ಬೆತ್ತಲಾದರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆ

By Suchethana D  |  First Published Jun 14, 2024, 9:45 PM IST

ಅರೆನಗ್ನವಾದ್ರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆಯಾಗಿದೆ. ಏನಿದು ವಿಡಿಯೋ? 
 


ಕೆಲ ತಿಂಗಳ ಹಿಂದೆ, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ ಫೇಕ್​ ವಿಡಿಯೋ ದೇಶಾದ್ಯಂತ ಭಾರಿ ಹಲ್​ಚಲ್​ ಸೃಷ್ಟಿಸಿತ್ತು. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್​ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್​ ಫೇಕ್​. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಯಿತು.  ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬಾತ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಲಾಗಿತ್ತು. ಇದಾಗಲೇ ಜಾರಾ ಅವರು ಇದರಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಜೊತೆಗೆ ಈ ರೀತಿಯಾದುದಕ್ಕೆ ಅವರು ವಿಷಾದ ಕೂಡ ವ್ಯಕ್ತಪಡಿಸಿದ್ದರು.  ಈ ವಿಡಿಯೋದ ಮಾರ್ಫಿಂಗ್‌ನಲ್ಲಿ ತಾವು ಭಾಗಿಯಾಗಿಲ್ಲ ಎಂದು Instagram ಕೂಡ ಹೇಳಿತ್ತು. ನಂತರ ಆರೋಪಿಯೊಬ್ಬನನ್ನು ಅರೆಸ್ಟ್​ ಮಾಡಿದ್ರೂ ಇದುವರೆಗೆ ಆ ವಿಷಯದ ಅಪ್​ಡೇಟ್​ ಬಂದಿಲ್ಲ. 

ಇದರ ಬೆನ್ನಲ್ಲೇ ಆಲಿಯಾ ಭಟ್​ ಸೇರಿದಂತೆ ಹಲವಾರು ಚಿತ್ರತಾರೆಯ ಡೀಪ್​ಫೇಕ್​ ವಿಡಿಯೋ ವೈರಲ್​  ಆಗಿವೆ. ಆದರೆ ಬಹುತೇಕ ಎಲ್ಲಾ ವಿಡಿಯೋಗಳು ಹಾಗೂ ಫೋಟೋಗಳಲ್ಲಿ ನಟಿಯರು ಅರೆಬರೆ ಡ್ರೆಸ್​ ಹಾಕಿಕೊಂಡು ದೇಹ ಪ್ರದರ್ಶನ ಮಾಡುವಂತೆ ಕಾಣಿಸುತ್ತಿದೆ. ಅಷ್ಟಕ್ಕೂ ನಟಿಯರು ಇಂಥ ಡ್ರೆಸ್​ ಹಾಕುವುದು ಮಾಮೂಲು.  ಆದರೆ ಡೀಪ್​ಫೇಕ್​ನಲ್ಲಿ ಈ ರೀತಿಯದ್ದು ಸೃಷ್ಟಿಯಾದಾಗ ಸಾಮಾನ್ಯ ಮಹಿಳೆಯರ ಗತಿ ಏನು ಎನ್ನುವ ಸವಾಲು ಉಂಟಾಗುತ್ತದೆ. ಇದರಿಂದ ಎಐ ಬಹಳ ತಲೆನೋವಾಗಿ ಪರಿಣಮಿಸುವುದು ಉಂಟು. ಆದರೆ ಇದೀಗ ಅಚ್ಚರಿ ಎಂದರೆ, ಆಲಿಯಾ ಭಟ್​ ಅವರು ಫುಲ್​ ಡ್ರೆಸ್​ ಹಾಕಿಕೊಂಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ನೋಡಿದರೆ ಆಲಿಯಾ ಅಲ್ಲ ಎನ್ನಲು ಸಾಧ್ಯವೇ ಇಲ್ಲ. ಇದರಲ್ಲಿ ನಟಿ ಕಪ್ಪು ಕುರ್ತಾ ಧರಿಸಿ ರೆಡಿಯಾಗುತ್ತಿರುವುದನ್ನು ನೋಡಬಹುದು. ವಿಶೇಷ ಸಂಗತಿ ಏನೆಂದರೆ ಅರೆಬರೆ ಡ್ರೆಸ್​ ಹಾಕಿಕೊಂಡು ಸಂಪೂರ್ಣ ದೇಹ ಪ್ರದರ್ಶನ ಮಾಡಿದಾಗಲೂ ಕಾಣಲು ಸಿಗದಷ್ಟು ವ್ಯೂಸ್​ ಈ ಫುಲ್​ಡ್ರೆಸ್​ಗೆ ಸಿಕ್ಕಿದೆ. ಇದರ ವಿಡಿಯೋಗೆ ಎರಡರು ಕೋಟಿ ವ್ಯೂಸ್​ ಬಂದಿದ್ದು ದಾಖಲೆ ಮಾಡಿದೆ. 

Tap to resize

Latest Videos

ಹನಿಮೂನ್‌ನಲ್ಲಿ ಯಾರಾದ್ರೂ ಬಟ್ಟೆ ಧರಿಸ್ತಾರಾ ಎನ್ನುತ್ತಲೇ ತಮ್ಮ ಮಧುಚಂದ್ರದ ಗುಟ್ಟು ಬಿಚ್ಚಿಟ್ಟ ಆಲಿಯಾ!

ಅಂದಹಾಗೆ ಈ ರೀತಿ ರೆಡಿಯಾಗುತ್ತಿರುವ ವಿಡಿಯೋ ಮಾಡುವುದು ಈಗಿನ ಟ್ರೆಂಡ್​ ಆಗಿದೆ. ಅದಕ್ಕೆ  “ಗೆಟ್ ರೆಡಿ ವಿತ್ ಮಿ” (GRWM) ಎಂದು ಹೆಸರು.  ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ಹಾಜರಾಗಲು ಒಬ್ಬ ವ್ಯಕ್ತಿಯು ತಯಾರಾಗುತ್ತಿರುವುದನ್ನು ತೋರಿಸುವ ವಿಡಿಯೋ ಇದಾಗಿದ್ದು, ಹಲವಾರು ಮಂದಿ ಈ ವಿಡಿಯೋ ಶೇರ್​ ಮಾಡುತ್ತಾರೆ.  ಅದೇ ರೀತಿ  ಆಲಿಯಾ ಭಟ್​ ಅವರನ್ನೇ ಹೋಲುವಂತೆ ಗೆಟ್ ರೆಡಿ ವಿತ್ ಮಿ ವಿಡಿಯೋ ಶೇರ್​ ಮಾಡಲಾಗಿದೆ. ಸಮೀಕ್ಷಾ ಅವತ್ರ್ ಎಂಬ ಬಳಕೆದಾರರೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ 2 ಕೋಟಿಗೂ ಹೆಚ್ಚು ಜನರು ಅದನ್ನು ವೀಕ್ಷಿಸಿದ್ದಾರೆ.   

ಈ ವಿಡಿಯೋದಲ್ಲಿ   ಕಪ್ಪು ಬಣ್ಣದ ಕುರ್ತಾ ಧರಿಸಿ ಸಿದ್ಧರಾಗುತ್ತಿರುವುದನ್ನು ನೋಡಬಹುದು. ಬಳಿಕ ಮೇಕಪ್ ಧರಿಸಿ ಕ್ಯಾಮರಾ ಮುಂದೆ ಪೋಸ್ ನೀಡುವುದನ್ನು ವಿಡಿಯೋ ತೋರಿಸುತ್ತದೆ. ಇದೀಗ ಎರಡು ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಎಐ ಬಗ್ಗೆ ಕಳವಳ ವ್ಯಕ್ತವಾಗುವ ಬೆನ್ನಲ್ಲೇ ಜನರು ಫುಲ್​ಡ್ರೆಸ್​ ತಾರೆಯರನ್ನು ನೋಡಲು ಹೆಚ್ಚು ಇಷ್ಟಪಡುತ್ತಾರೆ ಎಂದು ಇದರಿಂದ ತಿಳಿದುಬರುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. 

ಆಲಿಯಾ ಡೀಪ್​ಫೇಕ್​ ಫೋಟೋ ವೈರಲ್​: ಆದ್ರೆ ಆ ಬಾರಿ ನೆಟ್ಟಿಗರ ಆಸೆಯೇ ಬೇರೆ! ಅದೇನು ನೋಡಿ...

 

 
 
 
 
 
 
 
 
 
 
 
 
 
 
 

A post shared by Sameeksha Avtr (@unfixface)

click me!