ತೆಂಗು, ಅಡಿಕೆ ತೋಟ ಮಧ್ಯೆ ಭವ್ಯ ಬಂಗಲೆ ಖರೀದಿಸಿದ ದೀಪಿಕಾ-ರಣವೀರ್

Published : Sep 14, 2021, 05:55 PM ISTUpdated : Sep 15, 2021, 04:38 PM IST
ತೆಂಗು, ಅಡಿಕೆ ತೋಟ ಮಧ್ಯೆ ಭವ್ಯ ಬಂಗಲೆ ಖರೀದಿಸಿದ ದೀಪಿಕಾ-ರಣವೀರ್

ಸಾರಾಂಶ

ತೆಂಗು-ಅಡಿಕೆ ತೋಟದ ಮಧ್ಯೆ ಭವ್ಯ ಬಂಗಲೆ ಅಲಿಭಗ್‌ನಲ್ಲಿ ದುಬಾರಿ ಪ್ರಾಪರ್ಟಿ ಖರೀದಿಸಿದ ದೀಪಿಕಾ-ರಣವೀರ್ ಕೆಲವೇ ವಾರಗಳ ಹಿಂದೆ ಬೆಂಗಳೂರಲ್ಲೂ ಅಪಾರ್ಟ್‌ಮೆಂಟ್ ಖರೀದಿ

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯಲ್ಲಿ ನಿರತರಾಗಿದ್ದಾರೆ. ಅವರ ಇತ್ತೀಚಿನ ಖರೀದಿಗಳು  ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಐಷಾರಾಮಿ ಬಂಗಲೆಗಳಿಗೆ ಒಡೆಯರಾಗಿದ್ದಾರೆ ಈ ಜೋಡಿ. ರಣವೀರ್ ಪತ್ನಿ ಸಮೇತರಾಗಿ ಅಲಿಭಗ್‌ನಲ್ಲಿ ಕಂಡು ಬಂದಿದ್ದಾರೆ.

ಅಲಿಬಾಗ್‌ನಲ್ಲಿ ಹೊಸ ಆಸ್ತಿ ಖರೀದಿಸಿದ ಜೋಡಿ ಅಲ್ಲಿನ ಸ್ಥಳೀಯ ನೋಂದಣಿ ಕಚೇರಿಯಲ್ಲಿ ಎಲ್ಲ ದಾಖಲೆಗಳನ್ನು ನೋಡಿ ಖರೀದಿ ಪ್ರಕ್ರಿಯೆ ಮುಗಿಸಿದ್ದಾರೆ. ದಂಪತಿಗಳು ತಮ್ಮ ಹೊಸ ಆಸ್ತಿಯ ಬಾಕಿಯಿರುವ ಕಾಗದಪತ್ರಗಳನ್ನು ಸರಿ ಮಾಡಲು ಅಲಿಬಾಗ್‌ನಲ್ಲಿರುವ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದ್ದರು. ರಣವೀರ್ ಮತ್ತು ದೀಪಿಕಾ ಕರಾವಳಿ ಪ್ರದೇಶದಲ್ಲಿ ನಿವೇಶನ ಖರೀದಿಸಿದ್ದಾರೆ. ಅದರಲ್ಲಿ ಎರಡು ಬಂಗಲೆಗಳು ಮತ್ತು ತೆಂಗಿನಕಾಯಿ ಮತ್ತು ವೀಳ್ಯದೆಲೆ ತೋಟಗಳಿವೆ.

'ಗಲ್ಲಿ ಬಾಯ್' ನಟ ಪ್ರಯಾಣದ ಸಮಯದಲ್ಲಿ ಮಲಗಿದ್ದಾಗ, ಡಿಪಿ ಅವರು ಕೆಳಗೆ ಮಲಗಿದ್ದ ಫೋಟೋ ಕ್ಲಿಕ್ಕಿಸಿದ್ದಾರೆ. ಅದನ್ನು ಅವರ ಅದ್ಭುತವಾದ ಬೆಳಗಿನ ನೋಟ ಎಂದು ಟ್ಯಾಗ್ ಮಾಡಿದ್ದಾರೆ. ಪೇಪರ್ವರ್ಕ್ ಮುಗಿದ ನಂತರ, ರಣವೀರ್ ಮತ್ತು ದೀಪಿಕಾ ಶೀಘ್ರದಲ್ಲೇ ತಮ್ಮ ಹೊಸ ಖರೀದಿಗೆ ಒಡೆಯರಾಗಲಿದ್ದಾರೆ.

ಬೆಂಗ​ಳೂ​ರಲ್ಲಿ 7 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀ​ದಿಸಿದ ದೀಪಿಕಾ

ಕಳೆದ ತಿಂಗಳಲ್ಲಿ ದೀಪಿಕಾ ಪಡುಕೋಣೆ ಬೆಂಗಳೂರಲ್ಲಿ ದುಬಾರಿ ಅಪಾರ್ಟ್ಮೆಂಟ್ ಖರೀದಿಸಿರುವುದು ಸುದ್ದಿಯಾಗಿದೆ. ನಟಿ ತನ್ನ ಸ್ವಗ್ರಾಮವಾದ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಮುಂಬಯಿಯಲ್ಲಿ, ರಣವೀರ್ ಮತ್ತು ದೀಪಿಕಾ ಪ್ರಭಾದೇವಿ ಪ್ರದೇಶದಲ್ಲಿ ಇರುವ ಒಂದು ಬೆಲೆಬಾಳುವ 4BHK ಫ್ಲಾಟ್ ನಲ್ಲಿ ವಾಸವಾಗಿದ್ದಾರೆ.

2010 ರಲ್ಲಿ ದೀಪಿಕಾ ಈ ಆಸ್ತಿಯನ್ನು ಖರೀದಿಸಿದ್ದಾರೆ. 2018 ರಲ್ಲಿ ರಣವೀರ್ ಸಿಂಗ್ ಜೊತೆ ಮದುವೆಯಾದ ನಂತರ, ದಂಪತಿಗಳು ಒಟ್ಟಿಗೆ ಆಕೆಯ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದಾರೆ. ಕೆಲಸದ ವಿಚಾರದಲ್ಲಿ ರಣವೀರ್ ಮತ್ತು ದೀಪಿಕಾ ಶೀಘ್ರದಲ್ಲೇ ಮದುವೆಯ ನಂತರ ಮೊದಲ ಬಾರಿಗೆ ಸಿಲ್ವರ್ ಸ್ಕ್ರೀನ್ ಅನ್ನು ಅಲಂಕರಿಸಲಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಅವರ ಪತ್ನಿ ರೋಮಿ ಭಾಟಿಯಾ ಅವರ ಪಾತ್ರಗಳನ್ನು ಮಾಡಲಿದ್ದಾರೆ.

ಈ ಜೋಡಿಯನ್ನು ಬಯೋಪಿಕ್ 83 ಸಿನಿಮಾದಲ್ಲಿ ಕಾಣಬಹುದು. ಇದಲ್ಲದೇ, ರಣವೀರ್ 'ಸರ್ಕಸ್', 'ಜಯೇಶ್ಭಾಯ್ ಜೋರ್ದಾರ್' ಮತ್ತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕೂಡ ಮಾಡಲಿದ್ದಾರೆ. ದೀಪಿಕಾ ಪಡುಕೋಣೆ ಶಾರೂಖ್ ಖಾನ್ ಜೊತೆ 'ಪಠಾಣ್', ಹೃತಿಕ್ ರೋಷನ್ ಜೊತೆ 'ಫೈಟರ್', ಶಕುನ್ ಬಾತ್ರಾ ಅವರ ಮುಂದಿನ 'ದಿ ಇಂಟರ್ನ್' ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!