
ಸೌತ್ ಸ್ಟಾರ್ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ದೂರ ಆಗಿ ಎರಡು ವರ್ಷಗಳಾಗುತ್ತಿದೆ. ಆದರೆ ಇಬ್ಬರೂ ಈಗಲೂ ಸುದ್ದಿಯಾಗುತ್ತಿದ್ದಾರೆ. ಇಬ್ಬರೂ ದೂರ ಆಗಿ ತಮ್ಮತಮ್ಮ ಜೀವನದಲ್ಲೂ ಮುಂದೆ ಸಾಗಿದ್ದಾರೆ. ಆದರೂ ಇಬ್ಬರ ಹೆಸರು ಸದಾ ಸುದ್ದಿಯಲ್ಲಿರುತ್ತದೆ. ಅವರ ಅಭಿಮಾನಿಗಳು ಸಹ ಅಕಾಶ ಸಿಕ್ಕಾಗಲೆಲ್ಲ ಕಿತ್ತಾಡ ನಡೆಸುತ್ತಿರುತ್ತಾರೆ. ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಅಭಿಮಾನಿಗಳು ಕೆಸರೆರಚಾಟ ಆರಂಭಿಸಿದ್ದಾರೆ. ಅಂದಹಾಗೆ ನಾಗ ಚೈತನ್ಯ ಸದ್ಯ ಕಸ್ಟಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕಸ್ಟಡಿ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ಆದರೆ ಕಸ್ಟಡಿ ಅಷ್ಟೆ ನಿರಾಸೆ ಮೂಡಿಸಿದೆ. ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸಮಂತಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದಾರೆ.
ಇದಕ್ಕೆ ಕಾರಣ ಸಮಂತಾ ನಟನೆಯ ಶಾಕುಂತಲಂ ಸಿನಿಮಾ. ಶಾಕುಂತಲಂ ಬಿಡುಗಡೆಯಾದಾಗ ನಾಗ ಚೈತನ್ಯ ಅಭಿಮಾನಿಗಳು ಸಮಂತಾ ಅವರನ್ನು ಅಣಕಿಸಿದ್ದರು. ಅನಾರೋಗ್ಯವನ್ನೇ ಇಟ್ಟುಕೊಂಡು ಸಮಂತಾ ಸಹಾನುಭೂತಿ ಪಡೆಯುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು. ಸಮಂತಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಶಾಕುಂತಲಂ ಸೋಲನ್ನು ಅಣಕಿಸಿದ್ದರು. ಇದು ಸಮಂತಾ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೂ ಸೈಲೆಂಟ್ ಆಗಿಯೇ ಕಾಯುತ್ತಿದ್ದ ಅಭಿಮಾನಿಗಳಿಗೀಗ ನಾಗ ಚೈತನ್ಯ ಅವರ ಕಸ್ಟಡಿ ಸೋಲಿನ ಮೂಲಕ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ.
'ಹೂಂ ಅಂತೀಯ ಮಾವ' ಹಾಡಿನ ಬಗ್ಗೆ ಕೃತಿ ಶೆಟ್ಟಿ ಶಾಕಿಂಗ್ ಕಾಮೆಂಟ್: ಸಮಂತಾ ಫ್ಯಾನ್ಸ್ ಅಸಮಾಧಾನ
ಕಸ್ಟಡಿ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಕಸ್ಟಡಿ ಮೊದಲ ದಿನದ ಕಲೆಕ್ಷನ್ ಸಮಂತಾ ಅವರ ಶಾಕುಂತಲಂ ಸಿನಿಮಾದ ಕಲೆಕ್ಷನ್‌ಗಿಂತ ಕಡಿಮೆ ಎಂದು ಹೇಳುತ್ತಿದ್ದಾರೆ. ನಾಗ ಚೈತನ್ಯ ಅವರನ್ನು ಅಪಹಾಸ್ಯ ಮಾಡುತ್ತಾ ಕಾಲೆಳೆಯುತ್ತಿದ್ದಾರೆ. ಇದೀಗ ನಾಗ ಚೈತನ್ಯ ಅಭಿಮಾನಿಗಳು ಮೌನವಾಗಿರುವುದನ್ನು ಬಿಟ್ಟು ಬೇರೆ ದಾರಿ ಇಲ್ಲದಂತೆ ಆಗಿದೆ.
ನಂಬಿಕೆ, ಭಯ ನಮ್ಮನ್ನು ಬೇರ್ಪಡಿಸಿದೆ: ನಾಗ ಚೈತನ್ಯಗೆ ಕೌಂಟರ್ ಕೊಟ್ರಾ ಸಮಂತಾ?
ಸಮಂತಾ ಮತ್ತು ನಾಗ ಚೈತನ್ಯ ದೂರ ಆಗಿ ಸೈಲೆಂಟ್ ಆಗಿದ್ದರೂ ಅಭಿಮಾನಿಗಳು ಮಾತ್ರ ಸುಮ್ಮನಿರದೆ ಕಿತ್ತಾಟ ನಡೆಸುತ್ತಿರುತ್ತಾರೆ. ಸಮಂತಾ ಸದ್ಯ ಸಿಟಾಡೆಲ್ ಮತ್ತು ಖುಷಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿಟಾಡೆಲ್ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸೀರಿಸ್ ಜೊತೆಗೆ ಸಮಂತಾ ಖುಷಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಸಮಂತಾ ತೆರೆ ಹಂಚಿಕೊಳ್ಳುತ್ತಿದ್ದು ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.