ಆಮೀರ್​ ಖಾನ್​ ಪುತ್ರನ ಮೊದಲ ಚಿತ್ರಕ್ಕೇ ವಿಘ್ನ! 'ಮಹಾರಾಜ್​' ​ಸಿನಿಮಾಕ್ಕೆ ಹೈಕೋರ್ಟ್​ ತಡೆ

By Suchethana D  |  First Published Jun 14, 2024, 9:03 PM IST

ಆಮೀರ್​ ಖಾನ್​ ಪುತ್ರನ ಮೊದಲ ಚಿತ್ರಕ್ಕೇ ವಿಘ್ನ! 'ಮಹಾರಾಜ್​' ​ಸಿನಿಮಾಕ್ಕೆ ಹೈಕೋರ್ಟ್​ ತಡೆ ನೀಡಿದೆ. ಇದಕ್ಕೆ ಕಾರಣವೇನು? 
 


2014ರಲ್ಲಿ ಬಾಲಿವುಡ್​ ನಟ ಆಮೀರ್​ ಖಾನ್​ ಅವರ ಬ್ಲಾಕ್​ಬಸ್ಟರ್​ ಪಿಕೆ ಚಿತ್ರ ಬಿಡುಗಡೆಯಾದಾಗ  ಆಮೀರ್ ಖಾನ್ ಅವರು ಶಿವನನ್ನು ಅವಮಾನಿಸುವ ಮೂಲಕ ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದಾರೆ ಎಂದು ಭಾರಿ ಟೀಕೆಗಳು ಬಂದು, ನಟನ ವಿರುದ್ಧ ಇನ್ನಿಲ್ಲದ ಆಪಾದನೆಗಳು ಬಂದಿದ್ದವು. ಕೊನೆಗೆ ಕ್ಷಮೆ ಕೋರಿದ್ದ ನಟ,   ಯಾವುದೇ ಧರ್ಮವನ್ನು ಅವಮಾನಿಸಿಲ್ಲ ಮತ್ತು ಶಿವನ ಬಗ್ಗೆ ನನಗೆ ಅಪಾರ ಗೌರವವಿದೆ ಎಂದಿದ್ದರು. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಆಮೀರ್​ ಪುತ್ರ ಜುನೈದ್​ ಖಾನ್​ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅವರು ನಟಿಸಿರುವ ಮೊದಲ ಚಿತ್ರವನ್ನು ಬ್ಯಾನ್​ ಮಾಡುವಂತೆ ವ್ಯಾಪಕ ಕೂಗು ಕೇಳಿ ಬಂದ ಬೆನ್ನಲ್ಲೇ ಚಿತ್ರಕ್ಕೆ ಗುಜರಾತ್​ ಹೈಕೋರ್ಟ್​ ತಡೆ ನೀಡಿದೆ. 

ಅಷ್ಟಕ್ಕೂ   ಅಮೀರ್ ಖಾನ್ ಮಗ ತೀರಾ ಸಾದಾ ಸೀದಾ ವ್ಯಕ್ತಿ ಎಂದೇ ಎನಿಸಿಕೊಂಡವರು.  ಸ್ಟಾರ್ ಕಿಡ್ ಅನ್ನೋ ಇಗೋ ಇವೆಲ್ಲ ಏನೂ ಇಲ್ಲ. ಆತ ಸಾಮಾನ್ಯರ ಥರ ಕಾರು ಬಿಟ್ಟು ಕಾಲ್ನಡಿಗೆಯಲ್ಲೇ ಓಡಾಡ್ತಾರೆ. ಅನೇಕ ಪ್ರವಾಸಿ ತಾಣಗಳಲ್ಲಿ ಒಬ್ಬಂಟಿಯಾಗಿ ಸುತ್ತಾಡುತ್ತಾರೆ ಎಂಬೆಲ್ಲಾ  ಮಾತಿಗೆ.  ಆದರೆ ಇದೀಗ, ಅವರ ನಟನೆಯ ಚೊಚ್ಚಲ ಚಿತ್ರ ‘ಮಹಾರಾಜ್​’ ಚಿತ್ರ ಬಿಡುಗಡೆಗೆ ಕೋರ್ಟ್​ ತಡೆ ನೀಡಿದೆ. ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ವೀಕ್ಷಣೆಗೆ ಇಂದು ಅಂದರೆ ಜೂನ್​ 14ರಂದು ಲಭ್ಯವಾಗಬೇಕಿದ್ದ ಈ ಸಿನಿಮಾಗೆ ತಡೆ ನೀಡಲಾಗಿದೆ. ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳು ಕೋರ್ಟ್​ ಮೆಟ್ಟಿಲೇರಿದ್ದವು. ಈ ಚಿತ್ರದಲ್ಲಿ ಶಿವನನ್ನು ಅವಮಾನಿಸಲಾಗಿದೆ ಎನ್ನುವುದು ಅವರ ಆರೋಪ. ಈ ಆರೋಪದ ಕುರಿತು ವಾದ, ಪ್ರತಿವಾದ ಆಲಿಸಿದ ಕೋರ್ಟ್​ ಓಟಿಟಿಯಲ್ಲಿ ಬಿಡುಗಡೆಯಾಗಬೇಕಿದ್ದ ಕೆಲವೇ ಗಂಟೆಗಳ ಮೊದಲು ತಡೆ ನೀಡಿದೆ. ಇದೀಗ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿತ್ರತಂಡ ತೀರ್ಮಾನಿಸಿದೆ. 

Tap to resize

Latest Videos

ಹನಿಮೂನ್‌ನಲ್ಲಿ ಯಾರಾದ್ರೂ ಬಟ್ಟೆ ಧರಿಸ್ತಾರಾ ಎನ್ನುತ್ತಲೇ ತಮ್ಮ ಮಧುಚಂದ್ರದ ಗುಟ್ಟು ಬಿಚ್ಚಿಟ್ಟ ಆಲಿಯಾ!

ಈ ಚಿತ್ರದಲ್ಲಿ  ಜೈದೀಪ್​ ಅಹಲಾವತ್​, ಶಾಲಿನಿ ಪಾಂಡೆ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಸಿದ್ದಾರ್ಥ್​ ಪಿ. ಮಲ್ಹೋತ್ರಾ ಅವರು ‘ಮಹಾರಾಜ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಬಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಯಶ್​ ರಾಜ್​ ಫಿಲ್ಮ್ಸ್​’ ಬಂಡವಾಳ ಹೂಡಿದೆ. ನೈಜ ಘಟನೆಯನ್ನು ಆಧರಿಸಿ ಸೌರಭ್​ ಶಾ ಬರೆದ ‘ಮಹಾರಾಜ್​’ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎನ್ನುತ್ತಿದೆ ಚಿತ್ರತಂಡ. ಈ ಚಿತ್ರದಲ್ಲಿ ಯಾರ ಧಾರ್ಮಿಕ ಭಾವನೆಗಳಿಗೂ ಹಾನಿ ಆಗುವಂತಹ ಅಂಶಗಳು ಇಲ್ಲ ಎಂದು ಕೃತಿಯ ಲೇಖಕ ಸೌರಭ್​ ಶಾ ಹೇಳಿದ್ದಾರೆ. ಹಾಗಿದ್ದರೂ ಕೂಡ ‘ಮಹಾರಾಜ್​’ ಚಿತ್ರದ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ ಎನ್ನುವುದು ಅವರ ಮಾತು.
 
 ಇದು 1862 ರ ಮಹಾರಾಜ ಲಿಬಲ್ ಕೇಸ್‌ನಿಂದ ಪ್ರೇರಿತವಾದ ಆದಿತ್ಯ ಚೋಪ್ರಾ ಅವರ ಅವಧಿಯ ಮಹಾಕಾವ್ಯವಾಗಿದೆ.  ವರದಿಯ ಪ್ರಕಾರ, ಮಹಾರಾಜ್  ಚಿತ್ರವು 1862 ರ ಕುಖ್ಯಾತ ಮಹಾರಾಜ ಲಿಬಲ್ ಕೇಸ್‌ನಿಂದ ಸ್ಫೂರ್ತಿ ಪಡೆಯುತ್ತದೆ. ಆದರೆ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ದೂರು ದಾಖಲಾದ ಹಿನ್ನೆಲೆಯಲ್ಲಿ, ಸದ್ಯ ಸಿನಿಮಾ ಬಿಡುಗಡೆಗೆ ತಡೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆಮೀರ್​  ಪುತ್ರನ ಮೊದಲ ಚಿತ್ರ ಪ್ರಥಮ ಚುಂಬನೆ ದಂತಭಗ್ನ ಎನ್ನುವಂತಾಗಿದೆ. 

ಡಾ.ರಾಜ್​ ಎಂದರೆ ಮ್ಯಾಜಿಕ್​: ಅಮೆರಿಕ ವಿವಿಯ ಪದವಿ ಪ್ರದಾನ ಸಮಾರಂಭದಲ್ಲಿ ಮೇರುನಟನ ಗುಣಗಾನ ಮಾಡಿದ ವಿದ್ಯಾರ್ಥಿನಿ
 

click me!