Projeck K ಸಿನಿಮಾದ ಶೂಟಿಂಗ್​ ವೇಳೆ ಗಾಯಗೊಂಡಿದ್ದ ಅಮಿತಾಭ್​ ಹೇಗಿದ್ದಾರೆ?

Published : Mar 07, 2023, 08:40 PM IST
Projeck K ಸಿನಿಮಾದ ಶೂಟಿಂಗ್​ ವೇಳೆ ಗಾಯಗೊಂಡಿದ್ದ ಅಮಿತಾಭ್​ ಹೇಗಿದ್ದಾರೆ?

ಸಾರಾಂಶ

'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ಅಮಿತಾಭ್​ ಬಚ್ಚನ್​ ಆರೋಗ್ಯ ಈಗ ಹೇಗಿದೆ? ಖುದ್ದು ನಟ ಕೊಟ್ಟಿದ್ದಾರೆ ಮಾಹಿತಿ...  

ಬಾಲಿವುಡ್ ಬಿಗ್​ ಬಿ ಅಮಿತಾಭ್ ಬಚ್ಚನ್ (Amitabh Bachchan) ನಿನ್ನೆ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಸದ್ಯ ಪ್ರಭಾಸ್ ಮತ್ತು ದೀಪಿಕಾ ನಟನೆಯ 'ಪ್ರಾಜೆಕ್ಟ್ ಕೆ' (Projeck K) ಸಿನಿಮಾದ ನಿಮಿತ್ತ ಹೈದರಾಬಾದ್ ನಲ್ಲಿ ಶೂಟಿಂಗ್​ನಲ್ಲಿ  ಅಮಿತಾಭ್  ಭಾಗಿಯಾಗಿದ್ದರು. ಚಿತ್ರೀಕಕಣದ ಆಕ್ಷನ್ ದೃಶ್ಯದ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಪಕ್ಕೆಲುಬಿಗೆ ಬಲವಾಗಿ ಏಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಲಾಗಿದೆ. ಸದ್ಯ ಅಮಿತಾಭ್ ಹೈದರಾಬಾದ್‌ನಿಂದ ಮುಂಬೈಗೆ ತೆರಳಿದ್ದು ಜಲ್ಸಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ, 'ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದಲ್ಲಿ, ಆಕ್ಷನ್ ಶಾಟ್ ಸಮಯದಲ್ಲಿ, ನಾನು ಗಾಯಗೊಂಡಿದ್ದೇನೆ, ಹೈದರಾಬಾದ್‌ನಲ್ಲಿ. ಮನೆಗೆ ಹಿಂತಿರುಗಿದ್ದೇನೆ. ಸ್ಟ್ರಾಪಿಂಗ್ ಮಾಡಲಾಗಿದೆ ಸದ್ಯ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ' ಎಂದು ಬರೆದುಕೊಂಡಿದ್ದರು. 

ಇದೀಗ ಅಮಿತಾಭ್​ ಅವರು, ತಮ್ಮ ಆರೋಗ್ಯದ ಕುರಿತು ಅಪ್​ಡೇಟ್​  (Update) ಕೊಟ್ಟಿದ್ದಾರೆ. ತಮ್ಮ  ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಅವರು  ತಮ್ಮ ಗಾಯದ ಬಗ್ಗೆ ತಿಳಿದ ನಂತರ ಅಭಿಮಾನಿಗಳು ತೋರಿಸಿದ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞರಾಗಿರುವುದಾಗಿ ಹೇಳಿದ್ದಾರೆ. "ನಾನು ಕ್ರಮೇಣ ಪ್ರಗತಿ ಹೊಂದುತ್ತಿದ್ದೇನೆ. ಯಾರೂ ಆತಂಕ ಪ ಡುವ ಅಗತ್ಯವಿಲ್ಲ. ಸ್ವಲ್ಪ  ಸಮಯ ತೆಗೆದುಕೊಳ್ಳುತ್ತದೆ.  ವೈದ್ಯರು ಮಾಡಿರುವ ಶಿಫಾರಸುಗಳನ್ನು ನಾನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇನೆ. ಸದ್ಯ ಎಲ್ಲಾ ಕೆಲಸಗಳನ್ನೂ ಸ್ಥಗಿತಗೊಳಿಸಿದ್ದೇನೆ' ಎಂದಿದ್ದಾರೆ ಬಿಗ್​ ಬಿ. 

Breaking; ಶೂಟಿಂಗ್ ವೇಳೆ ಅವಘಡ; ಅಮಿತಾಭ್ ಬಚ್ಚನ್‌ಗೆ ಗಂಭೀರ ಗಾಯ

ಇದೇ ವೇಳೆ, ಸೋಮವಾರ ರಾತ್ರಿ ತಮ್ಮ ಮುಂಬೈ ನಿವಾಸ ಜಲ್ಸಾದಲ್ಲಿ ನಡೆದ ಹೋಲಿಕಾ ಆಚರಣೆಗಳ ಬಗ್ಗೆ ನಟ ಜನರಿಗೆ ಮಾಹಿತಿ ನೀಡಿದರು.  "ಜಲ್ಸಾದಲ್ಲಿ (Julsa) ನಿನ್ನೆ ರಾತ್ರಿ ಹೋಲಿಕಾ ದಹನ ನಡೆಯಿತು.  ಹೋಳಿಗೆ ದಿನದ ಕುರಿತು  ದಿನಾಂಕದ ಗೊಂದಲವಿತ್ತು. ಹೋಳಿ ಇಂದೋ ನಾಳೆಯೋ ಎಂದು ಗೊಂದವಿತ್ತು.  ಆದ್ದರಿಂದ ಈ ಗೊಂದಲದಲ್ಲಿ ಹೆಚ್ಚು ಏನು ಮಾಡಬಹುದಿತ್ತೋ ಅದನ್ನು ಮಾಡಲಾಗಲಿಲ್ಲ. ಸದ್ಯ ವಿಶ್ರಾಂತಿ ಪಡೆಯುತ್ತಿದ್ದೇನೆ.  ಈ ಸಂತೋಷದಾಯಕ ಹಬ್ಬದ ಆಚರಣೆಗೆ ನನ್ನ ಹಾರೈಕೆಗಳು ನಿಮ್ಮೊಂದಿಗಿದೆ.  ಹೋಳಿಯ ಬಣ್ಣಗಳು ನಿಮ್ಮ ಜೀವನದಲ್ಲಿ ಬಹುಮುಖಿ ಬಣ್ಣಗಳನ್ನು ತರಲಿ ಎಂದು ನಟ ಅಮಿತಾಭ್​ ಬರೆದುಕೊಂಡಿದ್ದಾರೆ. ಶೀಘ್ರದಲ್ಲೇ, ಅಭಿಷೇಕ್ ಬಚ್ಚನ್ (Abhishek Bacchan) ತಮ್ಮ ಮನೆ ಜಲ್ಸಾದಲ್ಲಿ ನಡೆದ ಹೋಲಿಕಾ ದಹನ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದಾರೆ.
 
'ಸದ್ಯ ನಾನು ಮಾಡಬೇಕಾಗಿದ್ದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದ್ದೀನಿ. ನಾನು ಗುಣಮುಖವಾಗುವವರೆಗೂ ಮುಂದೂಡಲಾಗಿದೆ. ನಾನು ಜಲ್ಸಾದಲ್ಲಿ ವಿಶ್ರಾಂತಿ ಪಡೆಯುತ್ತೇನೆ ಮತ್ತು ಎಲ್ಲಾ ಅಗತ್ಯ ಚಟುವಟಿಕೆಗಳಿಗೆ ನಾನು ಮೊಬೈಲ್ ಬಳಸುತ್ತಿದ್ದೀನಿ. ನಾನು ವಿಶ್ರಾಂತಿಯಲ್ಲಿದ್ದೀನಿ ಮತ್ತು ಸಾಮಾನ್ಯವಾಗಿ ಮಲಗಿದ್ದೇನೆ. ಕಷ್ಟವಾಗುತ್ತದೆ ಅಥವಾ ಹೇಳುತ್ತೇನೆ. ನಾನು ಇಂದು ಸಂಜೆ ಜಲ್ಸಾ ಗೇಟ್‌ನಲ್ಲಿ ಹಿತೈಷಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬರಬೇಡಿ. ಬರುವ ಉದ್ದೇಶವಿರುವವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಮಾಹಿತಿ ನೀಡಿ. ಉಳಿದೆಲ್ಲವೂ ಚೆನ್ನಾಗಿದೆ' ಎಂದು ನಿನ್ನೆ ಅವರು ಹೇಳಿದ್ದು, ಇದೀಗ ಅದರ ಅಪ್​ಡೇಟ್​ ಕೊಟ್ಟಿದ್ದಾರೆ. 

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!

ಇನ್ನು 'ಪ್ರಾಜೆಕ್ಟ್ ಕೆ' ಕುರಿತು ಹೇಳುವುದಾದರೆ, ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ದೀಪಿಕಾ ಮತ್ತು ಬಿಗ್ ಬಿ ಜೊತೆ ಪ್ರಭಾಸ್ ಅವರ ಮೊದಲ ಚಿತ್ರವಾಗಿದೆ. ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ 'ಪ್ರಾಜೆಕ್ಟ್ ಕೆ', ದೀಪಿಕಾ ಅವರ ತೆಲುಗು ಚಲನಚಿತ್ರ ಚೊಚ್ಚಲ ಮತ್ತು ಪ್ರಭಾಸ್ ಅವರ ಮೊದಲ ಚಲನಚಿತ್ರವಾಗಿದೆ. ಈ ಸಿನಿಮಾದಿಂದ ಒಂದು ಪೋಸ್ಟರ್ ಬಿಟ್ಟರೇ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ಚಿತ್ರವು ಜನವರಿ 12, 2024 ರಂದು ಥಿಯೇಟರ್‌ಗಳಿಗೆ ಬರಲಿದೆ. ನಾಗ್ ಅಶ್ವಿನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಮಿತಾಭ್ ಕಳೆದ 5 ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅಮಿತಾಭ್ ಅವರಿಗೆ ಅನೇಕರು ಟ್ವೀಟ್ ಮಾಡಿ ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?