ನಾನು ಆರೋಗ್ಯವಾಗಿದ್ದೇನೆ, ಸರ್ಜರಿ ಬಗ್ಗೆ ಸ್ಪಷ್ಟನೆ ನೀಡಿದ ಅಮಿತಾಬ್ ಬಚ್ಚನ್

Published : Jul 22, 2026, 01:03 PM IST
Amitabh Bachchan health

ಸಾರಾಂಶ

ಅಮಿತಾಬ್ ಬಚ್ಚನ್ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಅಭಿಮಾನಿಗಳು ಈಗ ನಿರಾಳವಾಗಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ನ ಹೊಸ ಪೋಸ್ಟ್ ನಲ್ಲಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಬಾಲಿವುಡ್ ಬಿಗ್ ಬಿ ಮಂಗಳವಾರ ಹಂಚಿಕೊಂಡಿದ್ದ ಬ್ಲಾಗ್ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಈಗ ಅಮಿತಾಬ್ ಬಚ್ಚನ್ ಇನ್ನೊಂದು ಪೋಸ್ಟ್ ಹಂಚಿಕೊಂಡು, ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ನಾನು ಆರೋಗ್ಯವಾಗಿದ್ದೇನೆ 

ಮಂಗಳವಾರ ಅಮಿತಾಬ್ ಬಚ್ಚನ್ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಐಸಿಯು, ಶಸ್ತ್ರಚಿಕಿತ್ಸೆ, ಆಸ್ಪತ್ರೆ ಆರೈಕೆ ಹಾಗೂ ಮನೆಗೆ ವಾಪಸ್ ಆಗುವ ಬಗ್ಗೆ ಅವರ ಪೋಸ್ಟ್ ಇತ್ತು. ಇದನ್ನು ನೋಡಿದ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಐಸಿಯುವಿನಲ್ಲಿ ಚಿಕಿತ್ಸೆ ನಡೆದಿದೆ ಎಂಬ ಭಯ ಎಲ್ಲರನ್ನು ಕಾಡಿತ್ತು. ಹಾಗೆಯೇ ಅಭಿಮಾನಿಗಳು ಯಾವ ಶಸ್ತ್ರಚಿಕಿತ್ಸೆ, ಬೇಗ ಗುಣಮುಖರಾಗಿ ಎನ್ನುವ ಕಮೆಂಟ್ ಶುರು ಮಾಡಿದ್ದರು. ಈಗ ಈ ಪೋಸ್ಟ್ ಗೆ ಅಮಿತಾಬ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ನನ್ನ ಪೋಸ್ಟನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಜಿಯಾ ಪಾತ್ರದ ಮೂಲಕ ಜಾಗತಿಕ ಮನ್ನಣೆ ಪಡೆದ 18 ವರ್ಷದ ಶ್ರವಣ ದೋಷವುಳ್ಳ ನಟಿ ಭೀಕರ ಕಾರು ಅಪಘಾತದಲ್ಲಿ ಸಾವು!

ಅಮಿತಾಬ್ ಬಚ್ಚನ್ ಹೇಳಿದ್ದೇನು? 

ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ನನ್ನ ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಒಂದು ಉದಾಹರಣೆಯನ್ನು ನೀಡಿದ್ದೆ. ನಾನು ಹೇಳಿದ್ದು, ಪ್ರಮುಖ ಶಸ್ತ್ರಚಿಕಿತ್ಸೆ ಅಥವಾ ಐಸಿಯು ನಂತರ, ನೀವು ಮನೆಗೆ ಹಿಂತಿರುಗಿ ನಿಮ್ಮ ದುರ್ಬಲ ಅಥವಾ ಹಾನಿಗೊಳಗಾದ ಸ್ಥಿತಿಯನ್ನು ನೆನೆಪಿಸಿಕೊಂಡಾಗ ಅತ್ಯಂತ ಕಷ್ಟಕರ ಸಮಯ ಪ್ರಾರಂಭವಾಗುತ್ತದೆ. ಅದೇ ರೀತಿ, ಒಬ್ಬ ಚಾಂಪಿಯನ್ ಸೋತಾಗ, ಅವನ ಕಠಿಣ ಹೋರಾಟವು ಅವನೊಳಗೆ ಕೆರಳುವ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ನಾನು ಅರ್ಜೆಂಟೀನಾದ ಸೋಲು ಮತ್ತು ಆ ಸಮಯದಲ್ಲಿ ಸೋಲನ್ನು ಅನುಭವಿಸಿದ ಲಿಯೋನೆಲ್ ಮೆಸ್ಸಿಯ ಮಾನಸಿಕ ಸ್ಥಿತಿಯನ್ನು ಉಲ್ಲೇಖಿಸುತ್ತಿದ್ದೆ. ಆದರೆ ಜನರು ನಾನು ಇದನ್ನು ನನ್ನ ಬಗ್ಗೆ ಹೇಳುತ್ತಿದ್ದೇನೆ ಎಂದು ಭಾವಿಸಿದರು ಎಂದು ಅಮಿತಾಬ್ ಬಚ್ಚನ್ ಪೋಸ್ಟ್ ಹಾಕಿದ್ದಾರೆ.

ಪೋಸ್ಟ್ ಮುಂದುವರೆಸಿದ ಅಮಿತಾಬ್ ಬಚ್ಚನ್, ಕಾಲಾನಂತರದಲ್ಲಿ ಇನ್ನೊಬ್ಬ ಚಾಂಪಿಯನ್ ಹೊರಹೊಮ್ಮುತ್ತಾನೆ ಎಂದು ಪ್ರತಿಯೊಬ್ಬ ಚಾಂಪಿಯನ್ ಒಪ್ಪಿಕೊಳ್ಳಬೇಕು. ಒಬ್ಬ ಚಾಂಪಿಯನ್ ತನ್ನ ಸ್ಥಾನವನ್ನು ಬೇರೊಬ್ಬರು ಪಡೆದುಕೊಂಡಿದ್ದಾರೆ ಎಂದು ಒಪ್ಪಿಕೊಳ್ಳುವುದು ಸುಲಭವಲ್ಲ. ಆದರೆ ಇದು ಜೀವನದ ನಿಯಮ ಮತ್ತು ಅದು ಯಾವಾಗಲೂ ಸಂಭವಿಸುತ್ತದೆ ಎಂದಿದ್ದಾರೆ.

Ra Ra RX: ಬೈಕ್‌ ಬೆನ್ನುಬಿದ್ದ ಯತಿರಾಜ್.. ಮದ್ದೂರಿನಲ್ಲಿ "ರಾ ರಾ ಆರೆಕ್ಸ್‌‌' ಜರ್ನಿ ಶುರು!

ನೀವು ಅನಾರೋಗ್ಯ ಅಥವಾ ಸಮಸ್ಯೆಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕು ಎಂದು ಭಾವಿಸೋಣ. ನೀವು ಆಸ್ಪತ್ರೆಗೆ ಹೋದಾಗ, ನಿಮ್ಮ ದೇಹವು ಅದರ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ನಂತರ, ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಯ ನಂತರ, ಅನಾರೋಗ್ಯವು ಗುಣವಾಗುತ್ತದೆ, ಆದರೆ ಅತ್ಯಂತ ಕಷ್ಟಕರವಾದ ಭಾಗವೆಂದರೆ ಬದಲಾದ ದೇಹದೊಂದಿಗೆ ಬದುಕುವುದು ಮತ್ತು ಅದಕ್ಕೆ ಹೊಂದಿಕೊಳ್ಳುವುದು. ಚಿಕಿತ್ಸೆಯ ನಂತರ, ನಿಮ್ಮ ದೇಹವು ಮೊದಲಿನಂತೆಯೇ ಇಲ್ಲದಿರಬಹುದು. ಅದು ಮಾಡುವ ಕೆಲಸ ಬದಲಾಗಬಹುದು. ಈ ಬದಲಾವಣೆಯನ್ನು ಸ್ವೀಕರಿಸುವುದು ಸುಲಭವಲ್ಲ. ಆದರೆ ನಮ್ಮ ದೇಹವು ಅದ್ಭುತವಾಗಿದೆ. ಅದು ಸಂದರ್ಭಗಳಿಗೆ ಹೊಂದಿಕೊಳ್ಳುತ್ತದೆ ಮತ್ತು ಮತ್ತೆ ಕಾರ್ಯನಿರ್ವಹಿಸಲು ಕಲಿಯುತ್ತದೆ. ಬಹುಶಃ ಸೋತ ಚಾಂಪಿಯನ್ನ ಮನಸ್ಸಿಗೆ ಇದು ಹೋಲುತ್ತದೆ ಎಂದು ಬರೆದಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಅಮಿತಾಬ್ ಬಚ್ಚನ್ ಆಟ ಮುಗಿದಿದೆ, ಆದರೆ ಕೆಲಸ ಮುಂದುವರೆದಿದೆ ಎಂದು ಬರೆದಿದ್ದರು. ನಂತ್ರ ಆಸ್ಪತ್ರೆ, ಐಸಿಯು ಬಗ್ಗೆ ಪೋಸ್ಟ್ ಹಾಕಿದ್ದರು. ಇದು ಎಲ್ಲರನ್ನು ಗೊಂದಲಕ್ಕೀಡುಮಾಡಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಿಯಾ ಪಾತ್ರದ ಮೂಲಕ ಜಾಗತಿಕ ಮನ್ನಣೆ ಪಡೆದ 18 ವರ್ಷದ ಶ್ರವಣ ದೋಷವುಳ್ಳ ನಟಿ ಭೀಕರ ಕಾರು ಅಪಘಾತದಲ್ಲಿ ಸಾವು!
'ನನ್ನನ್ನು ಟೀಕಿಸಿದವರು ಟೀಕಿಸುತ್ತಲೇ ಇರಲಿ, ನಾನು ಮಾತ್ರ ಎಂದೆಂದಿಗೂ ರಾಜಕುಮಾರಿಯೇ'-ಐಶ್ವರ್ಯಾ ರೈ