ಐಶ್ವರ್ಯಳನ್ನು ಕಂಡ್ರೆ ಅಮಿತಾಭ್​ಗೆ ಆಗೋದಿಲ್ಲ ಅನ್ನೋದು ನಿಜವಾಗೋಯ್ತಾ? ಸತ್ಯ ಒಪ್ಪಿಕೊಂಡ್ರಾ ಬಿಗ್​-ಬಿ?

By Suchethana D  |  First Published Jun 20, 2024, 9:36 PM IST

ಐಶ್ವರ್ಯಳನ್ನು ಕಂಡ್ರೆ ಅಮಿತಾಭ್​ಗೆ ಆಗೋದಿಲ್ಲ ಅನ್ನೋದು ನಿಜವಾಗೋಯ್ತಾ? ಸತ್ಯ ಒಪ್ಪಿಕೊಂಡು ಬಿಟ್ರಾ ಬಿಗ್​-ಬಿ?
 


ಬಿಗ್​-ಬಿ ಮನೆಯಲ್ಲಿ ಎಲ್ಲವೂ ಸರಿಯಲ್ಲ ಎಂದು ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಾಗುತ್ತಲೇ ಇದೆ. ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್​ ಬಚ್ಚನ್​ ಅವರ ಡಿವೋರ್ಸ್​ ವದಂತಿಯಂತೂ ವರ್ಷಗಳವರೆಗೆ ಬಹು ಚರ್ಚೆಯಲ್ಲೇ ಇತ್ತು. ಇದರ ನಡುವೆ ಸಾಕಷ್ಟು ಬೆಳವಣಿಗೆ ಆದರೂ, ಎಲ್ಲವೂ ಮೇಲ್ನೋಟಕ್ಕೆ ಸರಿ ಇರುವಂತೆ ಕಾಣುತ್ತಿದ್ದರೂ ಯಾಕೋ ಮಾವಂಗೂ ಸೊಸೆಗೂ ಇನ್ನೂ ಆಗಿಬರುವಂತೆ ಕಾಣುತ್ತಿಲ್ಲ ಎನ್ನುವುದಕ್ಕೆ ಇದೀಗ ದೊಡ್​ಡ ಪುರಾವೆಯೇ ಸಿಕ್ಕಿಬಿಟ್ಟಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅಭಿನಯದ ಮಣಿರತ್ನಂ ನಿರ್ದೇಶನದ ಹಿಂದಿ ಸಿನಿಮಾ ರಾವನ್ 14 ವರ್ಷಗಳನ್ನು ಮುಗಿಸಿದೆ. ಈ ವಿಶೇಷ ಸಂದರ್ಭದಲ್ಲಿ ಅಮಿತಾಭ್​ ಅವರು  ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್​ ನೂರೊಂದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
 
‘ರಾವಣ್’ ಸಿನಿಮಾ 2010ರ ಜೂನ್ 18ರಂದು ರಿಲೀಸ್ ಆಯಿತು. ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ರಿಲೀಸ್ ಆಗಿ 14 ವರ್ಷ ಕಳೆದಿದೆ. ಇದನ್ನು ಅಭಿಮಾನಿಯೋರ್ವ ಸಂಭ್ರಮಿಸಿದ್ದ. ಇದನ್ನು ರೀಟ್ವೀಟ್ ಮಾಡಿರೋ ಅಮಿತಾಭ್ ಅವರು, ‘ಅಭಿಷೇಕ್ ಅವರ ನಟನೆ ಮರೆಯಲು ಸಾಧ್ಯವಿಲ್ಲ. ಅವರ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾದುದು. ಕಲಾವಿದನ ನಿಜವಾದ ಮೌಲ್ಯ ಇದು’ ಎಂದು ಹೇಳಿದ್ದಾರೆ. ಈ ಮೂಲಕ ಮಗ ಅಭಿಷೇಕ್ ನಟನೆಯನ್ನು ಅವರು  ಮನಸಾರೆ ಹೊಗಳಿದ್ದಾರೆ. ಆದರೆ ಅದರಲ್ಲಿ ನಟಿಸಿದ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಬಗ್ಗೆ ಎಲ್ಲೂ ಉಲ್ಲೇಖ ಮಾಡಲಿಲ್ಲ. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಮದ್ವೆಗೆ 60 ಲಕ್ಷ ಖರ್ಚು ಮಾಡಿಬಿಟ್ಟೆ, ದೊಡ್ಡ ಪಾಠ ಕಲಿಸಿತು ಲೈಫ್‌... ಚಂದನ್‌ ಶೆಟ್ಟಿ ಮನದಾಳದ ಮಾತು...

Latest Videos

undefined

ರಾವಣ್​  ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಕ್ಕಾಗಿ ಮಗನನ್ನಷ್ಟೇ ಹೊಗಳಿ, ಸೊಸೆಯನ್ನು ಬಿಟ್ಟಿರುವ ಉದ್ದೇಶ ಏನು ಎಂದು ಫ್ಯಾನ್ಸ್​ ಕೇಳುತ್ತಿದ್ದಾರೆ.    ಸರ್, ಐಶ್ವರ್ಯಾ ಅವರು  ಈ ಸಿನಿಮಾದಲ್ಲಿ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಅವರ ನಟನೆಯನ್ನು ಹೊಗಳದಿರುವುದು ನ್ಯಾಯವಲ್ಲ ಎಂದು ಹಲವರು ಬರೆದಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ಐಶ್ವರ್ಯಾ ರೈ ಕೂಡ ನಟಿಸಿದ್ದಾರೆ. ಮಾತಿಗೂ ಅಮಿತಾಭ್ ಅವರು ಐಶ್ವರ್ಯಾ ಬಗ್ಗೆ ಒಂದೇ ಒಂದು ಮೆಚ್ಚುಗೆಯ ಮಾತನ್ನು ಆಡಿಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ಐಶ್ವರ್ಯಾ ಬಗ್ಗೆ ಅಸಮಾಧಾನ ಇದೆ ಅನ್ನೋದಕ್ಕೆ ಇದುವೇ ಸಾಕ್ಷಿ ಎಂದು ಕೆಲವರು ಹೇಳಿದ್ದಾರೆ.

‘ಕಜರಾ ರೇ..’ ಸಾಂಗ್ ಸೂಪರ್ ಹಿಟ್ ಆಗಿತ್ತು. ಈ ಹಾಡಿನಲ್ಲಿ ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಸ್ಟೆಪ್ ಹಾಕಿದ್ದರು. ಈ ಹಾಡಿನಲ್ಲಿ ಸಾಕಷ್ಟು ಎನರ್ಜಿಯೊಂದಿಗೆ ಈ ಮೂವರು ಡ್ಯಾನ್ಸ್ ಮಾಡಿದ್ದರು. ಇದು ‘ಬಂಟಿ ಔರ್ ಬಬ್ಲಿ’ ಚಿತ್ರದ ಹಾಡು. ಈ ಸಿನಿಮಾ 2005ರ ಮೇ 27ರಂದು ರಿಲೀಸ್ ಆಗಿತ್ತು. ಈ ಚಿತ್ರ ಬಿಡುಗಡೆ ಆಗಿ 19 ವರ್ಷ ಕಳೆದ ಹಿನ್ನೆಲೆಯಲ್ಲಿ ಫ್ಯಾನ್ಸ್ ಈ ಚಿತ್ರವನ್ನು, ಸಿನಿಮಾದ ಹಾಡನ್ನು ನೆನಪಿಸಿಕೊಂಡಿದ್ದರು. ಈ ಸಂದರ್ಭದಲ್ಲೂ ಅಮಿತಾಭ್ ಅವರು ಐಶ್ವರ್ಯಾ ಅವರನ್ನು ಸ್ಮರಿಸದೇ ಇದ್ದುದನ್ನು ಈ ಸಂದರ್ಭದಲ್ಲಿ ಕೆಲವರು ಕೆದಕಿದ್ದಾರೆ. 

ನಸುಕಿನ 3 ಗಂಟೆಗೆ ಗೆಳೆಯರ ಜೊತೆ.... ಮಿಡ್​ನೈಟ್​ ಸೀಕ್ರೇಟ್​ ಹೇಳಿದ ನಟಿ ಶ್ರುತಿ ಹಾಸನ್​!
 

click me!