ರಣವೀರ್​ಗೂ ಮೊದ್ಲು ಆಲಿಯಾಗೆ ಹೀಗೆಲ್ಲಾ ಕ್ರಷ್ ಇತ್ತಾ? ಕನ್ಯತ್ವ ಕಳಕೊಂಡ ವಿಷ್ಯ ಬಿಸಿಬಿಸಿ ಚರ್ಚೆ!

Published : Sep 24, 2023, 04:28 PM IST
ರಣವೀರ್​ಗೂ ಮೊದ್ಲು  ಆಲಿಯಾಗೆ ಹೀಗೆಲ್ಲಾ ಕ್ರಷ್ ಇತ್ತಾ? ಕನ್ಯತ್ವ ಕಳಕೊಂಡ ವಿಷ್ಯ ಬಿಸಿಬಿಸಿ ಚರ್ಚೆ!

ಸಾರಾಂಶ

ರಣವೀರ್​ ಸಿಂಗ್​ಗೂ ಮೊದ್ಲು ಬೇರೊಬ್ಬ ಸೂಪರ್​ಸ್ಟಾರ್​ ಮೇಲೆ ತಮಗೆ ಕ್ರಷ್​ ಇರುವುದಾಗಿ ಆಲಿಯಾ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ  ಕನ್ಯತ್ವ ಕಳಕೊಂಡ ವಿಷಯ ಮತ್ತೆ ಚರ್ಚೆಯಾಗುತ್ತಿದೆ.   

ಬಾಲಿವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದು ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರದ್ದು. ಆಲಿಯಾ ಭಟ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು.  ವೃತ್ತಿಜೀವನದುದ್ದಕ್ಕೂ, ಅವರು ಹಲವು ಹಿಟ್​ ಚಿತ್ರಗಳನ್ನು ನೀಡಿದ್ದಾರೆ.  ಈ ಹಿಂದೆ ನಟಿ ಆಲಿಯಾ ಭಟ್ ಎರಡು ವರ್ಷಗಳ ಹಿಂದೆ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದು,  ಸುಂದರವಾದ ಹೆಣ್ಣು ಮಗುವಿಗೆ ರಾಹಾಗೆ ಅಮ್ಮನಾಗಿದ್ದಾರೆ. ಇದರ ಹೊರತಾಗಿಯೂ ಈಕೆ ಈಗಲೂ ಮೋಸ್ಟ್​ ವಾಂಟೆಡ್​ ನಟಿಯಾಗಿದ್ದಾರೆ. ರಣಬೀರ್‌ ಕಪೂರ್‌ ಜೊತೆಗಿನ ತಮ್ಮ ಪ್ರೇಮ ಸಂಬಂಧದ ಬಗ್ಗೆ ಕೆಲ ವರ್ಷಗಳ ಹಿಂದೆ ಹೇಳಿದ್ದ ಆಲಿಯಾ ಭಟ್‌, ನನ್ನ 11ನೇ ವಯಸ್ಸಿನಲ್ಲಿ ನಾನು ರಣಬೀರ್‌ರನ್ನು ಭೇಟಿಯಾಗಿದ್ದೆ. ಬ್ಲ್ಯಾಕ್‌ ಸಿನಿಮಾದ ಆಡಿಷನ್‌ನಲ್ಲಿ ಅವರ ಪರಿಚಯವಾಗಿತ್ತು. ಅಂದಿನಿಂದಲೇ ನನಗೆ ಅವರ ಮೇಲೆ ಕ್ರಶ್‌ ಆಗಿತ್ತು ಎಂದು ವಿವರಿಸಿದ್ದರು.  

ಆದರೆ ಇದೀಗ, ನಟಿ ಶಾಕಿಂಗ್​ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನೆಂದರೆ, ತಮ್ಮ ಮೊದಲ ಕ್ರಷ್​ ರಣಬೀರ್​ ಕಪೂರ್​ ಅಲ್ಲ ಎಂದು ಹೇಳಿದ್ದಾರೆ. ಮದುವೆಗೂ ಮೊದಲು  ತಾವು ಈ ಹಿಂದೆ ಕೆಲಸ ಮಾಡಿದ ಒಬ್ಬ ನಟನ ಮೇಲೆ ಭಾರಿ ಕ್ರಶ್ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.   ಇನ್‌ಸ್ಟೈಲ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ,  ನಟಿ ಆಲಿಯಾ ಅವರಿಗೆ  ಮೊದಲ ಸೆಲೆಬ್ರಿಟಿ ಕ್ರಶ್ ಯಾರು ಎಂದು ಕೇಳಲಾಯಿತು. ಅದಕ್ಕೆ ಪ್ರತಿಯಾಗಿ ಶಾರುಖ್ ಖಾನ್ ಎಂದು ಆಲಿಯಾ ಹೇಳಿದ್ದಾರೆ! ಶಾರುಖ್​ ಮತ್ತು  ಆಲಿಯಾ ಭಟ್​ ಇಬ್ಬರೂ ಈ ಹಿಂದೆ ಗೌರಿ ಶಿಂಧೆಯವರ ಡಿಯರ್ ಜಿಂದಗಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕಿಂಗ್ ಖಾನ್ ಆಲಿಯಾ ಮತ್ತು ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ಮತ್ತು ಅವರು ನಿರ್ಮಾಪಕರಾಗಿ ಆಲಿಯಾ ಅವರ ಚೊಚ್ಚಲ ಚಲನಚಿತ್ರವಾದ ಡಾರ್ಲಿಂಗ್ಸ್‌ನಲ್ಲಿ ಸಹ ಸಹಕರಿಸಿದರು.

ಅರೆರೆ ಆಲಿಯಾ ತುಟಿಗೆ ಇದೇನಾಗೋಯ್ತು? ಬರ್ತ್​ಡೇ ಪಾರ್ಟಿಯಲ್ಲಿ ಗುಸುಗುಸು ಪಿಸುಪಿಸು

ಈ ಹಿಂದೆ, ಕಾಫಿ ವಿಥ್ ಕರಣ್ ಸಂಚಿಕೆಯಲ್ಲಿ, ಆಲಿಯಾ ಅವರು ಶಾರುಖ್​ ಖಾನ್​ ಜೊತೆ  ಕಾಣಿಸಿಕೊಂಡಿದ್ದರು, ಅಲ್ಲಿ ಆಲಿಯಾ ಶಾರುಖ್​ ಅವರನ್ನು ಹೊಗಳಿದ್ದರು.  "ನಾನು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದರೂ ಸಹ, ಶಾರುಖ್​ ಅವರೇ ನನ್ನ ಕ್ರಷ್​. ನಾನು  ನಾನು ಯಾವಾಗಲೂ ಅವರನ್ನು ಪ್ರೀತಿಸುತ್ತೇನೆ ಎಂದಿದ್ದರು. ಇದೀಗ ಮತ್ತೊಮ್ಮೆ ಮೊದಲ ಕ್ರಷ್​ ಬಗ್ಗೆ ಹೇಳಿದ್ದಾರೆ. ಹಿಂದೊಮ್ಮೆ ಆಲಿಯಾ ಭಟ್​ ತಾವು ಚಿಕ್ಕ ವಯಸ್ಸಿನಲ್ಲಿಯೇ ಕನ್ಯತ್ವ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಮೊದಲ ಕ್ರಷ್​ ಬಗ್ಗೆ ಮಾತನಾಡುತ್ತಲೇ ಆ ವಿಷಯವನ್ನು ಮತ್ತೆ ಕೆದಕಲಾಗುತ್ತಿದೆ. 11ನೇ ವಯಸ್ಸಿನಲ್ಲಿಯೇ ರಣವೀರ್​ ಜೊತೆ ಕ್ರಷ್​, ಅದಕ್ಕೂ ಮುನ್ನ ಶಾರುಖ್​ ಜೊತೆ ಹಾಗಿದ್ರೆ ಕನ್ಯತ್ವ ಕಳೆದುಕೊಂಡದ್ದು ಹೇಗೆ ಎಂದು ಟ್ರೋಲಿಗರು ಪ್ರಶ್ನಿಸುತ್ತಿದ್ದಾರೆ. 
 
 ಕೆಲಸದ ವಿಷಯದಲ್ಲಿ ಹೇಳುವುದಾದರೆ,  ಆಲಿಯಾ  ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಯಶಸ್ಸಿನಲ್ಲಿ ಮುಳುಗಿದ್ದಾರೆ. ಕರಣ್ ಜೋಹರ್ ನಿರ್ದೇಶನದಲ್ಲಿ ರಣವೀರ್ ಸಿಂಗ್, ಧರ್ಮೇಂದ್ರ, ಶಬಾನಾ ಅಜ್ಮಿ, ಮತ್ತು ಜಯಾ ಬಚ್ಚನ್ ಸಹ ನಟಿಸಿದ್ದಾರೆ. ಬಿಡುಗಡೆಯಾದ ನಂತರ, ಚಿತ್ರವು ಪ್ರಮುಖ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿತು. ಅವರು ಈ ವರ್ಷ ಆಕ್ಷನ್ ಥ್ರಿಲ್ಲರ್ ಹಾರ್ಟ್ ಆಫ್ ಸ್ಟೋನ್‌ನೊಂದಿಗೆ ಹಾಲಿವುಡ್‌ಗೆ ಪದಾರ್ಪಣೆ ಮಾಡಿದರು, ಇದರಲ್ಲಿ ಗಾಲ್ ಗಡೋಟ್ ಸಹ-ನಟಿಸಿದರು.
ನಟಿ ಆಲಿಯಾ, ಪೂಜಾ ಭಟ್​ರ ಮಗಳೆ? ಶಾಕಿಂಗ್​ ಸುದ್ದಿಗೆ ಕೊನೆಗೂ ಮೌನ ಮುರಿದ ಪೂಜಾ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!