
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಹೊಸ ಸಿನಿಮಾ ಜೈಲರ್ ಲುಕ್ ರಿಲೀಸ್ ಆಗಿದೆ. ಟೈಟಲ್ ಮೂಲಕವೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಜೈಲರ್ ಇದೀಗ ಫಸ್ಟ್ ಲುಕ್ ಮೂಲಕ ಥ್ರಿಲ್ ಹೆಚ್ಚಿಸಿದೆ. ಇಂದು (ಆಗಸ್ಟ್ 22) ರಜನಿಕಾಂತ್ ಜೈಲರ್ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಸೂಪರ್ ಸ್ಟಾರ್ ಮತ್ತೊಮ್ಮೆ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸಾಲ್ಟ್ ಅಂಡ ಪೆಪ್ಪರ್ ಲುಕ್‌ನಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಸೂಪರ್ ಸ್ಟಾರ್ ಟಕ್ ಇನ್ ಮಾಡಿ ಹಿಂದೆ ಕೈ ಕಟ್ಟಿ ನಿಂತಿದ್ದಾರೆ. 71 ವರ್ಷದ ನಟ ರಜನಿಕಾಂತ್ ಲುಕ್ ಅಭಿಮಾನಿಗಳು ನಿರೀಕ್ಷೆ ಹೆಚ್ಚಿಸಿದೆ.
ಜೈಲರ್ ಸಿನಿಮಾಗೆ ನೆಲ್ಸನ್ ದಿಲೀಪ್‌ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸನ್ ಪಿಕ್ಚರ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಇನ್ನು ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೊನೆಯದಾಗಿ ಅಣ್ಣಾತೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ಜೈಲರ್ ಆಗಿ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸೂಪರ್ ಸ್ಟಾರ್‌ನನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಇಂದು ಪೋಸ್ಟರ್ ರಿಲೀಸ್ ಮಾಡುವ ಜೊತೆಗೆ ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ಈ ಬಗ್ಗೆಯೂ ಸನ್ ಪಕ್ಚರ್ಸ್ ಮಾಹಿತಿ ಹಂಚಿಕೊಂಡಿದೆ.
ಅಂದಹಾಗೆ ಜೈಲರ್ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ಈ ಬಗ್ಗೆ ಇಂದು ರಿಲೀಸ್ ಆದ ಪೋಸ್ಟರ್ ನಲ್ಲಿ ಯಾವುದೇ ಸುಳಿವು ನೀಡಿಲ್ಲ. ಅಲ್ಲದೆ ಸನ್ ಪಿಕ್ಚರ್ಸ್ ಶಿವಣ್ಣ ಹೆಸರನ್ನು ಸಹ ಟ್ಯಾಗ್ ಮಾಡಿಲ್ಲ. ಆದರೆ ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ನಟಿಸುವುದು ಬಹುತೇಕ ಖಚಿತ ಈ ಹಿಂದೆ ಶಿವಣ್ಣ ಕೂಡ ಈ ಬಗ್ಗೆ ಬಹಿರಂಗ ಪಡಿಸಿದ್ದರು. ರಜನಿಕಾಂತ್ ಜೊತೆ ನಟಿಸುವುದು ತುಂಬಾ ಖುಷಿ ಎಂದಿದ್ದರು. ಇದೀಗ ರಜನಿಕಾಂತ್ ಲುಕ್ ರಿವೀಲ್ ಆಗುತ್ತಿದ್ದಂತೆ ಶಿವಣ್ಣ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಕನ್ನಡ ಅಭಿಮಾನಿ ಮದುವೆಗೆ ಮಿಸ್; ಮನೆಗೆ ಕರೆಸಿ ನವದಂಪತಿಗೆ ಆತಿಥ್ಯ ನೀಡಿದ ರಜನಿಕಾಂತ್
ಜೈಲರ್ ಸಿನಿಮದಲ್ಲಿ ನಟಿಸುವ ಮೂಲಕ ಶಿವಣ್ಣ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಜನಿಕಾಂತ್‌ಗಾಗಿ ಶಿವಣ್ಣ ತಮಿಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಹಾಗಾಗಿ ಸದ್ಯ ಶಿವಣ್ಣನ ಪಾತ್ರ ಮತ್ತು ಲುಕ್ ಬಗ್ಗೆ ಕನ್ನಡ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ತಮಿಳುನಾಡಿನಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಪಾವತಿಸುವ ನಟ ರಜನಿಕಾಂತ್; ತೆರಿಗೆ ಇಲಾಖೆ ಸನ್ಮಾನ
ನಿರ್ದೇಶಕ ನೆಲ್ಸನ್ ಕೊನೆಯ ಸಿನಿಮಾ ಬೀಸ್ಟ್ ಹೀನಾಯ ಸೋಲು ಕಂಡಿತ್ತು. ದಳಪತಿ ವಿಜಯ್ ನಾಯಕನಾಗಿ ನಟಿಸಿದ್ದ ಬೀಸ್ಟ್ ಬಾಕ್ಸ್ ಆಫೀಸ್‌ನಲ್ಲೂ ಸಕ್ಸಸ್ ಕಂಡಿಲ್ಲ. ಹಾಗಾಗಿ ಈ ಸಿನಿಮಾ ನೆಲ್ಸನ್ ಅವರಿಗೆ ತುಂಬಾ ಮುಖ್ಯವಾಗಿದೆ. ಸದ್ಯ ರಜನಿಕಾಂತ್ ಜೊತೆಗೆ ಕನ್ನಡದ ಸ್ಟಾರ್ ನಟನನ್ನು ಸೇರಿಸಿಕೊಂಡು ಜೈಲರ್ ಮಾಡುತ್ತಿರುವುದು ದೊಡ್ಡ ಚಾಲೆಂಜ್ ಆಗಿದೆ. ಜೈಲರ್ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ರಿವೀಲ್ ಆಗುವ ಸಾದ್ಯತೆ ಇದೆ. ಅಲ್ಲಿಯ ವರೆಗೂ ಕಾಯಲೇಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.