ವಿಪರೀತ ಟ್ರಾಫಿಕ್ ಕಾರಣ ಹೆಲ್ಮೆಟ್ ಇಲ್ಲದೆ ಅಪರಿಚಿತ ವ್ಯಕ್ತಿಯ ಬೈಕ್ ಏರಿ ಅಮಿತಾಭ್ ಬಚ್ಚನ್ ಶೂಟಿಂಗ್‌ಗೆ ಹೊರಟಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೂ ಟ್ರಾಫಿಕ್ ಕಿರಿಕಿರಿ ಶುರುವಾಗಿದೆ. ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ಹೋಗಲಾಗದೆ ಅಮಿತಾಭ್ ಪರದಾಡುತ್ತಿದ್ದಾರೆ. ಸಮಯ ಪಾಲನೆಗೆ ಅಮಿತಾಭ್ ಹೆಸರುವಾಸಿ. ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಎಂಟ್ರಿ ಕೊಡುವ ಅಮಿತಾಭ್ ಟ್ರಾಫಿಕ್ ಹೆಚ್ಚಾದ ಕಾರಣ ಕಾರಿನಿಂದ ಇಳಿದು ಬೈಕ್ ಏರಲು ಹಿಂಜರಿಯಲಿಲ್ಲ. ಅದ ಅಪರಿಚಿತ ವ್ಯಕ್ತಿಯ ಬೈಕ್ ಎನ್ನುವುದು ವಿಶೇಷ. ಬೈಕ್ ಅಡ್ಡಗಟ್ಟಿ ಅದರಲ್ಲಿ ಹೊರಟಿದ್ದಾರೆ. ಈ ಬಗ್ಗೆ ಅಮಿತಾಭ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸ್ಟಾರ್ ನಟ ಬೈಕ್ ಏರಿ ಹೊರಟ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.
ಅಮಿತಾಭ್ ಬಚ್ಚನ್ ಪೋಸ್ಟ್ ಶೇರ್ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಿಟ್ಟ ಬೈಕ್ ಚಾಲಕನಿಗೆ ಅಮಿತಾಬ್ ಧನ್ಯವಾದ ತಿಳಿಸಿದ್ದಾರೆ. ಅಮಿತಾಭ್ ಬಚ್ಚನ್ ಕಪ್ಪು ಪ್ಯಾಂಟ್, ಜಾಕೆಟ್ ಹಾಗೂ ಕನ್ನಡಕ ಧರಿಸಿದ್ದರು. ಫೋಟೋ ಶೇರ್ ಮಾಡಿ, ರೈಡರ್‌ಗೆ ಧನ್ಯವಾದ. ನಿಮಗೆ ಗೊತ್ತಿಲ್ಲ. ಆದರೆ ನೀವು ನನ್ನನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗಿದ್ದೀರಿ. ವಿಪರೀತ ಟ್ರಾಫಿಕ್ ಜಾಮ್ ತಪ್ಪಿಸಿ ಕರ್ಕೊಂಡು ಹೋಗಿದ್ದೀರಿ. ಶಾರ್ಟ್ ಮತ್ತು ಹಳದಿ ಬಣ್ಣದ ಬಿ ಶರ್ಟ್ ಮಾಲಕರಿಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಬಿಗ್ ಬಿ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಬರುತ್ತಿದೆ. ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ನಿಜವಾದ ಲೆಜೆಂಡ್ ಎಂದು ಹೇಳುತ್ತಿದ್ದಾರೆ. ಆದರೆ ಇನ್ನು ಕೆಲವರು ಹೆಲ್ಮೆಟ್ ಎಲ್ಲಿ ಸರ್ ಎಂದು ಕೇಳುತ್ತಿದ್ದಾರೆ. 'ಸರ್, ಹೆಲ್ಮೆಟ್ ಧರಿಸುವುದು ಕಡ್ಡಾಯ. ಕೇವಲ ಒಂದು ಕ್ಯಾಪ್ ಒಂದೇ ಆಗಲ್ಲ' ಎಂದು ಹೇಳುತ್ತಿದ್ದಾರೆ.
ಅಮಿತಾಭ್ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ
ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅನೇಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಬೈಕ್ ಸವಾರಿ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅಮಿತಾಭ್ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ನಟನೆಯ ಇನ್ನೂ ಹೆಸರಿಡದ ಸಿನಿಮಾದ ಚಿತ್ರೀಕರಣ ವೇಳೆ ಗಾಯಗೊಂಡಿದ್ದ ಅಮಿತಾಭ್ ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಗುಣಮುಖರಾಗಿದ್ದು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ಖೇಲ್ ಖತಂ, ಹಣ ಹೋಯ್ತು, ಏನ್ಮಾಡಲಿ ಈಗ? ಎಲಾನ್ ಮಸ್ಕ್ ವಿರುದ್ಧ ಬಿಗ್ ಬಿ ಅಮಿತಾಭ್ ಬಚ್ಚನ್ ಅಸಮಾಧಾನ
ಅಮಿತಾಭ್ ಬಳಿ ಅನೇಕ ಸಿನಿಮಾಗಳಿವೆ. ಕೊನೆಯದಾಗಿ ಅಮಿತಾಭ್ ಊಂಚೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಬಿಗ್ ಬಿ ಗಣಪತಿ, ಗೂಮರ್, ಪ್ರಾಜೆಕ್ಟ್ ಕೆ, ಬಟರ್‌ಫ್ಲೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಇಳಿವಯಸ್ಸಲ್ಲೂ ಅಮಿತಾಭ್ ಹಿಂದಿ ಹಾಗೂ ತೆಲುಗು ಅಂತ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಬಿಗ್ ಬಿ ಬ್ಯುಸಿಯಾಗಿದ್ದಾರೆ. ಈಗಲೂ ಬಹುಬೇಡಿಕೆಯ ನಟರಾಗಿರುವ ಅಮಿತಾಭ್ ಅವರನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.