ಕೇರಳ ವಿದ್ಯಾರ್ಥಿನಿಗೆ ಅಲ್ಲು ಅರ್ಜುನ್ ನೆರವು; ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ

By Shruthi KrishnaFirst Published Nov 12, 2022, 12:34 PM IST
Highlights

ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಕೇರಳದ ವಿದ್ಯಾರ್ಥಿನಿಗೆ ಸಹಾಯ ಹಸ್ತ ಚಾಚಿದ್ದಾರೆ. ವಿದ್ಯಾಭ್ಯಾಸಕ್ಕೆ ಪರದಾಡುತ್ತಿದ್ದ ವಿದ್ಯಾರ್ಥಿನಿಗೆ ಅಲ್ಲು ಅರ್ಜುನ್ ಸಹಾಯ ಮಾಡಿದ್ದಾರೆ.  

ಕೆಲವು ಸ್ಟಾರ್ ಕಲಾವಿದರು ರೀಲ್ ಮೇಲೆ ಮಾತ್ರವಲ್ಲದೇ ರಿಯಲ್ ಲೈಫ್‌ನಲ್ಲೂ ಹೀರೋ ಆಗುತ್ತಾರೆ. ಮಾನವೀಯ ಕೆಲಸಗಳ ಮೂಲಕ ಕೆಲವೇ ಕೆಲವು ಕಲಾವಿದರೂ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಕೇರಳ ಹುಡುಗಿಯೊಬ್ಬಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ರಿಯಲ್ ಹೀರೋ ಆಗಿದ್ದಾರೆ. ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಕೇರಳದ ನರ್ಸಿಂಗ್ ವಿದ್ಯಾರ್ಥಿಗೆ ಸಹಾಯ ಹಸ್ತ ಚಾಚಿದ್ದಾರೆ. ನರ್ಸಿಂಗ್ ಕೋರ್ಸ್ ಮೂಡುವ ಕನಸು ಹೊತ್ತಿರುವ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಆರ್ಥಿಕವಾಗಿ ಪರದಾಡುತ್ತಿದ್ದಾರೆ. ಹಣದ ಸಮಸ್ಯೆಯಿಂದ ತಮ್ಮ ಕನಸನ್ನು ಮರೆತ ಅನೇಕ ವಿದ್ಯಾರ್ಥಿಗಳಿದ್ದಾರೆ. ಓದಲು ಹಣವಿಲ್ಲದೆ ಪರದಾಡುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿಯ ಪರ ನಿಂತಿದ್ದಾರೆ ಅಲ್ಲು ಅರ್ಜುನ್. 

ಅಲ್ಲು ಅರ್ಜುನ್ ಸಹಾಯ ಹಸ್ತದ ಬಗ್ಗೆ ಕೇರಳದ ಅಲಪ್ಪುಜಾ ಜಿಲ್ಲಾಧಿಕಾರಿ ವಿ ಆರ್ ಕೃಷ್ಣ ತೇಜ ಬಹಿರಂಗ ಪಡಿಸಿದ್ದಾರೆ. 92 ವರ್ಸೆಂಟ್ ಮಾರ್ಕ್ಸ್ ಬಂದಿದ್ದ ವಿದ್ಯಾರ್ಥಿಯೊಬ್ಬಳಿಗೆ ನರ್ಸಿಂಗ್ ಕೋರ್ಸ್ ಮಾಡಲು ಹಣ ವಿಲ್ಲದೆ ಪರದಾಡುತ್ತಿದ್ದಳು. ಆಕೆ ಜಿಲ್ಲಾಧಿಕಾರಿ ಕೃಷ್ಣ ತೇಜ್ ಅವರ ಬಳಿ ಸಹಾಯ ಕೇಳಿ ಬಂದಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಕೊರೊನಾದಿಂದ ತಂದೆಯನ್ನು ಕಳೆದುಕೊಂಡ ವಿದ್ಯಾರ್ಥಿಗೆ ನರ್ಸಿಂಗ್ ಕೋರ್ಸ್ ಮಾಡುವ ಆಸೆ. ಆದರೆ ಹಣಕಾಸಿನ ಸಮಸ್ಯೆ ಇದೆ ಎಂದು ಬರೆದುಕೊಂಡಿದ್ದಾರೆ. ಬಳಿಕ ಜಿಲ್ಲಾಧಿಕಾರಿ, 'ನಾನು ಆಕೆಯ ಕಣ್ಣುಗಳಲ್ಲಿ ಭರವಸೆ ಮತ್ತು ಆತ್ಮವಿಶ್ವಾಸ ನೋಡಿದೆ. ಬಳಿಕ ಅಕೆಗೆ ಖಾಸಗಿ ಕಾಲೇಜಿನಲ್ಲಿ ಸೀಟು ಕೊಡಿಸಿದೆ'ಎಂದು ಹೇಳಿದ್ದಾರೆ. 

Pushpa2ಅಲ್ಲು ಅರ್ಜುನ್ ಇಲ್ಲದೇ ‘ಪುಷ್ಪ-2’ ಶೂಟಿಂಗ್ ಶುರು: ಕಾರಣ ಏನು ಗೊತ್ತಾ?

ಆಂಧ್ರ ಪ್ರದೇಶದ ಅಧಿಕಾರಿಯೊಬ್ಬರನ್ನು ಸಂಪರ್ಕ ಮಾಡಿದಾಗ ಅವರು ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಳಿ ಹೇಳಿದ್ದಾರೆ. ಅಲ್ಲು ಅರ್ಜುನ್ ತಕ್ಷಣ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ಒಂದು ವರ್ಷದ ಬದಲು ನಾಲ್ಕು ವರ್ಷದ ಕೋರ್ಸ್‌ನ ವೆಚ್ಚ ಮತ್ತು ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು  ನೋಡಿಕೊಳ್ಳುವುದಾಗಿ ಅಲ್ಲು ಅರ್ಜುನ್ ಹೇಳಿದ್ದಾರೆ. ಇದೀಗ ಆ ಬಾಲಕಿಯ ಅಡ್ಮಿಷನ್ ಕೂಡ ಆಗಿದೆ ಎಂದು ಜಿಲ್ಲಾಧಾರಿಕಾರಿ ಕೃಷ್ಣ ತಿಳಿಸಿದ್ದಾರೆ. 

'ಪುಷ್ಪ' ಪ್ಲಾಫ್ ಸಿನಿಮಾ, ಎಷ್ಟೋ ಪ್ರದರ್ಶಕರಿಗೆ ದೊಡ್ಡ ನಷ್ಟವಾಗಿದೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ನಿರ್ದೇಶಕ

'ಆಕೆ ಚೆನ್ನಾಗಿ ಓದುತ್ತಾಳೆ ಮತ್ತು ಭವಿಷ್ಯದಲ್ಲಿ ನರ್ಸ್ ಆಗುತ್ತಾಳೆ ಎನ್ನುವ ಭರವಸೆ ಇದೆ. ಅವಳು ತನ್ನ ತಾಯಿ ಮತ್ತು ಸಹೋದರನನ್ನು ನೋಡಿಕೊಳ್ಳುತ್ತಾಳೆ ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾಳೆ' ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಬಳಿಕ ಅಲ್ಲು ಅರ್ಜುನ್ ಮತ್ತು ಆ ವಿದ್ಯಾರ್ಥಿಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯಾವಾದ ತಿಳಿಸಿದರು.   
             

click me!