
ನಟಿ ಕಂಗನಾ ರಣಾವತ್ ಅವರಿದೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾಗಳಲ್ಲಿ ಕ್ವೀನ್ ಸಿನಿಮಾ ಕೂಡ ಒಂದು. 2014ರಲ್ಲಿ ತೆರೆಗೆ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಕಂಗನಾ ಅದ್ಭುತವಾಗಿ ನಟಿಸಿದ್ದರು. ಕಂಗನಾ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇಂದಿಗೂ ಕಂಗನಾ ಅವರನ್ನು ಕ್ವೀನ್ ನಟಿ ಎಂದೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಆ ಸಿನಿಮಾ ಸಕ್ಸಸ್ ಕಂಡಿತ್ತು. ಆ ಸಿನಿಮಾ ಬಗ್ಗೆ ಈಗ್ಯಾಕೆ ಅಂತೀರಾ? ಕ್ವೀನ್ ರಿಲೀಸ್ ಆಗಿ 9 ವರ್ಷಗಳಾಗಿದೆ. ಕ್ವೀನ್ ಸಿನಿಮಾದ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. 9 ವರ್ಷಗಳ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ.
ವಿಕಾಸ್ ಬಹ್ಲ್ ನಿರ್ದೇಶನದಲ್ಲಿ ಬಂದ ಕ್ವೀನ್ ಸಿನಿಮಾದಲ್ಲಿ ರಾಜ್ ಕುಮಾರ್ ರಾವ್ ಹಾಗೂ ಲೀಲಾ ಹೇಡನ್ ಕೂಡ ನಟಿಸಿದ್ದಾರೆ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿತ್ತು, ದೊಡ್ಡ ಮಟ್ಟದ ಲಾಭ ಗಳಿಸಿತ್ತು. 2014ರ ಅತೀ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾವಾಗಿತ್ತು. ಕ್ವೀನ್ ಸಿನಿಮಾದ ಬಗ್ಗೆ ನಟಿ ಕಂಗನಾ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
ಹೀರೊಗಳು ಕರೆದಕೂಡ್ಲೇ ಕೋಣೆಗೆ ಹೋಗ್ಬೇಕು- ಬಾಲಿವುಡ್ ಕರಾಳ ಮುಖ ಬಿಚ್ಚಿಟ್ಟ Kangana Ranaut
ಕ್ವೀನ್ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಎಂದು ರಿವೀಲ್ ಮಾಡಿರುವ ಕಂಗನಾ, ಹಣಕ್ಕಾಗಿ ಮಾತ್ರ ಆ ಸಿನಿಮಾವನ್ನು ಮಾಡಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ಸುಮಾರು ದಶಕದ ಹೋರಾಟದ ಬಳಿಕ ನನಗೆ ಬಾಲಿವುಡ್‌ನ ಉತ್ತಮ ನಟಿ ಎಂದು ಹೇಳಲಾಯಿತು. ಗುಂಗುರು ಕೂದಲು ಮತ್ತು ಕೆಟ್ಟ ಧ್ವನಿಯು ಇನ್ನಷ್ಟು ಹದಗೆಡಿಸಿತು. ಇದು ಎಂದಿಗೂ ಬಿಡುಗಡೆಯಾಗುವುದಿಲ್ಲ ಎಂದು ಭಾವಿಸಿ ನಾನು ಕ್ವೀನ್‌ಗೆ ಸಹಿ ಮಾಡಿದ್ದೆ. ಆ ಹಣದಿಂದ ನಾನು ನ್ಯೂಯಾರ್ಕ್‌ನಲ್ಲಿರುವ ಚಲನಚಿತ್ರ ಶಾಲೆಗೆ ಹೋದೆ' ಎಂದು ಹೇಳಿಕೊಂಡಿದ್ದಾರೆ.
ಪ್ರತಿದಿನ ನನ್ನ ತಾಯಿ ಹೊಲದಲ್ಲಿ ಕೆಲಸ ಮಾಡ್ತಾಳೆ; ಸಿನಿಮಾ ಮಾಫಿಯಾ ಗ್ಯಾಂಗ್ ವಿರುದ್ಧ ಕಂಗನಾ ಕಿಡಿ
ಮತ್ತೊಂದು ಟ್ವೀಟ್ ನಲ್ಲಿ ಕಂಗನಾ, 'ನ್ಯೂಯಾರ್ಕ್‌ನಲ್ಲಿ, ನಾನು ಸ್ಕ್ರೀನ್‌ರೈಟಿಂಗ್ ಅಧ್ಯಯನ ಮಾಡಿದೆ, 24 ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಒಂದು ಸಣ್ಣ ಚಲನಚಿತ್ರವನ್ನು ನಿರ್ದೇಶಿಸಿದೆ, ಅದು ನನಗೆ ಹಾಲಿವುಡ್‌ನಲ್ಲಿ ಪ್ರಗತಿಯನ್ನು ನೀಡಿತು, ನನ್ನ ಕೆಲಸವನ್ನು ನೋಡಿದ ನಂತರ ದೊಡ್ಡ ಸಂಸ್ಥೆ ನನ್ನನ್ನು ನಿರ್ದೇಶಕರನ್ನಾಗಿ ನೇಮಿಸಿತು. ನಾನು ನನ್ನ ಎಲ್ಲಾ ನಟನಾ ಮಹತ್ವಾಕಾಂಕ್ಷೆಗಳನ್ನು ಸಮಾಧಿ ಮಾಡಿದೆ, ಭಾರತಕ್ಕೆ ಮರಳುವ ಧೈರ್ಯವನ್ನು ಹೊಂದಿರಲಿಲ್ಲ. ಲಾಸ್ ಏಂಜಲೀಸ್‌ನ ಹೊರವಲಯದಲ್ಲಿ ಒಂದು ಸಣ್ಣ ಮನೆಯನ್ನು ಖರೀದಿಸಿದೆ ಎಂದು ಕಂಗನಾ ಬಹಿರಂಗಪಡಿಸಿದರು. ನಂತರ ಕ್ವೀನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಕ್ವೀನ್ ಕಂಗನಾ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.