ಐಶ್ವರ್ಯ ಹೆಸರಿನ ಕಾಲೇಜು ನಿರ್ಮಾಣ ಅರ್ಧಕ್ಕೆ ಕೈಬಿಟ್ಟ ಅಮಿತಾಭ್​! ಸಿಟ್ಟುಗೊಂಡ ಗ್ರಾಮಸ್ಥರು ಮಾಡಿದ್ದೇನು ನೋಡಿ...

By Suchethana DFirst Published Aug 3, 2024, 5:50 PM IST
Highlights

ಸೊಸೆ ಐಶ್ವರ್ಯ ರೈ ಹೆಸರಿನಲ್ಲಿ ಕಾಲೇಜಿನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕೈಕೊಟ್ಟ ಅಮಿತಾಭ್​ ಬಚ್ಚನ್​. ನಟನ ಕುಟುಂಬಕ್ಕೆ ಗ್ರಾಮಸ್ಥರು ಹೀಗೆ ಪಾಠ ಕಲಿಸಿದ್ರು ನೋಡಿ...! 
 

ಕೆಲ ತಿಂಗಳಿನಿಂದ  ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದರು. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡಿತ್ತು.  ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು. 

ಅಲ್ಲಿಂದ ಶುರುವಾಗಿರುವ ಐಶ್​-ಅಭಿಷೇಕ್​ ಬಚ್ಚನ್​ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಏಕೆಂದರೆ ಬಚ್ಚನ್​ ಕುಟುಂಬ ಈ ಸುದ್ದಿಯನ್ನು ತಣ್ಣಗೆ ಮಾಡಲು ಬಿಡುತ್ತಲೇ ಇಲ್ಲ. ಇವರಿಬ್ಬರ ಡಿವೋರ್ಸ್​ ವಿಷಯ ತಣ್ಣಗಾಗುತ್ತಿದೆ ಎಂದು ಅನಿಸಿದಾಗ, ಒಂದೋ ಅಭಿಷೇಕ್​ ಇಲ್ಲವೇ ಐಶ್ವರ್ಯ ಅದೂ ಇಲ್ಲದಿದ್ರೆ ಅಮಿತಾಭ್​ ಸೋಷಿಯಲ್​ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್​  ಹಾಕುವ ಮೂಲಕ ಇವರಿಬ್ಬರೂ ಡಿವೋರ್ಸ್​ ಪಡೆಯುತ್ತಾರೆ ಎಂಬಂತೆ ಹೇಳುತ್ತಿದ್ದಾರೆ. ಇದು ಭಾರಿ ಸುದ್ದಿಯಾಗುತ್ತಲೇ, ದಂಪತಿ ಒಂದಾಗಿರುವ ಫೋಟೋ ಶೇರ್​ ಮಾಡಿಕೊಳ್ಳುತ್ತಾರೆ. ಕೆಲ ತಿಂಗಳಿನಿಂದ ಬಚ್ಚನ್​ ಕುಟುಂಬದ ಆಟ ಮುಂದುವರೆದಿದೆ. ಇದರಲ್ಲಿ ಬಿಗ್​ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್​ ಕೂಡ ಸಾಕಷ್ಟು ಪಾತ್ರ ವಹಿಸುತ್ತಿದ್ದಾರೆ. ಹಿಂದೊಮ್ಮೆ ಕೂಡ ಈ ಫ್ಯಾಮಿಲಿಗೆ ಪ್ರಚಾರದ ಹುಚ್ಚು ಜಾಸ್ತಿಯಾಗಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದರು. ಮದುವೆಯೆಂಬ ಸಂಬಂಧವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಕಷ್ಟು ಟ್ರೋಲ್​ ಕೂಡ ಆಗಿತ್ತು.

Latest Videos

ರಾಜ್ಯಸಭೆಯಲ್ಲಿ ಅಮಿತಾಭ್​ ಬಚ್ಚನ್​ ಹೆಸರು ಹೇಳಿ ಪೇಚಿಗೆ ಸಿಲುಕಿದ ಜಯಾ: ಬಿದ್ದೂ ಬಿದ್ದೂ ನಕ್ಕ ಸ್ಪೀಕರ್​!

ಆದರೆ ಇದೀಗ ಇನ್ನೊಂದು ಇಂಟರೆಸ್ಟಿಂಗ್​ ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ, ಸೊಸೆ ಐಶ್ವರ್ಯಾ ರೈ ಹೆಸರಿನಲ್ಲಿ ಕಾಲೇಜು ಕಟ್ಟುವುದಾಗಿ ಅಮಿತಾಭ್​ ಬಚ್ಚನ್ ಭರವಸೆ ನೀಡಿ ಕೊನೆಗೆ ಕೈಕೊಟ್ಟಿದ್ದಾರೆ ಎನ್ನುವ ಸತ್ಯವಿದು! ಹೌದು. ಅಷ್ಟಕ್ಕೂ ಇದು ನಡೆದದ್ದು ಇಂದು, ನಿನ್ನೆಯಲ್ಲ. ಬದಲಿಗೆ  2008 ರಲ್ಲಿ! ಅಮಿತಾಭ್​ ಬಚ್ಚನ್ ಉತ್ತರ ಪ್ರದೇಶದ ಬಾರಾಬಂಕಿಯ ದೌಲತ್‌ಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ  ಸೊಸೆ ಐಶ್ವರ್ಯಾ ರೈ ಬಚ್ಚನ್ ಹೆಸರಿನಲ್ಲಿ ಪದವಿ ಕಾಲೇಜಿಗೆ ಅಡಿಪಾಯ ಹಾಕಿದ್ದರು. ಆಗ  ಅಮಿತಾಭ್​ ಅವರ  ಇಡೀ ಕುಟುಂಬ ಅಂದರೆ ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ಮತ್ತು ಐಶ್ವರ್ಯ ಜೊತೆಗಿದ್ದರು.  ಆಗ ಸಮಾಜವಾದಿ ಪಕ್ಷದ ನಾಯಕರಾಗಿದ್ದ ಅಮರ್ ಸಿಂಗ್ ಮತ್ತು ಮುಲಾಯಂ ಸಿಂಗ್ ಯಾದವ್ ಕೂಡ  ಭಾಗವಾಗಿದ್ದರು. 

ಅಮಿತಾಭ್​ ಬಚ್ಚನ್ ಅವರು ದೌಲತ್‌ಪುರ ಗ್ರಾಮದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಎಬಿಎಸ್‌ಎಸ್‌ಗೆ 5 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ವರದಿಗಳನ್ನು ನಂಬುವುದಾದರೆ, ಜಯಾ ಬಚ್ಚನ್ ಅಧ್ಯಕ್ಷರಾಗಿರುವ ನಿಷ್ಠಾ ಫೌಂಡೇಶನ್‌ಗೆ ಅವರು ಕಾಲೇಜು ನಿರ್ಮಿಸುವ ಜವಾಬ್ದಾರಿಯನ್ನು ನೀಡಿದ್ದರು. ನಿಷ್ಠಾ ಫೌಂಡೇಶನ್ ಕಾಲೇಜು ನಿರ್ಮಿಸಿಯೇ ಇಲ್ಲ. ಇದಕ್ಕೆ ಕಾರಣ ಕೇಳಿದಾಗ,  ಅಮಿತಾಭ್​  ಬಚ್ಚನ್ ಅವರ ಸೇವಾ ಸಂಸ್ಥೆಯೇ ಕಾರಣ ಎಂದು ಅವರು ಆರೋಪಿಸಿದ್ದರು.  ತಮ್ಮ ಗ್ರಾಮದಲ್ಲಿ ಕಾಲೇಜು ನಿರ್ಮಾಣವಾಗುತ್ತದೆ ಎಂದು  ಗ್ರಾಮಸ್ಥರು ಕಾಯುತ್ತಲೇ ಇದ್ದರು. ಸಾಲದು ಎನ್ನುವುದಕ್ಕೆ ಕಾಲೇಜು ನಿರ್ಮಾಣಕ್ಕೆಂದು  ಗ್ರಾಮದ ಶಿಕ್ಷಕರೊಬ್ಬರ ತಂದೆ ಕಾಲೇಜು  10 ಸಾವಿರ ಚದರ ಮೀಟರ್‌ಗೂ ಹೆಚ್ಚು ಜಾಗವನ್ನು ದಾನ ಮಾಡಿದ್ದರು. ಆದರೂ ಅಮಿತಾಭ್​ ಭರವಸೆಯನ್ನು ಈಡೇರಿಸಲೇ ಇಲ್ಲ! 

ಐಶ್​- ಅಭಿ ಡಿವೋರ್ಸ್ ಎಂಬ​ ಆಟ : ಇಷ್ಟು ದೊಡ್ಡ ಸ್ಟಾರ್​ ಆಗಿ ಇಂಥ ಚೀಪ್​ ಗಿಮಿಕ್ಕಾ? ಅಮಿತಾಭ್​ ಫ್ಯಾಮಿಲಿ ವಿರುದ್ಧ ಆಕ್ರೋಶ!

ಕೊನೆಗೆ ಅಮಿತಾಭ್​ ಬಚ್ಚನ್ ಅವರ ಪ್ರತಿಷ್ಠಾನವು ಕಾಲೇಜಿನ ಕೆಲಸವನ್ನು ನಿಲ್ಲಿಸಿತು, ಇನ್ನು ಇಲ್ಲಿ ಕಾಲೇಜು ನಿರ್ಮಾಣದ ಕನಸು ನನಸಾಗುವುದಿಲ್ಲ ಎಂದು ಅರಿತರು ಗ್ರಾಮಸ್ಥರು. ಇದೇ ಕಾರಣಕ್ಕಾಗಿ ಬುದ್ಧಿ ಕಲಿಸುವ ಪಣ ತೊಟ್ಟರು.  ದೌಲತ್‌ಪುರದ ಜನರು ಇನ್ನೊಂದು ಕಾಲೇಜು ನಿರ್ಮಾಣಕ್ಕೆ  ದೇಣಿಗೆ ಸಂಗ್ರಹಿಸಿದರು. ಅಷ್ಟೇ ಅಲ್ಲ. ಅಮಿತಾಭ್ ಬಚ್ಚನ್ ಅವರ ಕಾಲೇಜು ನಿರ್ಮಾಣವಾಗಲಿರುವ ಜಾಗಕ್ಕೆ ಅತ್ಯಂತ ಸಮೀಪದಲ್ಲಿಯೇ ಅವರು ಕಾಲೇಜನ್ನು ನಿರ್ಮಿಸಿ ಏಟು ನೀಡಿದ್ದಾರೆ. ಇಷ್ಟಾದರೂ  ಇಲ್ಲಿಯವರೆಗೆ ಅಮಿತಾಭ್​  ಬಚ್ಚನ್ ಅವರ ಕಾಲೇಜು ಅಲ್ಲಿಯೇ ನಿಂತಿದೆ. ಇದರ ನಡುವೆಯೇ ಡಿವೋರ್ಸ್​ ಬಗ್ಗೆ ದಿನಕ್ಕೊಂದರಂತೆ ಬಚ್ಚನ್​ ಫ್ಯಾಮಿಲಿ ಆಟವಾಡುತ್ತಿದೆ ಎನ್ನುವ ಆರೋಪವೂ ಇದೆ!  

 

click me!