ನಾನು ಲೈಂಗಿಕತೆಯನ್ನು ಪ್ರೀತಿಸುತ್ತೇನೆ ಎನ್ನುತ್ತಲೇ ಅಕ್ರಮ ಸಂಬಂಧದ ವಿಷ್ಯ ತಿಳಿಸಿದ ನಟ ಅರ್ಜುನ್​ ರಾಮ್​ಪಾಲ್

By Suchethana D  |  First Published Aug 3, 2024, 5:06 PM IST

ನಾನು ಲೈಂಗಿಕತೆಯನ್ನು ಪ್ರೀತಿಸುತ್ತೇನೆ ಎಂದು ಅದಕ್ಕೆ ಕಾರಣ ಕೊಡುತ್ತಲೇ  ಅಕ್ರಮ ಸಂಬಂಧದ ವಿಷ್ಯ ತಿಳಿಸಿದ್ದಾರೆ ನಟ ಅರ್ಜುನ್​ ರಾಮ್​ಪಾಲ್. ಅವರು ಹೇಳಿದ್ದೇನು? 
 


ಬಾಲಿವುಡ್​ ನಟ ಅರ್ಜುನ್ ರಾಮ್​ಪಾಲ್   ರೂಪದರ್ಶಿ ಹಾಗೂ ಚಲನಚಿತ್ರ ನಿರ್ಮಾಪಕ ಕೂಡ. ದಿಲ್ ಕಾ ರಿಶ್ತಾ, ಹೌಸ್‌ಫುಲ್, ಓಂ ಶಾಂತಿ ಓಂ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ರಾಮ್ ಪಾಲ್ (Arjun Rampal) ಹಲವು ಹಿಟ್​ ಚಿತ್ರಗಳನ್ನು ಕೊಟ್ಟವರು.  2001ರಲ್ಲಿ ಬಿಡುಗಡೆಯಾದ ರಾಜೀವ್ ರೈ ಅವರ ಪ್ರಣಯ ಚಿತ್ರ ಪ್ಯಾರ್ ಇಷ್ಕ್ ಔರ್ ಮೊಹಬ್ಬತ್​ನಿಂದ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವ ಅವರು,  40 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಹೆಚ್ಚು ಸದ್ದು ಮಾಡುತ್ತಿರುವುದು ವೈಯಕ್ತಿಕ ಜೀವನದಿಂದ. ಏಕೆಂದರೆ 24ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಎರಡು ಮಕ್ಕಳ ತಂದೆಯೂ ಆಗಿರುವ ಅರ್ಜುನ್​ ಅವರು, ಕೊನೆಗೆ ಸುದೀರ್ಘ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಸದ್ಯ ಗರ್ಲ್​ಫ್ರೆಂಡ್ ಆಗಿರುವ ಮಾಡೆಲ್, ನಟಿ ಗೇಬ್ರಿಯೆಲ್ಲಾ ಜೊತೆ ಎಂಗೇಜ್​ ಆಗಿದ್ದಾರೆ. ಗರ್ಲ್​ಫ್ರೆಂಡ್​ನಿಂದ ಇವರಿಗೆ ಮತ್ತೆ ಇಬ್ಬರು ಮಕ್ಕಳಿದ್ದಾರೆ.

ಇದೀಗ ನಟ, ಸಂಬಂಧ, ಅಕ್ರಮ ಸಂಬಂಧ, ವಿವಾಹೇತರ ಸಂಬಂಧ ಇತ್ಯಾದಿಗಳ ಕುರಿತು ಮಾತನಾಡಿದ್ದಾರೆ. ನಾನು ಲೈಂಗಿಕತೆಯನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ನಟ. ಲೈಂಗಿಕತೆ ಎನ್ನುವುದು ಬಹು ಮುಖ್ಯವಾಗಿ ಬೇಕಾಗಿದೆ. ದೈಹಿಕ ಅನ್ಯೋನ್ಯತೆಯು ಒಬ್ಬರ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ.  ಜೀವನದಲ್ಲಿ ಒಬ್ಬ ಪಾರ್ಟನರ್​ ಇರಲೇಬೇಕು. ಆಕೆಯ ಜೊತೆ  ಹಾಸಿಗೆಯನ್ನು ಹಂಚಿಕೊಳ್ಳುವಾಗ, ಭೌತಿಕತೆಯನ್ನು ಹಂಚಿಕೊಳ್ಳುವಾಗ ಅದರಲ್ಲಿ ಏನೋ ಒಂದು ರೀತಿಯ ಶಕ್ತಿ ಅಡಗಿದೆ ಎಂದು ನಾನು ಭಾವಿಸುತ್ತೇನೆ. ಆ ಸಂದರ್ಭದಲ್ಲಿ ನೀವು  ಆ ವ್ಯಕ್ತಿಯಿಂದ ಏನನ್ನೋ ಪಡೆಯುತ್ತಿರುತ್ತೀರಿ. ಆ ಕ್ರಿಯೆಯಲ್ಲಿ  ದೊಡ್ಡ ಶಕ್ತಿಯ ವಿನಿಮಯವಿದೆ ಎಂದು ನಮಗೆ ಆ ಕ್ಷಣ ತಿಳಿದಿರುವುದಿಲ್ಲ. ಆದರೆ ಆಗ ನಮ್ಮ  ಡಿಎನ್ಎ ಎಲ್ಲೋ ಹೋಗಿರುತ್ತದೆ. ಆದ್ದರಿಂದ ಲೈಂಗಿಕತೆ ಅವಶ್ಯಕವಾಗಿ ಬೇಕು ಎಂದಿದ್ದಾರೆ ಅರ್ಜುನ್​. 

Tap to resize

Latest Videos

undefined

ಮನಸ್ಸಲ್ಲೇ ಮದ್ವೆಯಾಗಿದೆ, ಕಾಗದದ ತುಂಡ್ಯಾಕೆ? ಇಬ್ಬರು ಮಕ್ಕಳ ಬಳಿಕ ನಟ ಅರ್ಜುನ್​ ರಾಮ್​ಪಾಲ್​ ಮಾತು...
 
ಇದೇ ವೇಳೆ ಮದುವೆಯಾದರೂ ವಿವಾಹೇತರ ಸಂಬಂಧ ಹೊಂದಿರುವವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರೋ ಅರ್ಜುನ್​ ಅವರು, ಮದುವೆಯಾದರೂ, ಒಬ್ಬಳ ಜೊತೆ ಸಂಬಂಧ ಹೊಂದಿದ್ದರೂ ಅಕ್ರಮವಾಗಿ ಇನ್ನೊಂದು ಸಂಬಂಧ ಹೊಂದುವುದು ಕೆಲವರಿಗೆ ಚಟವಅಗಿರುತ್ತದೆ.  ಇದು ಜನರು ತಮಗಾಗಿ ಸೃಷ್ಟಿಸಿಕೊಂಡ ಅಭ್ಯಾಸ. ಇನ್ನೊಬ್ಬ ಮಹಿಳೆಯ ಅಗತ್ಯ ಇರುವ ಅನೇಕ ವ್ಯಕ್ತಿಗಳನ್ನು ನಾನು ನೋಡಿದ್ದೇನೆ. ಹೀಗೆ ಅಕ್ರಮ ಸಂಬಂಧದಲ್ಲಿದ್ದುಕೊಂಡು ಹೊರಗಿನ ಪ್ರಪಂಚದಲ್ಲಿ ತಮ್ಮದು ಸುಖಿ ದಾಂಪತ್ಯ ಎಂದು ಪೋಸ್​ ಕೊಡುವುದನ್ನೂ ನೋಡಿದ್ದೇನೆ. ಅದು ಹೇಗೆ ಎನ್ನುವುದುದ ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಅರ್ಜುನ್​.
 
ಇದೀಗ ಅರ್ಜುನ್​ ಅವರು, ತಮ್ಮ ದಾಂಪತ್ಯ ಜೀವನದ ಹಾಗೂ ಹಾಲಿ ಜೀವನದ  ಕುರಿತು ಮಾತನಾಡಿದ್ದಾರೆ.  ಅರ್ಜುನ್ ಬಹಳ ಚಿಕ್ಕ ವಯಸ್ಸಿನಲ್ಲೇ ಮೆಹರ್ ಜೆಸಿಯಾ ಅವರನ್ನು ವಿವಾಹವಾದರು ಮತ್ತು ಅವರು ಕೆಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದರು. ಅವರಿಗೆ ಮಹಿಕಾ ರಾಂಪಾಲ್, ಮೈರಾ ರಾಂಪಾಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ  ಮದುವೆಯಾದ ಸಂದರ್ಭದಲ್ಲಿ ಅವರಿಗೆ 24 ವರ್ಷ ವಯಸ್ಸಾಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ತಾನು ಮದುವೆಯಾಗಬಾರದಿತ್ತು ಎಂದು ಅರ್ಜುನ್​ ಈಗ ಹೇಳಿದ್ದಾರೆ.  ಅರ್ಜುನ್ ಮತ್ತು ಮೆಹರ್ ಅವರು 1998 ರಲ್ಲಿ ಮದುವೆಯಾಗಿ ಸುಮಾರು 21 ವರ್ಷಗಳ ಕಾಲ ಮದುವೆಯಾಗಿದ್ದರು. ಅದರ ಬಗ್ಗೆ ಮಾತನಾಡುತ್ತಾ, ಅರ್ಜುನ್ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಇದು ತುಂಬಾ ಮುಂಚೆಯೇ ಎಂದು ನಾನು ಭಾವಿಸುತ್ತೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದು ತಪ್ಪಾಯಿತು ಎಂದಿದ್ದಾರೆ.

ಅವ್ನಿಗೆ ಸಿಕ್ಕಾಪಟ್ಟೆ ಅರ್ಜೆಂಟ್​ ಎನ್ನುತ್ತಲೇ ಮದ್ವೆಗೂ ಮುನ್ನ ಗರ್ಭಿಣಿಯಾದ ಗುಟ್ಟು ಬಿಚ್ಚಿಟ್ಟ ಹೆಬ್ಬುಲಿ ನಟಿ ಅಮಲಾ!
 

click me!