ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್; ಮೊಬೈಲ್ ಒಡೆದು ಹಾಕ್ತೀನೆಂದು ಸಿಟ್ಟಿಗೆದ್ದ ನಯನತಾರಾ

Published : Apr 08, 2023, 12:41 PM IST
ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್; ಮೊಬೈಲ್ ಒಡೆದು ಹಾಕ್ತೀನೆಂದು ಸಿಟ್ಟಿಗೆದ್ದ ನಯನತಾರಾ

ಸಾರಾಂಶ

ಸೆಲ್ಫಿಗಾಗಿ ಅಭಿಮಾನಿಗಳು ನಯನತಾರಾ ಮತ್ತು ವಿಘ್ನೇಶ್ ಬಳಿ ಮುಗಿಬಿದ್ದರು. ಕೋಪಗೊಂಡ ನಯನತಾರಾ ಮೊಬೈಲ್ ಒಡೆದು ಹಾಕ್ತೀನೆಂದು ಎಚ್ಚರಿಕೆ ನೀಡಿದರು. 

ಸೌತ್ ಸ್ಟಾರ್ ನಟಿ ನಯನತಾರಾ ಸದ್ಯ ಸಿನಿಮಾ ಜೊತೆಗೆ ಇಬ್ಬರೂ ಮಕ್ಕಳ ಆರೈಕೆಯಲ್ಲಿ ಬ್ಯುಸಿಗಿದ್ದಾರೆ. ಆಗಾಗ ಪತಿ ವಿಘ್ನೇಶ್ ಶಿವನ್ ಜೊತೆ ಕಾಣಿಸಿಕೊಳ್ಳುವ ನಯನತಾರಾ ಇಬ್ಬರು ಮಕ್ಕಳ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಆದರೆ ಆಗಾಗ ಮುಖ ತೋರಿಸದೆ ಟ್ವಿನ್ ಮಕ್ಕಳ ಫೋಟೋ  ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಜೊತೆ ಕುಂಭಕೋಣಂ ಬಳಿಯ ಕಾಮಾಕ್ಷಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಯನತಾರಾ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟಿಯನ್ನು ನೋಡಲು ಮುಗಿಬಿದ್ದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. 

ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾಮುಂದೆ ತಾಮುಂದೆ ಎಂದು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳು ಶಾಂತವಾಗಿ ಇರುವಂತೆ ಮನವಿ ಮಾಡಿದರು. ಆದರೂ ಕೇಳದ ಅಭಿಮಾನಿಗಳು ಒಮ್ಮೆಗೆ ನುಗ್ಗಿದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ನಯನತಾರಾ ಮತ್ತು ವಿಘ್ನೇಶ್ ಬೇಗನೇ ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಟರು. 

ಎಲ್ಲಿಂದ ಸ್ಟಾರ್ ಜೋಡಿ ಟ್ರೈನ್ ಏರಿದರು. ರೈಲ್ವೇ ಸ್ಟೇಷನ್‌ಗೆ ನಯನತಾರಾ ದಂಪತಿ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ಅಲ್ಲಿಯೂ ಸುತ್ತುವರೆದರು. ಕೆಲವರು ಎಷ್ಟು ಹೇಳಿದರೂ ಕೇಳದೆ ನಯನತಾರಾ ಹಿಂದೆಯೇ ಓಡಿದರು. ತನ್ನ ಮೊಬೈಲ್‌ನಲ್ಲಿ ನಯನತಾರಾ ಅವರ ವಿಡಿಯೋ ಸೆರೆಹಿಡಿಯುತ್ತಾ ಸ್ಟಾರ್ ಜೋಡಿ ಜೊತೆ ಸಾಗಿದರು. ಅಭಿಮಾನಿಗಳ ವರ್ತನೆ ನೋಡಿದ ನಯನತಾರಾ ಸರಿಯಾಗಿ ವಾರ್ನ್ ಮಾಡಿದರು. ಮೊಬೈಲ್ ಕಿತ್ತೆಸೆಯುವುದಾಗಿ ಜೋರಾಗಿ ಗದರಿದರು. 

ಅವಳಿ ಮಕ್ಕಳ ಪೂರ್ಣ ಹೆಸರು ರಿವೀಲ್ ಮಾಡಿದ ನಯನತಾರಾ; ಫೋಟೋ ಹಂಚಿಕೊಂಡ ವಿಘ್ನೇಶ್‌

ರೆಕಾರ್ಡಿಂಗ್ ಮಾಡುವುದನ್ನು ನಿಲ್ಲಿಸದಿದ್ದರೇ ಫೋನ್ ಅನ್ನು ಮುರಿದು ಹಾಕುತ್ತೇನೆ ಎಂದು  ನಯನತಾರಾ ಸಿಟ್ಟಿಗೆದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಹೀಗೆ ವರ್ತಿಸುವುದು ಸಾಮಾನ್ಯ. ನೆಚ್ಚಿನ ಕಲಾವಿದರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳು, ಅವರನ್ನು ನೋಡಲು ಅಭಿಮಾನಿಗಳಿಗೆ ಸಂತಸ, ಸಂಭ್ರಮ. ಆದರೆ ಮಿತಿ ಮೀರಿದ್ರೆ ಗಣ್ಯರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ.

ಪರ್ಪಲ್‌ ಬಣ್ಣದ ಸೀರೆಯಲ್ಲಿ ಮಿಂಚಿದ ನಯನತಾರಾ; ಬೆಲೆ ಕೇಳಿ ಹೆಣ್ಣುಮಕ್ಕಳು ಶಾಕ್...

ನಯನತಾರಾ ಸದ್ಯ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ನಯನತಾರಾ ಹಿಂದಿ ಸಿನಿಮಾ ಮಾಡುತ್ತಿದ್ದು ಶಾರುಖ್ ಜೊತೆ ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಸದ್ಯದಲ್ಲೇ ನಯನತಾರಾ ಮತ್ತು ಶಾರುಖ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್
ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!