ಜಗತ್ ದೇಸಾಯಿ ಅವರನ್ನು ಮದುವೆಯಾಗುತ್ತಲೇ ಅಮ್ಮ ಆಗುತ್ತಿರುವ ವಿಷಯ ತಿಳಿಸಿದ ಹೆಬ್ಬುಲಿ ನಟಿ ಅಮಲಾ ಪೌಲ್, ಅದರ ರಹಸ್ಯ ಈಗ ಬಿಚ್ಚಿಟ್ಟಿದ್ದಾರೆ
ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಹುಭಾಷಾ ತಾರೆ ಅಮಲಾ ಪೌಲ್, ಸದ್ಯ ಮಗುವಿನ ಅಮ್ಮ ಆಗಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಇವರು ಬಹಳ ಸುದ್ದಿಯಲ್ಲಿ ಇದ್ದುದು ಮದುವೆಯಾದ ಒಂದೇ ತಿಂಗಳಿಗೆ ಗರ್ಭಿಣಿಯಾಗಿದ್ದರಿಂದ. ಅಷ್ಟಕ್ಕೂ ಅಮಲಾ ಅವರಿಗೆ ಇದು ಎರಡನೆಯ ಮದುವೆ. 2014 ರಲ್ಲಿ ನಟಿ, ನಿರ್ದೇಶಕ ಎ.ಎಲ್ ವಿಜಯ್ ಅವರನ್ನು ವಿವಾಹವಾದ್ದರು. ಆದರೆ ಮೂರು ವರ್ಷಗಳಲ್ಲಿಯೇ ಡಿವೋರ್ಸ್ ಪಡೆದುಕೊಂಡರು. ಬಳಿಕ 2023ರಲ್ಲಿ ಜಗತ್ ದೇಸಾಯಿ ಅವರನ್ನು ಮದುವೆಯಾಗಿ, ಒಂದೇ ತಿಂಗಳಿನಲ್ಲಿ ಗರ್ಭಿಣಿಯಾಗಿ ಸುದ್ದಿಯಾಗಿದ್ದರು. ಬಳಿಕ ನಟಿ ಮದುವೆಯಾದ ಬಳಿಕ ಗರ್ಭಿಣಿಯಾಗಿದ್ದಲ್ಲ, ಬದಲಿಗೆ ಗರ್ಭಿಣಿಯಾದ ಬಳಿಕ ಮದುವೆಯಾಗಿದ್ದು ಎನ್ನುವ ಗುಟ್ಟನ್ನು ಹೇಳಿದ್ದಾರೆ. ಮೊದಲ ಮದುವೆಯಿಂದ ತುಂಬಾ ನೊಂದುಕೊಂಡಿದ್ದೆ. ಮದುವೆ ಬೇಡ ಎಂದುಕೊಂಡಿದ್ದೆ. ಆಗ ಜಗತ್ ನನ್ನ ಬಾಳಲ್ಲಿ ಬಂದರು. ಅವರಿಗೆ ತುಂಬಾ ಅರ್ಜೆಂಟ್ ಇತ್ತು ಎಂದು ನಗುತ್ತಲೇ ನಟಿ, ಅವರನ್ನು ಭೇಟಿಯಾದ ಒಂದೇ ತಿಂಗಳಿನಲ್ಲಿ ಗರ್ಭ ಧರಿಸಿದೆ. ಆ ನಂತರ ಮದುವೆಯಾಯಿತು ಎಂದು ಹೇಳಿದ್ದಾರೆ.
ಅಂದಹಾಗೆ ನಟಿ ಅಮಲಾ, ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಸದಾ ಬಟ್ಟೆಯಿಂದ, ಎಡವಟ್ಟು ಹೇಳಿಕೆಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಅಮಲಾ ಅವರ 'ಲೆವೆಲ್ ಕ್ರಾಸ್' ಸಿನಿಮಾ ಈಚೆಗೆ ರಿಲೀಸ್ ಆಗಿದೆ. ಈ ಸಿನಿಮಾವನ್ನು ಕಥೆ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಸಿನಿಮಾ ಹಣ ಗಳಿಕೆಯಲ್ಲಿ ಅಂದುಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಇದೇ ಸಿನಿಮಾದ ಪ್ರಚಾರದ ವೇಳೆ ಅಮಲಾ ಪೌಲ್ ತುಂಡು ಉಡುಗೆ ತೊಟ್ಟು ಪ್ರಚಾರಕ್ಕೆ ಹೋಗಿದ್ದರು. ಆ ವೇಳೆನೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಅದ್ಯಾವುದಕ್ಕೂ ಅವರು ತಲೆ ಕೆಡಿಸಿಕೊಂಡವರಲ್ಲ. ಅಷ್ಟೇ ಅಲ್ಲದೇ ನಟಿ, ಗರ್ಭಿಣಿಯಾದ ಬಳಿಕವೂ ಸಿನಿಮಾ ಪ್ರಚಾರದಲ್ಲಿ ಓಡಾಡಿಕೊಂಡಿದ್ದರು. ತುಂಬು ಗರ್ಭಿಣಿಯಾದಾಗಲೂ ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡಿ ಸುದ್ದಿ ಮಾಡಿದ್ದರು. ಆ ಸಮಯದಲ್ಲಿ ಅವರು ನಟಿಸಿದ್ದ 'ಆಡು ಜೀವಿತಂ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗಳಿಕೆ ಮಾಡಿತ್ತು. ನಟಿಯ ಕಮಿಟ್‌ಮೆಂಟ್‌ಗೆ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ತಿಂಗಳಿಗೆ 300 ರೂ. ಪಡೀತಿದ್ದ ಪ್ರಕಾಶ್ ರಾಜ್ಗೆ ವಿಲನ್ ತಂದ ಅದೃಷ್ಟ! ಮದ್ವೆ ವಿಷ್ಯ ಕೆದಕೋದಾ ನೆಟ್ಟಿಗರು?
ಇದೇ ವೇಳೆ ನಟಿ ಮಗ ಇಳೈ ಹಾಗೂ ಪತಿ ಜಗತ್ ದೇಸಾಯಿ ಇಬ್ಬರು ತನ್ನ ಜೀವನದಲ್ಲಿ ಬಂದಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಹೇಳಿಕೊಂಡಿದ್ದಾರೆ. ಜೊತೆ ಪತಿಯನ್ನು ಹಾಡಿ ಕೊಂಡಾಡಿರುವ ನಟಿ, ಜಗತ್ ಅವರಿಗೂ ಸಿನಿಮಾ ಅಮದರೆ ಇಷ್ಟ. ನಾನು ಬಯಸಿದ್ದಕ್ಕಿಂತ ಉತ್ತಮ ಜೀವನ ಸಿಕ್ಕಿದೆ ಎಂದಿದ್ದಾರೆ. ಅಂದಹಾಗೆ, ಅಮಲಾ ಪೌಲ್ ಹೆಚ್ಚು ಕ್ಲಿಕ್ ಆಗಿದ್ದು ತೆಲುಗಿನಲ್ಲಿ. ಮೆಗಾ ಹೀರೋಗಳ ಜೊತೆ ನಟಿ ಸ್ಟಾರ್ ನಾಯಕಿ ಎನಿಸಿಕೊಂಡಿದ್ದಾರೆ.
ತಮಿಳು ಚಿತ್ರರಂಗದಲ್ಲಿಯೂ ಜನಪ್ರಿಯ ನಟಿಯಾಗಿದ್ದಾರೆ. ಅಮಲಾ ಪೌಲ್ ಅಭಿನಯದ ರಾಕ್ಷಸನ್, ಮೈನಾ, ದೈವತಿರುಮಾಮಲ್, ತಲೈವಾ ಚಿತ್ರಗಳು ಸಿನಿರಸಿಕರನ್ನು ಸೆಳೆದಿದ್ದವು. ತೆಲುಗು, ಮಲಯಾಳಂ, ಕನ್ನಡ ಮತ್ತು ಇತರ ಉದ್ಯಮಗಳಲ್ಲಿ ಅಮಲಾ ಪೌಲ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ಡಿಮ್ಯಾಂಡ್ ಇರುವಾಗ್ಲೆ ಅಮಲಾ ಪೌಲ್, ಜಗತ್ ದೇಸಾಯಿ ಅವರನ್ನು 2ನೇ ಮದುವೆಯಾಗಿದ್ದಾರೆ.
ಮದುವೆಗೆ ಗಂಡೇ ಬೇಕೆಂದೇನೂ ಇಲ್ಲ, ಮೂರು ಮದ್ವೆಯಾಗಿದ್ದೇನೆ: ಮನದಾಳದ ಮಾತು ತೆರೆದಿಟ್ಟ ರೇಖಾ!