
ಹೈದರಾಬಾದ್(ಸೆ. 15) ನಾಗ ಚೈತನ್ಯ ಮತ್ತು ಸಮಂತಾ ನಡುವೆ ಬಿರುಕು ಮೂಡಿದೆ ಎನ್ನುವುದು ಸದ್ಯದ ಹಾಟ್ ಟಾಪಿಕ್. ನಾಗ ಚೈತನ್ಯ ಮತ್ತು ಸಮಂತಾ ಅವರ ಅಗಲಿಕೆಯ ಊಹೆಗಳು ಹರಿದಾಡುತ್ತಲೆ ಇವೆ. ಎಲ್ಲಿಯೂ ಸ್ಪಷ್ಟತೆ ಇಲ್ಲ.
ಈ ನಡುವೆ ನಾಗಚೈತನ್ಯ ನೀಡಿರುವ ಪ್ರತಿಕ್ರಿಯೆ ಒಂದು ಸುದ್ದಿ ಮಾಡುತ್ತಿದೆ. ಟ್ವಿಟರ್ ನಲ್ಲಿ ಪರಸ್ಪರ ಅವರು ನೀಡಿಕೊಂಡಿರುವ ಪ್ರತಿಕ್ರಿಯೆ ಎಲ್ಲ ವದಂತಿಗಳಿಗೆ ತೆರೆ ಎಳೆದಂತೆ ಕಾಣುತ್ತಿದೆ.
ನಾಗ ಚೈತನ್ಯ ಮತ್ತು ಸಮಂತಾ ನಡುವೆ ಗೊಂದಲ..ಏನಿದರ ಕತೆ
ತಮ್ಮ ಮುಂದಿನ ಚಿತ್ರ ಲವ್ ಸ್ಟೋರಿಯ ಟ್ರೈಲರ್ ನ್ನು ನಾಗ ಚೈತನ್ಯ ಹಂಚಿಕೊಂಡಿದ್ದರು. ಕೊನೆಗೂ ಚಿತ್ರ ಜನರ ಮುಂದೆ ಬರುತ್ತಲಿದ್ದು ಥಿಯೇಟರ್ ನಲ್ಲಿ ನೋಡಲು ಸಂತಸವಾಗುತ್ತಿದೆ ಎಂದು ಹೇಳಿದ್ದರು.
ಈ ಟ್ವಿಟ್ ಗೆ ಪ್ರತಿಕ್ರಿಯೆ ಮಾಡಿರುವ ಸಮಂತಾ ನಿಮ್ಮ ತಂಡಕ್ಕೆ ಶುಭಾಶಯ.. ಸಿನಿಮಾ ಒಂದು ವಿನ್ನರ್ ಆಗಿ ಹೊರಬರಲಿದೆ ಎಂದಿದ್ದಾರೆ. ಇದಕ್ಕೆ ನಾಗಚೈತನ್ಯ ಸಹ ಥ್ಯಾಂಕ್ಸ್ ಸ್ಯಾಮ್ ಎಂದಿದ್ದಾರೆ. ಮೂಲಕ ಪರಸ್ಪರ ಮಾತುಕತೆ ನಡೆದಿದೆ. ಡಿವೋರ್ಸ್ ವದಂತಿಗಳಿಗೂ ಒಂದರ್ಥದಲ್ಲಿ ತೆರೆ ಬಿದ್ದಂತೆ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.