ಗುಡ್ ನ್ಯೂಸ್ ನೀಡಿದ ಸಲ್ಮಾನ್ ಖಾನ್- ಪೂಜಾ ಹೆಗ್ಡೆ; ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

By Shruthi KrishnaFirst Published Apr 8, 2023, 1:12 PM IST
Highlights

ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ಸಲ್ಮಾನ್ ಬೇರೆ ಬೇರೆ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ಸಲ್ಮಾನ್ ಸದ್ಯ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. 

ಸಲ್ಮಾನ್ ಮತ್ತು ಪೂಜಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿದೆ. ಈ ನಡುವೆ ಸಿಹಿ ಸುದ್ದಿನಾ ಅಂತ ಅಚ್ಚರಿ ಆಗ್ತಿದಿಯಾ ಇಬ್ಬರೂ ಗುಡ್ ನ್ಯೂಸ್ ಕೊಡುತ್ತಿರುವುದು ಸಿನಿಮಾ ವಿಚಾರಕ್ಕೆ. ಹೌದು ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾದ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಬಹುನಿರೀಕ್ಷೆಯ ಈ ಸಿನಿಮಾದ ಟ್ರೈಲರ್ ಇದೇ ತಿಂಗಳು ಅಂದರೆ ಏಪ್ರಿಲ್ 10ರಂದು ರಿಲೀಸ್ ಆಗಲಿದೆ. ಈ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿದೆ. 

Latest Videos

ಪೂಜಾ ಹೆಗ್ಡೆ ಮತ್ತು ಸಲ್ಮಾನ್ ಖಾನ್ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಸಿನಿಮಾವಿದು. ಈಗಾಗಲೇ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದರಲ್ಲೂ ಸಲ್ಮಾನ್ ಖಾನ್ ತೆರೆಮೇಲೆ ಬರದೆ ವರ್ಷದ ಮೇಲಾಗಿದೆ. ಅತಿಥಿ ಪಾತ್ರಗಳ ಮೂಲಕ ಸಲ್ಮಾನ್ ಖಾನ್  ಅಭಿಮಾನಿಗಳ ಮುಂದೆ ಬಂದಿದ್ದರು. ಹಾಗಾಗಿ ಬ್ಯಾಡ್ ಬಾಯ್ ತೆರೆಮೇಲೆ ಅಬ್ಬರಿಸುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ರಾಮ್ ಚರಣ್-ವೆಂಕಟೇಶ್ ಜೊತೆ ಸಲ್ಮಾನ್ ಮಸ್ತ್ ಲುಂಗಿ ಡಾನ್ಸ್; ಪಂಚೆ ಕಟ್ಟಿ ಕುಣಿದ ಪೂಜಾ ಹೆಗ್ಡೆ

ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾದಿಂದ ಇತ್ತೀಚೆಗಷ್ಟೆ 'ಯೆಂಟಮ್ಮಾ..' ಲುಂಗಿ ಡಾನ್ಸ್ ಹಾಡು ರಿಲೀಸ್ ಆಗಿತ್ತು. ಈ ಹಾಡಿನಲ್ಲಿ ಸಲ್ಮಾನ್ ಖಾನ್ ಜೊತೆ ಸೌತ್ ಸ್ಟಾರ್ಸ್ ಕೂಡ ಹೆಜ್ಜೆ ಹಾಕಿದ್ದಾರೆ. ತೆಲುಗು ಸ್ಟಾರ್‌ಗಳಾದ ವೆಂಕಟೇಶ್ ಮತ್ತು ರಾಮ್ ಚರಣ್ ಹಾಡಿನಲ್ಲಿ ಕುಣಿದಿದ್ದಾರೆ. ಮೊದಲ ಬಾರಿಗೆ ಈ ಮೂವರು ಸ್ಟಾರ್ಸ್ ಒಟ್ಟಿಗೆ ನಟಿಸಿದ್ದಾರೆ. ಈ ಹಾಡು ಪಕ್ಕಾ ದಕ್ಷಿಣ ಭಾರತೀಯ ಸಿನಿಮಾರಂಗದ ಸೈಲಿಯಲ್ಲಿ ಮೂಡಿ ಬಂದಿದೆ. ಪಂಚೆ ಎತ್ತಿಕಟ್ಟಿ ಮಸ್ತ್ ಡಾನ್ಸ್ ಮಾಡಿದ್ದಾರೆ.

Trailer out on April 10th. pic.twitter.com/c404e64w9Y

— Salman Khan (@BeingSalmanKhan)

ಅಭಿಮಾನಿಗಳ ಹೃದಯ ಗೆದ್ದ ಸಲ್ಮಾನ್ ಖಾನ್ ಈ ನಡೆ; ವಿಡಿಯೋ ವೈರಲ್

ಬಹುನಿರೀಕ್ಷೆಯ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದೆ. ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಗದೆ ವರ್ಷದ ಮೇಲಾಗಿದೆ. ಕೊನೆಯದಾಗಿ ಪಠಾಣ್ ಸಿನಿಮಾದ ಅತಿಥಿ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.  

click me!