ತಳ್ಳುಗಾಡಿಯಲ್ಲಿ ತಿಂಡಿ ತಿಂದ ಅಲ್ಲು: ಸ್ಟೈಲಿಷ್ ಮಾತ್ರವಲ್ಲ, ಸಿಂಪಲ್ ಸ್ಟಾರ್ ಕೂಡಾ..!

Suvarna News   | Asianet News
Published : Sep 15, 2021, 09:43 AM ISTUpdated : Sep 15, 2021, 10:17 AM IST
ತಳ್ಳುಗಾಡಿಯಲ್ಲಿ ತಿಂಡಿ ತಿಂದ ಅಲ್ಲು: ಸ್ಟೈಲಿಷ್ ಮಾತ್ರವಲ್ಲ, ಸಿಂಪಲ್ ಸ್ಟಾರ್ ಕೂಡಾ..!

ಸಾರಾಂಶ

ತಳ್ಳುಗಾಡಿ ಮುಂದೆ ನಿಂತ ಅಲ್ಲು ಅರ್ಜುನ್ ಲಕ್ಷುರಿ ಕಾರ್ ರಸ್ತೆ ಬದಿಯ ತಳ್ಳುಗಾಡಿಗೆ ಹೋಗಿ ತಿಂಡಿ ಸೇವಿಸಿದ ನಟ

ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಟನ ಕುರಿತು ಹೆಮ್ಮೆ ಪಡುವುದಕ್ಕ ಇನ್ನೊಂದು ಕಾರಣ ಸಿಕ್ಕಿದೆ. ಇತ್ತೀಚೆಗೆ ನಟನ ವಿಡಿಯೋ ಒಂದು ವೈರಲ್ ಆಗಿದೆ. ನಟ ರಸ್ತೆ ಬದಿ ಕಾರು ನಿಲ್ಲಿಸಿ ತಿಂಡಿ ತಿಂದಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಳಗ್ಗೆ ಪುಷ್ಪಾ ಸಿನಿಮಾ ಸೆಟ್‌ಗೆ ಹೊರಟಿದ್ದ ನಟ ರಸ್ತೆ ಮಧ್ಯೆ ತಳ್ಳುಗಾಡಿಯೊಂದರ ಮುಂದೆ ಕಾರು ನಿಲ್ಲಿಸಿದ್ದಾರೆ. ನಟ ಅಂಗಡಿಯಿಂದ ತಿಂಡಿ ತಿಂದು ಹೊರಬರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೀಡಿಯೊದಲ್ಲಿ, ಅಲ್ಲು ಅರ್ಜುನ್ ಗುಡಿಸಲಿನಿಂದ ಹೊರಬಂದು ತನ್ನ ತಿಂಡಿಗೆ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಕಂಡುಬರುತ್ತದೆ. ಉಪಾಹಾರ ಗೃಹದ ಮಾಲೀಕರು ನಟನಿಂದ ತಿಂಡಿಯ ಹಣ ಪಡೆಯಲು ನಿರಾಕರಿಸುತ್ತಾರೆ.

ಅಲ್ಲು ಅರ್ಜುನ್‌ ಆ ಒಂದು ವಿಷಯಕ್ಕೆ ತಲೆ ಕೆಡಿಸಿಕೊಂಡ ರಶ್ಮಿಕಾ ಮಂದಣ್ಣ!

ಅಲ್ಲು ಅರ್ಜುನ್ ತಮ್ಮ ಮುಂಬರುವ ಚಿತ್ರ ಪುಷ್ಪ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಡಿಯೋದಲ್ಲಿ ನಿರ್ದೇಶಕ ಸುಕುಮಾರ್ ಮತ್ತು ಸಂಯೋಜಕ ದೇವಿ ಶ್ರೀ ಪ್ರಸಾದ್ ಜೊತೆ ಅಲ್ಲು ಅರ್ಜುನ್ ಅವರು ಇರುವುದನ್ನು ನೋಡಬಹುದು. ಈ ಮೂವರು ಈ ಹಿಂದೆ ಆರ್ಯ ಮತ್ತು ಆರ್ಯ 2 ಎಂಬ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆರ್ಯ ನಂತರ ಅಲ್ಲು ಅರ್ಜುನ್ ರಾತ್ರೋರಾತ್ರಿ ಸೆನ್ಸೇಷನ್ ಆಗಿದ್ದರು.

ಪುಷ್ಪಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ, ಪುಷ್ಪ: ದಿ ರೈಸ್, ಈ ವರ್ಷ ಕ್ರಿಸ್‌ಮಸ್‌ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಫಹದ್ ಫಾಸಿಲ್ ವಿಲನ್ ಪಾತ್ರವನ್ನು ಮಾಡಿದ್ದು ಪುಷ್ಪಾ ಅಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹವನ್ನು ಸೃಷ್ಟಿಸಿದ್ದಾರೆ. ತೆಲುಗಿನಲ್ಲಿ ಫಹದ್ ಚೊಚ್ಚಲ ಚಿತ್ರವಾಗಿದೆ ಇದು. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು, ಪ್ರಕಾಶ್ ರಾಜ್, ಧನಂಜಯ್ ಮತ್ತು ಸುನಿಲ್ ಪೋಷಕ ಪಾತ್ರದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!