
ನಟಿ ಸಮಂತಾ ಋತ್ ಪ್ರಭು ತಮ್ಮ ಸಂತೋಷದ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಸಮಂತಾ (Samantha Ruth Prabhu) 'ನಾನು ಪ್ರತಿದಿನ ಕೆಲಸಕ್ಕೆ ಹೋದರೆ ಖುಷಿಯಾಗಿ ಇರುತ್ತೇನೆ. ನನಗೆ, ನನ್ನ ಕೆಲಸದ ಕ್ಷಣಗಳು ಕೊಡುವಷ್ಟು ಸಂತೋಷವನ್ನು ಬೇರೆ ಯಾವುದೂ ನೀಡುವುದಿಲ್ಲ. ನನ್ನ ವೃತ್ತಿ ನಟನೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ನಾನು ಪ್ರತಿದಿನ ಶೂಟಿಂಗ್ ಹೋಗಬೇಕು, ನನ್ನ ಪಾಲಿನ ಸನ್ನಿವೇಶವನ್ನು ನಾನು ಸಂಪೂರ್ಣ ತಲ್ಲೀನತೆಯಿಂದ ಮಾಡಬೇಕು. ಅದೇ ನನಗೆ ಅತ್ಯಂತ ಸಂತೋಷ ನೀಡುವ ಕ್ಷಣ.
ನಾನು ನನ್ನ ನಟನೆಯಲ್ಲಿ ಕಳೆದುಹೋಗಬೇಕು, ನನ್ನ ಕೆಲಸವನ್ನು ಪರಿಪೂರ್ಣವಾಗಿ ಮಾಡಬೇಕು ಎಂಬುದಷ್ಟೇ ನನ್ನ ಗಮನದಲ್ಲಿ ಇರುತ್ತದೆ. ಬೇರೆ ಯಾವುದೇ ಕೆಲಸ ಅಥವಾ ಟೀಕೆ ಟಿಪ್ಪಣಿಗಳಿಗೆ ನಾನು ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಮಾಡಲು ನಿರಂತರವಾಗಿ ಕೆಲಸಗಳು ಬೇಕು, ಅದನ್ನು ನಾನು ಮನಃಪೂರ್ವಕವಾಗಿ ಮಾಡಬೇಕು, ಅದರಲ್ಲಿ ನಾನು ಕಳೆದುಹೋಗಬೇಕು. ಯಾವತ್ತು ನಾನು ಕೆಲಸ ಮಾಡುತ್ತಿರುವೆನೋ ಅಂದು ನಾನು ಬಹಳಷ್ಟು ಖುಷಿಯಾಗಿರುವೆ. ಕೆಲಸ ಮಾಡದೇ ಇರುವ ದಿನ ನನ್ನ ಪಾಲಿಗೆ ನರಕ ಎನ್ನಬಹುದು' ಎಂದಿದ್ದಾರೆ ನಟಿ ಸಮಂತಾ.
ವಿಷ್ಣುವರ್ಧನ್-ಭಾರತಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ಯಾಕೆ; ಎರಡೂ ಹೆಣ್ಣು ಮಕ್ಕಳೇ ಯಾಕೆ..!?
ಆದರೆ ನಟಿ ಸಮಂತಾ ಇಂದು ಅದ್ಯಾವ ಪರಿಸ್ಥಿತಿ ತಲುಪಿದ್ದಾರೆ ಎಂದರೆ ಅವರಿಗೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಮೆಯೋಸಿಟಿಸ್ (Myositis)ಖಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ಅವರು ಅಮೆರಿಕಾದಲ್ಲಿ (USA) ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಆ ಖಾಯಿಲೆ ಕಾರಣದಿಂದ ಸಾಕಷ್ಟು ನೋವು ಉಣ್ಣುತ್ತಿರುವ ಸಮಂತಾ ಅವರು ಯಾವುದೇ ಶೂಟಿಂಗ್‌ನಲ್ಲಿಯೂ ಭಾಗವಹಿಸುತ್ತಿಲ್ಲ. ಇತ್ತೀಚೆಗೆ ಅವರೇ ಹೇಳಿರುವಂತೆ ಅವರೀಗ ಅವರ ಲೈಫ್‌ನಲ್ಲಿ ಯಾವುದೇ ಕಂಟ್ರೋಲ್ ಹೊಂದಿಲ್ಲ. ಎಂಥಾ ನಟಿಗೆ ಅದೆಂಥಾ ಪರಿಸ್ಥಿತಿ ನೋಡಿ..!
ಶ್ರುತಿ ಹರಿಹರನ್ ಹೇಳ್ತಿದಾರೆ 'ತೀರದಾಚೆಗೆ ಹಾರಿ ಹೋಗುವಾಸೆ'; ಯಾಕೆ ಹಾಗೆ ಹೇಳ್ತಿದಾರೋ ಏನೋ.!
ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಟಿ ಸಮಂತಾ ಅವರದು ತುಂಬಾ ಪ್ರಸಿದ್ಧವಾದ ಹೆಸರು. ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಈಗ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಸಮಂತಾ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ 'ಪುಷ್ಪಾ'ದಲ್ಲಿ ಡಾನ್ಸ್ ಒಂದಕ್ಕೆ ಹೆಜ್ಜೆ ಹಾಕಿ ಭಾರತವನ್ನೂ ಮೀರಿ ಪ್ರಸಿದ್ಧಿ ಪಡೆದಿದ್ದರು. ಅಲ್ಲು ಅರ್ಜೂನ್-ರಶ್ಮಿಕಾ ಮಂದಣ್ಣ ಜೋಡಿಯ ಪುಷ್ಪಾ ಚಿತ್ರದಲ್ಲಿ ಸಮಂತಾ ಮಾಡಿದ ಡಾನ್ಸ್ ಅದೆಷ್ಟು ಹಿಟ್ ಆಗಿತ್ತು ಎಂದರೆ ನಾಯಕಿಯಾಗಿದ್ದ ರಶ್ಮಿಕಾ ಅವರಷ್ಟೇ ಖ್ಯಾತಿಯನ್ನು ಒಂದೇ ಒಂದು ಡಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಸಮಂತಾ ಗಳಿಸಿದ್ದರು ಎಂದರೆ ತಪ್ಪೇನಿಲ್ಲ!
ಒತ್ತಾಯಕ್ಕೆ ಮಣಿದು ಮದುವೆ, ದಿನಂಪ್ರತಿ ಜಗಳ; ಡಿವೋರ್ಸ್ ಬಳಿಕ ಏನ್ ಮಾಡ್ತಿದಾರೆ ನಟಿ ರೂಪಿಣಿ..?!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.