ತಲೆಗೆ ಫ್ಯಾನ್ ಕಟ್ಟಿಕೊಂಡು ಓಡಾಟ; ವಿಡಿಯೋಗೆ ಫಿದಾ ಆದ ಅಮಿತಾಭ್ ಬಚ್ಚನ್ ಹೇಳಿದ್ದೇನು?

Published : Apr 08, 2023, 02:23 PM ISTUpdated : Apr 08, 2023, 02:26 PM IST
ತಲೆಗೆ ಫ್ಯಾನ್ ಕಟ್ಟಿಕೊಂಡು ಓಡಾಟ; ವಿಡಿಯೋಗೆ ಫಿದಾ ಆದ ಅಮಿತಾಭ್ ಬಚ್ಚನ್ ಹೇಳಿದ್ದೇನು?

ಸಾರಾಂಶ

ತಲೆಗೆ ಫ್ಯಾನ್ ಕಟ್ಟಿಕೊಂಡು ಓಡಾಡುತ್ತಿರುವ ವ್ಯಕ್ತಿಯ ಕ್ರಿಯೆಟಿವಿಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಫಿದಾ ಆಗಿದ್ದಾರೆ. 

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈ ಇಳಿ ವಯಸ್ಸಿನಲ್ಲೂ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 40ಕ್ಕೂ ಅಧಿಕ ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಅಮಿತಾಭ್ ಇಂದಿಗೂ ಬೇಡಿಕೆಯ ನಟ. ಅವರ ಜೊತೆ ನಟಿಸಲು, ಕೆಲಸ ಮಾಡಲು ಅನೇಕ ಕಲಾವಿದರು ತುದಿಗಾಲಿನಲ್ಲಿ ನಿಂತಿದ್ದಾರೆ. ಅಮಿತಾಭ್ ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಸಕ್ರೀಯರಾಗಿದ್ದಾರೆ. ಆಗಾಗ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಸದ್ಯ ಅಮಿತಾಭ್ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋವೊಂದಕ್ಕೆ ಫಿದಾ ಆಗಿರುವ ಅಮಿತಾಭ್ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಲೆಗೆ ಫ್ಯಾನ್ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಬಿಸಿಲು ಜಾಸ್ತಿ ಆಗಿರುವ ಕಾರಣ ವ್ಯಕ್ತಿ ತೆಲೆಗೆ ಫ್ಯಾನ್ ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ತಲೆಯ ಮುಂಭಾಗದಲ್ಲಿ ಫ್ಯಾನ್ ಇದೆ ಹಿಂದೆ ಸೋಲಾರ್ ಪ್ಯಾನಲ್‌ನೊಂದಿಗೆ ತಲೆಗೆ ಕಟ್ಟಲಾಗಿದೆ. ಬೇಸಿಗೆಯಲ್ಲಿ ತನ್ನನ್ನು ತಾನು ತಂಪಾಗಿಸಿಕೊಂಡು ಆರಾಮಾಗಿ ಓಡಾಡುತ್ತಿದ್ದಾರೆ ತಾತ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!

ಅಮಿತಾಭ್ ಕಣ್ಣಿಗೆ ಈ ವಿಡಿಯೋ ಬಿದ್ದಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋಗೆ 'ಭಾರತ ಅವಿಷ್ಕಾರಗಳ ತಾಯಿ'  ಎಂದು ಹೇಳಿದ್ದಾರೆ. ಭಾರತ್ ಮಾತಾ ಕಿ ಜೈ ಎಂದು ಬರೆದುಕೊಂಡಿದ್ದಾರೆ. ಅಮಿತಾಭ್ ಗಮನ ಸೆಳೆದ ಈ ವಿಡಿಯೋಗೆ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆಕಳಿಸುತ್ತಿರುವ ಅಮಿತಾಭ್ ಬಚ್ಚನ್; ಮಧ್ಯರಾತ್ರಿ 3 ಗಂಟೆವರೆಗೂ ಕೆಲಸ ಮಾಡಿದ್ರೆ ಹೀಗೇ ಆಗೋದು ಎಂದ ನಟ

ಶೂಟಿಂಗ್ ವೇಳೆ ಅವಘಡ, ವಿಶ್ರಾಂತಿಯಲ್ಲಿ ಬಿಗ್ ಬಿ

ಹೈದರಾಬಾದ್‌ನಲ್ಲಿ ಶೂಟಿಂಗ್ ವೇಳೆ ಅಮಿತಾಭ್ ಗಾಯಗೊಂಡಿದ್ದರು. ಪ್ರಭಾಸ್ ಮತ್ತು ದೀಪಿಕಾ ನಟನೆಯ ಪ್ರಾಜೆಕ್ಟ್ K ಸಿನಿಮಾದ ಶೂಟಿಂಗ್ ನಲ್ಲಿ ಇದ್ದರು. ಪ್ರಾಜೆಕ್ಟ್ K ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಅಮಿತಾಭ್ ಕೂಡ ಭಾಗಿಯಾಗಿದ್ದರು. ಚಿತ್ರೀಕರಣದ ಆಕ್ಷನ್ ದೃಶ್ಯದ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಅವರ ಪಕ್ಕೆಲುಬಿಗೆ ಏಟು ಬಿದ್ದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದರು. ಬಳಿಕ ಅವರನ್ನು ಹೈದರಾಬಾದ್‌ನಿಂದ ಮುಂಬೈನ ಜಲ್ಸಾ ನಿವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೆ ಶೂಟಿಂಗ್‌ನಲ್ಲಿ ಭಾಗಿಯಾಗಲು ಅಮಿತಾಭ್ ಕಾಯುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?