿನಿಮಾಗಳು ರಾರಾಜಿಸುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಲ್ಲದೇ ಭರ್ಜರಿ ಕಮಾಯಿ ಮಾಡುತ್ತಿವೆ. ಅಲ್ಲಿನ ಪ್ರೇಕ್ಷಕರ ಹೃದಯ ಗೆಲ್ಲುತ್ತಿವೆ. ಸೌತ್ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಮಂದಿ ಮಂಕಾಗಿದ್ದರು. ಆದರೀಗ ಅಜಯ್ ದೇವಗನ್ ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದ್ದಾರೆ. ಅಜಯ್ ದೇವಗನ್ ನಟನೆಯ ದೃಶ್ಯಂ-2 ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದ್ದು ಈಗಾಗಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇತ್ತೀಚಿಗೆ ರಿಲೀಸ್ ಆದ ಹಿಂದಿ ಸಿನಿಮಾಗಳಲ್ಲಿಯೇ ದೃಶ್ಯಂ-2 ಕಲೆಕ್ಷನ್ ಬಾಲಿವುಡ್ ಮಂದಿಗೆ ಕೊಂಚ ಸಮಾಧಾನ ತಂದಿದೆ.
ದೃಶ್ಯಂ-2 ರಿಲೀಸ್ ಆಗಿ ಎರಡು ವಾರದಲ್ಲೇ 100 ಕೋಟಿ ಕ್ಲಬ್ ಸೇರಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಅಂದಹಾಗೆ ಈ ವರ್ಷ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಇದಾಗಿದೆ. ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಮೊದಲ ಸ್ಥಾನದಲ್ಲಿದೆ. ಅಂದಹಾಗೆ ದೃಶ್ಯಂ-2 ರಿಲೀಸ್ ಆಗಿ ಮೊದಲ ದಿನವೇ 15 ಕೋಟಿ ರೂ. ಬಾಚಿಕೊಂಡಿತ್ತು. ಬಳಿಕ ಅಜಯ್ ದೇವಗನ್ ಸಿನಿಮಾ ಗಳಿಕೆ ದುಪ್ಪಟ್ಟಾಗಿದೆ. ದಿನದಿಂದ ದಿನಕ್ಕೆ ದೃಶ್ಯಂ-2 ಕಲೆಕ್ಷನ್ ಹೆಚ್ಚಾಗಿದ್ದು ಅತೀ ವೇಗದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಇದೀಗ ಸಿನಿಮಾ ರಿಲೀಸ್ ಆಗಿ ಎರಡು ವಾರಕ್ಕೆ ದೃಶ್ಯಂ-2 ಒಟ್ಟು 104 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಅಜಯ್ ದೇವಗನ್ ಮತ್ತು ಟಬು ಒಟ್ಟಿಗೆ ನಟಿಸಿದ ಸಿನಿಮಾ ಸೂಪರ್ ಹಿಟ್
ದೃಶ್ಯಂ-2ನಲ್ಲಿ ಅಜಯ್ ದೇವಗನ್ ಜೊತೆ ನಟಿ ಶ್ರೀಯಾ ಶರಣ್, ತಬು, ಅಶಿತಾ ದತ್ತಾ, ಮೃಣಾಲ್ ಜಾದವ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು. ಈ ಸಿನಿಮಾ ರಿಮೇಕ್ ಎನ್ನುವ ನಿರಾಸೆ ಕೂಡ ಇತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಅಂದಹಾಗೆ ದೃಶ್ಯಂ-2 ಕೂಡ ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾದ ರಿಮೇಕ್. ಮಲಯಾಳಂನ ದೃಶ್ಯಂ-2 ಸಿನಿಮಾವನ್ನು ಹಿಂದಿಯಲ್ಲಿ ಅದೇ ಹೆಸರಿನಲ್ಲಿ ರಿಮೇಕ್ ಮಾಡಿ ರಿಲೀಸ್ ಮಾಡಲಾಗಿದೆ. ಮೋಹನ್ ಲಾಲ್ ನಾಯಕನಾಗಿ ಮಿಂಚಿದ್ದರು. ಮೋಹನ್ ಲಾಲ್ ಪಾತ್ರವನ್ನು ಹಿಂದಿಯಲ್ಲಿ ಅಜಯ್ ದೇವಗನ್ ಮಾಡಿದ್ದಾರೆ. 2015ರಲ್ಲಿ ಮೊದಲ ಭಾಗ ರಿಲೀಸ್ ಆಗಿತ್ತು. ಮೊದಲ ಭಾಗದಲ್ಲೂ ಅಜಯ್ ದೇವಗನ್ ಮಿಂಚಿದ್ದರು. ಇದೀಗ ಬರೋಬ್ಬರಿ 7 ವರ್ಷಗಳ ಬಳಿಕ ದೃಶ್ಯಂ-2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ ಅಜಯ್ ದೇವಗನ್.
'ದೃಶ್ಯಂ-2' ಸಕ್ಸಸ್ ಬಳಿಕ ಮತ್ತೊಂದು ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್‌ನಲ್ಲಿ ಅಜಯ್ ದೇವನ್; ಟೀಸರ್ ವೈರಲ್
ದೃಶ್ಯಂ-2 ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಅಜಯ್ ದೇವಗನ್ ಮತ್ತೊಂದು ಸೌತ್ ಸಿನಿಮಾದ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸೂಪರ್ ಹಿಟ್ ಕೈದಿ ರಿಮೇಕ್ ನಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಈಗಾಗಲೇ ಕೈದಿ ಟೀಸರ್ ರಿಲೀಸ್ ಮಾಡುವ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸೌತ್ ಸಿನಿಮಾಗಳಿಗೆ ಬಾಲಿವುಡ್‌ನಲ್ಲಿ ಉತ್ತಮ ಬೇಡಿಕೆ ಇದ್ದು ಅನೇಕ ಸಿನಿಮಾಗಳು ಬಾಲಿವುಡ್‌ಗೆ ರಿಮೇಕ್ ಆಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.