ಅನಾವಶ್ಯಕ ಫೋನ್ ಕರೆಗಳು; ಲೆನ್ಸ್‌ಕಾರ್ಟ್ ವಿರುದ್ಧ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕಿ ಕೇಜ್ ಕಿಡಿ

By Shruthi KrishnaFirst Published Mar 7, 2023, 5:18 PM IST
Highlights

ಅನಾವಶ್ಯಕ ಫೋನ್ ಕರೆಗಳು ಬರುತ್ತಿವೆ ಎಂದು ಪ್ರತಿಷ್ಠಿತ ಲೆನ್ಸ್‌ಕಾರ್ಟ್ ಸಂಸ್ಥೆ ವಿರುದ್ಧ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕಿ ಕೇಜ್ ಕಿಡಿ ಕಾರಿದ್ದಾರೆ. 

ಖ್ಯಾತ ಸಂಗೀತ ಸಂಯೋಜಕ, ಬೆಂಗಳೂರು ಮೂಲದ ರಿಕಿ ಕೇಜ್  ಟೆಲಿಮಾರ್ಕೆಟಿಂಗ್ ಕರೆಗಳ ವಿರುದ್ಧ ಕಿಡಿ ಕಾರಿದ್ದಾರೆ. ಟೆಲಿಮಾರ್ಕೆಟಿಂಗ್ ಕರೆಗಳ ಪದೇ ಪದೇ ಫೋನ್ ಮಾಡುವುದರಿಂದ ಅನೇಕರಿಂಗ ಕಿರಿಕಿರಿ ಉಂಟುಮಾಡುತ್ತದೆ. ಅನಾವಶ್ಯಕ ಕರೆಗಳ ವಿರುದ್ಧ ಅನೇಕರು ಅಸಮಾಧಾನ ಹೊರಹಾಕುತ್ತಿದ್ದರು. ಇದೀಗ ಸಂಗೀತ ಲೋಕದ ದಿಗ್ಗಜ 3 ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ವಿನ್ನರ್ ರಿಕಿ ಕೇಜ್ ಅಸಮಾಧಾನ ಹೊರ ಹಾಕಿದ್ದಾರೆ. 

ಗ್ರ್ಯಾಮಿ-ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್ ಲೆನ್ಸ್‌ಕಾರ್ಟ್ ಮತ್ತು ಅದರ ಸಹ-ಸಂಸ್ಥಾಪಕ ಪಿಯೂಶ್ ಬನ್ಸಾಲ್ ಅವರನ್ನು ತರಾಟೆ ತೆಗೆದುಕೊಂಡರು. ಅನಗತ್ಯ ಟೆಲಿಮಾರ್ಕೆಟಿಂಗ್ ಕರೆಗಳಿಂದ ಕಿರುಕುಳ ಮಾಡುತ್ತಿದ್ದಾರೆ ಎಂದು ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ರಿಕಿ ಕೇಜ್ ಲೆನ್ಸ್‌ಕಾರ್ಟ್ ಸಂಸ್ಥೆಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಲೆನ್ಸ್‌ಕಾರ್ಟ್ ಮತ್ತು ಪಿಯೂಶ್ ಬನ್ಸಾಲ್ ಅವರೇ ನಿಮ್ಮ ಬ್ರ್ಯಾಂಡ್ ಬಗ್ಗೆ ನನಗೆ ಗೌರವವಿದೆ ಆದರೆ ನಿರಂತರ ಕಿರುಕುಳ ನಿಲ್ಲಬೇಕು' ಎಂದು ಹೇಳಿದರು. 

Latest Videos

'ಲೆನ್ಸ್‌ಕಾರ್ಟ್‌ನ ವೆಬ್‌ಸೈಟ್‌ನಿಂದ ಖರೀದಿಸಿದ್ದಕ್ಕಾಗಿ ವಿಷಾದಿಸುತ್ತೇನೆ' ಎಂದು ಖ್ಯಾತ ಸಂಗೀತಗಾರ ಹೇಳಿದ್ದಾರೆ. ಫೋನ್ ನಂಬರ್ ಬದಲಾಯಿಸುವುದು ತನ್ನ ಬಳಿ ಉಳಿದಿರುವ ಏಕೈಕ ಪರಿಹಾರವಾಗಿದೆ ಎಂದು ರಿಕಿ ಕೇಜ್ ಅಸಮಾಧಾನ ಹೊರಹಾಕಿದ್ದಾರೆ. 'ನಿಮ್ಮ ಕಂಪನಿಯಲ್ಲಿ ಆರ್ಡರ್ ಮಾಡಿದ್ದಕ್ಕಾಗಿ ನಾನು ಕಿರುಕಿರಿ ಅನುಭವಿಸುತ್ತಿದ್ದೀನಿ. ನಾನು ನನ್ನ ಫೋನ್ ನಂಬರ್ ಬದಲಾಯಿಸ ಬೇಕು ಅಥವಾ ಲೆನ್ಸ್‌ಕಾರ್ಟ್ ಸಂಸ್ಥೆ ಸ್ಥಗಿತಗೊಂಡರೆ ಇದು ನಿಲ್ಲುವ ಏಕೈಕ ಮಾರ್ಗವಾಗಿದೆ ಎಂದು ತೋರುತ್ತಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

Dear .. again, I have respect for your brand, but the constant HARASSMENT HAS TO STOP. I asked multiple times to be removed from your telemarketing database. It was promised.. but I still keep getting calls. Would legal action help?

— Ricky Kej (@rickykej)

ವಸುದೈವ ಕುಟುಂಬಕಂ ಜಾತಿ-ಧರ್ಮಗಳಿಗೆ ಸೀಮಿತವಲ್ಲ, ಪ್ರಕೃತಿಗೂ ಅನ್ವಯ: ರಿಕ್ಕಿ ಕೇಜ್

ಟೆಲಿಮಾರ್ಕೆಟಿಂಗ್ ಡೇಟಾಬೇಸ್‌ನಿಂದ ಅವರ ಫೋನ್ ಸಂಖ್ಯೆಯನ್ನು ತೆಗೆದುಹಾಕುವಂತೆ ಕೇಜ್ ಈ ಹಿಂದೆಯೇ ಲೆನ್ಸ್‌ಕಾರ್ಟ್‌ಗೆ ವಿನಂತಿಸಿದ್ದರು. 'ತೆಗೆಯುವುದಾಗಿ ಭರವಸೆ ನೀಡಲಾಗಿತ್ತು. ಆದರೆ ನನಗೆ ಇನ್ನೂ ಕರೆಗಳು ಬರುತ್ತಿವೆ. ಕಾನೂನು ಕ್ರಮವು ಸಹಾಯ ಮಾಡುತ್ತದೆಯೇ?' ಪ್ರಶ್ನೆ ಮಾಡಿದ್ದಾರೆ. ರಿಕಿ ಕೇಜ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಲೆನ್ಸ್‌ಕಾರ್ಟ್, ಕ್ಷಮೆ ಕೇಳಿದೆ. 

Grammys 2023: 3ನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರಿನ ರಿಕಿ ಕೇಜ್: ಈ ಸಾಧನೆ ಮಾಡಿದ ಏಕೈಕ ಭಾರತೀಯ..!

'ಹಾಯ್ ರಿಕಿ ಕೇಜ್, ಪದೇ ಪದೇ ಕರೆಗಳು ಬರುತ್ತಿರುವುದು ಕಿರಿಕಿರಿ ಉಂಟುಮಾಡುತ್ತವೆ. ನಾವು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಮತ್ತೆ ಸಂಭವಿಸದಂತೆ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಕಾಳಜಿಯನ್ನು ಪರಿಹರಿಸಲಾಗಿದೆ' ಎಂದು ಹೇಳಿದ್ದಾರೆ. ಲೆನ್ಸ್‌ಕಾರ್ಟ್ ಟ್ವೀಟ್‌ಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ರಿಕಿ ಕೇಜ್, 'ನೀವು ಈ ಹಿಂದೆಯೂ ಹಾಗೆ ಮಾಡುತ್ತೇವೆ ಎಂದು ಹೇಳಿದ್ರಿ. ಆಧರೆ ನನಗೆ ಇನ್ನು ಕರೆಗಳು ಬರುತ್ತಿವೆ. ದಯವಿಟ್ಟು ನಿಮ್ಮ ಸಂದೇಶಗಳನ್ನು ಪರಿಶೀಲಿಸಿ' ಎಂದು ಹೇಳಿದ್ದಾರೆ. 

click me!