ಅಶ್ವಿನಿ ದತ್ ಪಾದ ಸ್ಪರ್ಶಿಸಿ ಎಲ್ಲರನ್ನೂ ಅಚ್ಚರಿಗೆ ದೂಡಿದ 81 ವರ್ಷದ ಅಮಿತಾಭ್ ಬಚ್ಚನ್! ಯಾರು ಈ ದತ್?

By Reshma RaoFirst Published Jun 20, 2024, 4:05 PM IST
Highlights

ಕಲ್ಕಿ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ 81 ವರ್ಷದ ಅಮಿತಾಭ್ ಬಚ್ಚನ್ ಅಶ್ವಿನಿ ದತ್ ಎಂಬವರ ಕಾಲನ್ನು ಸ್ಪರ್ಶಿಸಿ ಆಶೀರ್ವಾದ ಬೇಡಿ ಎಲ್ಲರನ್ನೂ ಅಚ್ಚರಿಗೆ ಒಡ್ಡಿದರು. ಈ ವಿಡಿಯೋ ನೋಡಿದವರೆಲ್ಲರೂ ಯಾರು ಈ ಅಶ್ವಿನಿ ದತ್ ಎಂದು ಕುತೂಹಲಗೊಂಡಿದ್ದಾರೆ. 

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ADಯ ಪ್ರೀ-ರಿಲೀಸ್ ಈವೆಂಟ್ ಮುಂಬೈನಲ್ಲಿ ಬುಧವಾರ ನಡೆಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ರಾಣಾ ದಗ್ಗುಬಾಟಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ದೀಪಿಕಾ ಬೇಬಿ ಬಂಪ್ ಹೊರತಾಗಿ ಎಲ್ಲರ ಗಮನ ಸೆಳೆದ ಒಂದು ಕ್ಷಣವೆಂದರೆ ಅಮಿತಾಬ್ ಬಚ್ಚನ್ ಅಶ್ವಿನಿ ದತ್ ಅವರ ಪಾದಗಳನ್ನು ಮುಟ್ಟಿದ್ದು!

ಹೌದು, ಈ ಪ್ರೀ ರಿಲೀಸ್ ಈವೆಂಟ್ ವಿಡಿಯೋ ನೋಡಿದವರೆಲ್ಲ ಯಾರು ಈ ಅಶ್ವಿನಿ ಎಂಬ ಕುತೂಹಲ ಹಾಗೂ ಅಮಿತಾಭ್ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಯಾರ ಪಾದವನ್ನೂ ಸ್ಪರ್ಶಿಸದ, ಸ್ವತಃ 81 ವರ್ಷದ ಸೂಪರ್ ಸ್ಟಾರೊಬ್ಬರು ಸರಳವಾಗಿ ಕಾಣುವ ವ್ಯಕ್ತಿಯಿಂದ ಆಶೀರ್ವಾದ ಬೇಡಿ ಗೌರವ ತೋರುತ್ತಾರೆಂದರೆ ಅಚ್ಚರಿಯಾಗದೇ ಇರದು. ಹಾಗಿದ್ದರೆ ಯಾರು ಈ ಅಶ್ವಿನಿ ದತ್?


 

Latest Videos

ನಿರ್ಮಾಪಕ ಅಶ್ವಿನಿ ವೇದಿಕೆಗೆ ಬಂದಾಗ, ಅಮಿತಾಬ್ ಅವರ ಬಗ್ಗೆ ಮಾತನಾಡುತ್ತಾ, 'ಅವರು ತಮ್ಮ ಇಬ್ಬರು ಪುತ್ರಿಯರೊಂದಿಗೆ (ಸ್ವಪ್ನಾ, ಪ್ರಿಯಾಂಕಾ) ವೈಜಯಂತಿ ಫಿಲ್ಮ್ಸ್ ಮಾಲೀಕರಾಗಿದ್ದಾರೆ ಮತ್ತು ನಾನು ಅಶ್ವಿನಿಗಿಂತ ಹೆಚ್ಚು ಸರಳ, ವಿನಮ್ರ ವ್ಯಕ್ತಿಯನ್ನು ಇದುವರೆಗೂ ಭೇಟಿ ಮಾಡಿಲ್ಲ. ಪ್ರತಿ ಬಾರಿ ಸೆಟ್‌ನಲ್ಲಿ ಅವರು ಅಲ್ಲಿಗೆ ಬರುವ ಮೊದಲ ವ್ಯಕ್ತಿಯಾಗಿರುತ್ತಾರೆ. ಅವರು ನಿಮ್ಮನ್ನು ಸ್ವೀಕರಿಸಲು ವಿಮಾನ ನಿಲ್ದಾಣದಲ್ಲಿರುತ್ತಾರೆ ಮತ್ತು ನಿಮ್ಮನ್ನು ರಕ್ಷಣೆ ಖಚಿತಪಡಿಸಿಕೊಳ್ಳುತ್ತಾರೆ, ಯಾರೂ ಈ ರೀತಿ ಯೋಚಿಸುವುದಿಲ್ಲ' ಎಂದ ಅಮಿತಾಭ್ ಅವರು ಅಶ್ವಿನಿಯ ಪಾದಗಳನ್ನು ಮುಟ್ಟುವ ಮೊದಲು 'ಎಲ್ಲಾ ಗೌರವದಿಂದ' ಎಂದು ಹೇಳಿದರು, ಮತ್ತು ಅವರ ಪಾದಗಳನ್ನು ಮುಟ್ಟಿದರು.

ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ
ಅಮಿತಾಭ್ ಅಶ್ವಿನಿಯ ಪಾದಗಳನ್ನು ಸ್ಪರ್ಶಿಸಿದ ಕ್ಷಣದ ಸ್ಕ್ರೀನ್‌ಗ್ರಾಬ್ ಅನ್ನು ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಅವರು X ನಲ್ಲಿ 'ಅಮಿತಾಭ್ ಬಚ್ಚನ್ ಹೀಗೆ ಮಾಡುತ್ತಾರೆಂದರೆ ಅಶ್ವಿನಿ ದತ್ ಅವರ ಸಾಧನೆ ಮೇರುಶಿಖರವಾಗಿದೆ. ಎನ್ ಟಿ ರಾಮರಾವ್ ರಿಂದ ಹಿಡಿದು ಇತ್ತೀಚಿನ ಯುವ ನಾಯಕರವರೆಗೂ ಯಾರಾದರೂ ಇದನ್ನು ಮಾಡುತ್ತಿದ್ದರೆಂಬ ಬಗ್ಗೆ ಎಂದು ನನಗೆ ಅನುಮಾನವಿದೆ ಮತ್ತು ಬಿಗ್ ಬಿ ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ಬೇರೆ ಯಾವುದೇ ನಿರ್ಮಾಪಕರಿಗೆ ಈ ರೀತಿ ಮಾಡುವುದನ್ನು ನಾನು ನೋಡಿಲ್ಲ' ಎಂದು ಹೇಳಿದ್ದಾರೆ.

ಈ ಚಿತ್ರ ಬಿಡುಗಡೆಯಾದಾಗ ಒಂದೂ ಟಿಕೆಟ್ ಸೇಲ್ ಆಗ್ಲಿಲ್ಲ.. ಆಮೇಲ್ನೋಡಿ ಎಂಥಾ ಹಿಟ್ ಆಯ್ತಂದ್ರೆ..!
 

ಅಶ್ವಿನಿ ದತ್ ಯಾರು?
ಅಶ್ವಿನಿಯು ಟಾಲಿವುಡ್‌ನ ಅತಿ ದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದನ್ನು ಹೊಂದಿದ್ದಾರೆ - ವೈಜಯಂತಿ ಮೂವೀಸ್ - ಇದನ್ನು 1974 ರಲ್ಲಿ ಸ್ಥಾಪಿಸಲಾಯಿತು. ಅವರಿಗೆ ಮೂವರು ಪುತ್ರಿಯರಿದ್ದಾರೆ - ಸ್ವಪ್ನಾ, ಪ್ರಿಯಾಂಕಾ, ಶ್ರವಂತಿ . ಕಲ್ಕಿ 2898 ಎಡಿ ಚಿತ್ರವನ್ನು ನಿರ್ದೇಶಿಸಿದ ನಾಗ್ ಅಶ್ವಿನ್ ಅವರನ್ನು ಎರಡನೇ ಪುತ್ರಿ ಪ್ರಿಯಾಂಕಾ ವಿವಾಹವಾಗಿದ್ದಾರೆ.

ಅಶ್ವಿನಿ ದತ್ ಅವರ ವೃತ್ತಿಜೀವನದಲ್ಲಿ, ಎನ್‌ಟಿಆರ್, ಎಎನ್‌ಆರ್, ಕೃಷ್ಣ, ಸೋಭನ್ ಬಾಬು, ಕೃಷ್ಣಂ ರಾಜು, ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ, ನಾಗಾರ್ಜುನ, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಟಿಸಿದ ಬ್ಲಾಕ್‌ಬಸ್ಟರ್‌ಗಳನ್ನು ಬೆಂಬಲಿಸಿದರು. 

ಚಿರಂಜೀವಿ ಮತ್ತು ಶ್ರೀದೇವಿ ಅಭಿನಯದ 1990ರ ಚಿತ್ರ ಜಗದೇಕ ವೀರುಡು ಅತಿಲೋಕ ಸುಂದರಿ, ವೈಜಯಂತಿ ಮೂವೀಸ್ ನಿರ್ಮಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಇದು ಅಶ್ವಿನಿ ಅವರ ವೈಯಕ್ತಿಕ ನೆಚ್ಚಿನ ಚಿತ್ರವೂ ಹೌದು.

 

click me!