ತಮನ್ನಾ ಬಾಯ್‌ ಫ್ರೆಂಡ್‌ಗೆ 'ಮೊದಲು ಮದ್ವೆಯಾಗು, ಆಮೇಲೆ ಮಗು ಮಾಡ್ಕೋ' ಅಂದ ಫ್ಯಾನ್ಸ್!

Published : Sep 24, 2023, 12:44 PM ISTUpdated : Sep 24, 2023, 12:50 PM IST
ತಮನ್ನಾ ಬಾಯ್‌ ಫ್ರೆಂಡ್‌ಗೆ 'ಮೊದಲು ಮದ್ವೆಯಾಗು, ಆಮೇಲೆ ಮಗು ಮಾಡ್ಕೋ' ಅಂದ ಫ್ಯಾನ್ಸ್!

ಸಾರಾಂಶ

ನಟಿ ತಮನ್ನಾಗೆ 'ಮೇಡಂ, ಮದುವೆ ಯಾವಾಗ ಆಗ್ತೀರಿ?' ಎಂಬ ಪ್ರಶ್ನೆಯನ್ನು ಬಹಳಷ್ಟು ಬಾರಿ ಕೇಳಲಾಗಿದೆ. 'ಟೈಮ್ ಕೂಡಿ ಬರಬೇಕು' ಎಂದು ಹೇಳುತ್ತಲೇ ನಟಿ ಪ್ರಶ್ನೆಯನ್ನು 'ಸೈಡ್‌'ಲೈನ್‌'ಗೆ ಸರಿಸುತ್ತಲೇ ಇದ್ದಾರೆ. ಆದರೆ, ವಿಜಯ್ ವರ್ಮಾ ಕಥೆಯೇ ಬೇರೆ. ಅವರಿಗೆ ಮದುವೆಯ ಚಿಂತೆ ಹತ್ತಿಕೊಂಡುಬಿಟ್ಟಿದೆ.

ಭಾರತದಾದ್ಯಂತ 'ಹಾಟ್ ಲುಕ್' ಮೂಲಕ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈಗ ತಮನ್ನಾ ಸುದ್ದಿಯಲ್ಲಿರುವ ಅವರ 'ಬಾಯ್ ಫ್ರಂಡ್' ಕಾರಣಕ್ಕೆ. ತಮನ್ನಾ ಬಾಯ್ ಫ್ರಂಡ್ ವಿಜಯ್ ವರ್ಮಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ 'ನನಗೆ ಮಕ್ಕಳನ್ನು ಮಾಡಿಕೊಳ್ಳಬೇಕೆಂಬ ಆಸೆಯಾಗಿದೆ" ಎಂದಿದ್ದಾರೆ. ವಿಜಯ್ ಈ ಮಾತು ಬಾಲಿವುಡ್ ಸೇರಿದಂತೆ ಇಡೀ ಚಿತ್ರರಂಗವನ್ನು ನಗೆಗಡಲಿನಲ್ಲಿ ತೇಲಿಸಿದೆ. ಕಾರಣ, ಅವರಿಗಿನ್ನೂ ಮದುವೆಯಾಗಿಲ್ಲ!

ಹೌದು, ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಡೇಟಿಂಗ್ ಮಾಡುತ್ತಿರುವ ಸಂಗತಿ ಬಹಳಷ್ಟು ಜನರಿಗೆ ಗೊತ್ತು. 2023ರ ಹೊಸ ವರ್ಷಾಚರಣೆ ವೇಳೆ ಅವರಿಬ್ಬರೂ 'ಲಿಪ್ ಲಾಕ್' ಮಾಡಿಕೊಂಡಿದ್ದು ಬಿಟೌನ್ ದಾಟಿಯೂ ಸುದ್ದಿಯಾಗಿದೆ. ಆದರೆ ಅವರಿನ್ನೂ ಮದುವೆಯಾಗಿಲ್ಲ, ಕಾರಣ, ಬಹುಶಃ ಕೆರಿಯರ್ ಕಾನ್ಸನ್ಟ್ರೇಶನ್ ಇರಬಹುದು. 'ಲಸ್ಟ್ ಸ್ಟೋರೀಸ್' ಚಿತ್ರದ ಬಳಿಕ ತಮನ್ನಾ-ವಿಜಯ್ ಇನ್ನಷ್ಟು ಹತ್ತಿರವಾಗಿದ್ದಾರೆ. 

ಅಲ್ಲಿಂದ ಶುರುವಾಗಿದೆ ಅವರಿಬ್ಬರನ್ನು ಕಂಡಾಗ ಪ್ರಶ್ನೆಗಳ ಸುರಿಮಳೆ! ನಟಿ ತಮನ್ನಾಗೆ 'ಮೇಡಂ, ಮದುವೆ ಯಾವಾಗ ಆಗ್ತೀರಿ?' ಎಂಬ ಪ್ರಶ್ನೆಯನ್ನು ಬಹಳಷ್ಟು ಬಾರಿ ಕೇಳಲಾಗಿದೆ. 'ಟೈಮ್ ಕೂಡಿ ಬರಬೇಕು' ಎಂದು ಹೇಳುತ್ತಲೇ ನಟಿ ಪ್ರಶ್ನೆಯನ್ನು ಸೈಡ್‌ಲೈನ್‌ಗೆ ಸರಿಸುತ್ತಲೇ ಇದ್ದಾರೆ. ಆದರೆ, ವಿಜಯ್ ವರ್ಮಾ ಕಥೆಯೇ ಬೇರೆ. ಅವರಿಗೆ ಮದುವೆಯ ಚಿಂತೆ ಹತ್ತಿಕೊಂಡುಬಿಟ್ಟಿದೆ.

ನೋಡೋಕೆ ಕೋಲಿನಂತಿರುವೆ, ಶಾರೂಕ್‌ ಖಾನ್‌ ಗೇಲಿ ಮಾಡಿದ್ದ ಬಾಲಿವುಡ್‌ ಖ್ಯಾತ ನಟಿ!

ಹೌದು, ಇತ್ತೀಚಿಗೆ ವಿಜಯ್ ವರ್ಮಾ ಹೇಳಿರುವ ಮಾತು ಅವರಿಗೆ ಮದುವೆ ಚಿಂತೆ ಶುರುವಾಗಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ. ಅದಕ್ಕೆ ಕಾರಣ ನಟಿ ಕರೀನಾ ಕಪೂರ್! ಇತ್ತೀಚೆಗೆ, 'ಜಾನೇ ಜಾನ್' ಚಿತ್ರದಲ್ಲಿ ಕರೀನಾ-ವಿಜಯ್ ಒಟ್ಟಿಗೇ ಕೆಲಸ ಮಾಡಿದ್ದಾರೆ. ಆ ವೇಳೆ ಕರೀನಾ ಕಪೂರ್ ತಮ್ಮ ಇಡೀ ಫ್ಯಾ,ಮಿಲಿ ಜತೆ ಬಂದಿದ್ದು, ಅಲ್ಲಿ ಅವರ ಕುಟುಂಬದ ಖುಷಿ  ನೋಡಿ  ವಿಜಯ್ ವರ್ಮಾ ಮನಸೋತಿದ್ದಾರೆ. ಬಳಿಕ ಅವರಿಗೆ ತಮಗೂ ಮಕ್ಕಳು ಬೇಕು, ಫ್ಯಾಮಿಲಿ ಮಾಡಿಕೊಳ್ಳಬೇಕು ಎನಿಸಿದೆಯಂತೆ.

ನಾನು ನಂದಿನಿ... ಹಾಡಿಗೆ ನಟಿ ರಮ್ಯಾ ರೀಲ್ಸ್​ ವೈರಲ್​: ಇವ್ಳು ನಮ್​ ನಂದು ಎಂದ ಫ್ಯಾನ್ಸ್​ 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರೀನಾ 'ನೀವು ಸರಿಯಾದ ರೂಟ್‌ನಲ್ಲಿ ಇದ್ದೀರಿ ಎನಿಸುತ್ತಿದೆ. ನೀವು ನನ್ನಿಂದ ಪ್ರೇರಣೆ ಪಡೆದಿರುವುದು ಒಳ್ಳೆಯದು. ಆದಷ್ಟು ಬೇಗ ನಿಮ್ಮ ಆಸೆ ಕೈಗೂಡಲಿ' ಎಂದಿದ್ದಾರೆ. ಆದರೆ ನೆಟ್ಟಿಗರು ಇ ಬಗ್ಗೆ 'ಮೊದಲು ಮದುವೆಯಾಗಪ್ಪ ಮಾರಾಯ!, ಬಳಿಕ ಮಗು ಮಾಡಿಕೋ' ಎಂದು ವಿಜಯ್ ಕಾಲೆಳಿದಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ನಟಿ ತಮನ್ನಾ ಮಾತ್ರ ತಮ್ಮ ಬಾಯಿ ಮುಚ್ಚಿಕೊಂಡೇ ಇದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ