ನಟನಾಗಲು ಇಷ್ಟಪಡದ ಆರ್ಯನ್‌: ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ!

By Suvarna News  |  First Published Oct 4, 2021, 3:04 PM IST

* ಡ್ರಗ್ಸ್‌ ನಶೆಯಲ್ಲಿ ಬಾಲಿವುಡ್‌

* ಸಮುದ್ರ ಮಧ್ಯೆ ಡ್ರಗ್ಸ್‌ ಪಾರ್ಟಿ: ಶಾರೂಖ್‌ಖಾನ್‌ ಪುತ್ರ ಸೆರೆ

* ಆರ್ಯನ್‌ಖಾನ್‌ ಸೇರಿ 8 ಜನರು ಮುಂಬೈ ಎನ್‌ಸಿಬಿ ಬಲೆಗೆ

* ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ


ಮುಂಬೈ(ಅ.04): ಬಾಲಿವುಡ್‌ನಲ್ಲಿ(Bollywood) ಮತ್ತೆ ಮಾದಕವಸ್ತು ಸದ್ದು ಮಾಡಿದೆ. ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯಲ್ಲಿ(Rave Party) ಪಾಲ್ಗೊಂಡಿದ್ದ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌(Shah Rukh Khan) ಅವರ ಪುತ್ರ ಆರ್ಯನ್‌ ಖಾನ್‌(Aryan Khan) ಸೇರಿದಂತೆ 8 ಜನರು ಮಾದಕ ದ್ರವ್ಯ ನಿಗ್ರಹ ದಳ (ಎನ್‌ಸಿಬಿ)ಕ್ಕೆ ಸಿಕ್ಕಿಬಿದ್ದಿದ್ದಾರೆ. ಆ ವೇಳೆ ಶಾರುಖ್‌ ಪುತ್ರ ಸೇರಿದಂತೆ ಇನ್ನಿತರ ಆರೋಪಿಗಳಿಂದ ಎಂಡಿಎಂಎ, ಎಕ್ಸ್‌ಟೆಸಿ, ಕೊಕೇನ್‌, ಎಂಡಿ ಹಾಗೂ ಚರಸ್‌ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಬಾಲಿವುಡ್‌ನಲ್ಲಿ ಮಾದಕ ವಸ್ತು ಸೇವನೆ ಹೊಸದಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿ ಖ್ಯಾತನಾಮರ ಕುಟುಂಬದ ಸದಸ್ಯರೊಬ್ಬರು ಮಾಲು ಸಮೇತ ಸಿಕ್ಕಿಬಿದ್ದಿದ್ದು ಇದೇ ಮೊದಲು. ಹೀಗಾಗಿ ಈ ಪ್ರಕರಣ ಮತ್ತೊಮ್ಮೆ ಬಾಲಿವುಡ್‌ ಮತ್ತು ಮಾದಕ ವಸ್ತು ನಂಟಿನ ಕರಾಳ ಮುಖವನ್ನು ಬಯಲು ಮಾಡಿದೆ.

Tap to resize

Latest Videos

ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ

ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಅವರ ಹಿರಿಯ ಪುತ್ರನಾದ ಆರ್ಯನ್‌ ಖಾನ್‌ (24) ತನ್ನ ತಂದೆ ದೊಡ್ಡ ನಟನಾದರೂ ತನಗೆ ನಟನೆಯಲ್ಲಿ ಆಸಕ್ತಿ ಇಲ್ಲ. ನಿರ್ದೇಕನಾಗಲು ಇಷ್ಟಎಂದು ಹೇಳಿದ್ದ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಆರ್ಯನ್‌ ಲಂಡನ್‌ನ ಸೆವೆನ್‌ ಓಕ್ಸ್‌ ಶಾಲೆಯಲ್ಲಿ ತನ್ನ ಪ್ರೌಢ ಶಿಕ್ಷಣವನ್ನು ಮುಗಿಸಿದ್ದ.

ಲಯನ್‌ ಕಿಂಗ್‌ ಸಿನಿಮಾಗೆ ಡಬ್‌:

2019ರಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಹಾಲಿವುಡ್‌ ಸಿನಿಮಾ ಲಯನ್‌ ಕಿಂಗ್‌ನ ಮುಖ್ಯ ಪಾತ್ರವಾದ ಸಿಂಬಾ ಪಾತ್ರಕ್ಕೆ ಆರ್ಯನ್‌ ಧ್ವನಿ ನೀಡಿದ್ದ. 2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ವೇಳೆ ತಂದೆ ಮಗ ಇಬ್ಬರು ಮುಫಾಸ ಮತ್ತು ಸಿಂಬಾ ಎಂದು ಬರೆದಿರುವ ಟೀ-ಶರ್ಟ್‌ಗಳನ್ನು ಧರಿಸಿ ಈ ವಿಷಯವನ್ನೂ ವಿಶಿಷ್ಟವಾಗಿ ಜಗತ್ತಿಗೆ ತಿಳಿಸಿದ್ದರು.

ನಟನಾಗಲು ಇಷ್ಟಪಡದ ಆರ್ಯನ್‌:

ಶಾರುಖ್‌ ದೇಶದ ಖ್ಯಾತ ನಟನಾಗಿದ್ದರೂ ಆರ್ಯನ್‌ ತನಗೆ ನಟನಾಗಲು ಇಷ್ಟವಿಲ್ಲ ಎಂದು ಹೇಳಿದ್ದ. ಈ ವಿಷಯವನ್ನು ಸಂದರ್ಶನದ ವೇಳೆ ಬಹಿರಂಗ ಪಡಿಸಿದ್ದ ಶಾರುಖ್‌, ‘ನನ್ನ ಮಗ ನೋಡಲು ಸುಂದರವಾಗಿದ್ದಾನೆ ಆದರೆ ಆತನಿಗೆ ನಟನಾಗುವ ಹಂಬಲವಿಲ್ಲ. ಅವನೊಬ್ಬ ಒಳ್ಳೆಯ ಬರಹಗಾರ ಆಗಬಹುದು’ ಎಂದು ಹೇಳಿದ್ದರು.

ಕಭಿ ಕುಷಿ ಕಭಿ ಗಮ್‌ ಸಿನಿಮಾದಲ್ಲಿ ನಟನೆ

ಶಾರುಖ್‌ ಖಾನ್‌ ಅವರ ಪ್ರಸಿದ್ಧ ಸಿನಿಮಾ ಕಭಿ ಕುಷಿ ಕಭಿ ಗಮ್‌ನಲ್ಲಿ ಶಾರುಖ್‌ ಖಾನ್‌ ಅವರ ಬಾಲ್ಯದ ಪಾತ್ರವನ್ನು ಆರ್ಯನ್‌ ನಿರ್ವಹಿಸಿದ್ದ. ಅಲ್ಲದೇ ಶಾರುಖ್‌ ಮತ್ತು ಪ್ರೀತಿ ಜಿಂಟಾ ಅಭಿನಯದ ಕಭಿ ಅಲ್ವಿದಾ ನಾ ಕೆಹೆನಾ ಸಿನಿಮಾದಲ್ಲೂ ಚಿಕ್ಕ ಪಾತ್ರ ನಿರ್ವಹಿಸಿದ್ದ.

click me!