Alia bhatt ಹಾಸಿಗೆಯಲ್ಲಿ ಹೊರಳಾಡುತ್ತಾಳೆ ನಾನು ಮೂಲೆಯಲ್ಲಿ ಮಲಗುವೆ: ರಣಬೀರ್ ಕಪೂರ್

By Vaishnavi Chandrashekar  |  First Published Sep 27, 2022, 1:13 PM IST

ಆಲಿಯಾ ಮಲಗುವ ಗುಣದ ಬಗ್ಗೆ ಕಂಪ್ಲೇಂಟ್ ಮಾಡಿದ ರಣಬೀರ್ ಕಪೂರ್. ಬ್ರಹ್ಮಾಸ್ತ್ರ ಕಲೆಕ್ಷನ್ ಎಷ್ಟು?


ಬ್ರಹ್ಮಾಸ್ತ್ರ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿರುವ ಲವ್ಲಿ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಮಗುವನ್ನು ಬರ ಮಾಡಿಕೊಳ್ಳಲು ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ರಿವೀಲ್ ಮಾಡಿದ್ದಾರೆ. ಆಲಿಯಾ ಗುಣದಲ್ಲಿ ಏನೆಲ್ಲಾ ಬದಲಾವಣೆಗಳು ಆಗಿದೆ ಎಂದು ಬಾಲಿವುಡ್‌ ಬಬಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇನ್ನೆರಡು ತಿಂಗಳಿನಲ್ಲಿ ಮಗುವನ್ನು ಬರ ಮಾಡಿಕೊಳ್ಳುತ್ತಿರುವ ಈ ಜೋಡಿ ಮೀಡಿಯಾದಿಂದ ದೂರ ಉಳಿಯುತ್ತಾರಾ ಇಲ್ವಾ ಅನ್ನೋದೇ ದೊಡ್ಡ ಪ್ರಶ್ನೆ. 

ಹೌದು! ಆಲಿಯಾ ಭಟ್‌ ಬಗ್ಗೆಇಷ್ಟ ಆಗುವ ಒಂದು ಗುಣ ಕಷ್ಟ ಆಗುವ ಒಂದು ಗುಣದ ಬಗ್ಗೆ ರಣಬೀರ್ ಹೇಳಬೇಕಿತ್ತು. 'ಆಲಿಯಾ ಭಟ್‌ brilliant. ಆಕೆ ಏನೇ ಮಾಡಿದ್ದರೂ ಅದ್ಭುತವಾಗಿ ಮಾಡುತ್ತಾಳೆ ಈ ಗುಣ ನನಗೆ ಇಷ್ಟ. ಇಷ್ಟವಿಲ್ಲದ ಗುಣ ಅಂದ್ರೆ ಆಕೆ ಮಲಗುವಾಗ ನನಗೆ ಒಂದು ಸಮಸ್ಯೆ ಆಗುತ್ತೆ. ಮಲಗುವಾಗ ಸರಿಯಾಗಿರುತ್ತಾಳೆ ಆಮೇಲೆ ನಿಧಾನಕ್ಕೆ ಜರಗುತ್ತಾಳೆ ಇದರಿಂದ ನಾನು ಮಲಗುವ ಜಾಗ ಕಡಿಮೆ ಆಗುತ್ತದೆ. ಅಕೆ ತಲೆ ಒಂದು ಕಡೆ ಇರುತ್ತೆ ಕಾಲುಗಳು ಮತ್ತೊಂದು ಕಡೆ ಮುಖ ಮಾಡಿರುತ್ತದೆ. ನಾನು ಒಂದು ಮೂಲೆಯಲ್ಲಿ ಮಲಗಿರಬೇಕು. ಈ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ ಆದರೂ ಸಹಿಸಿಕೊಳ್ಳುತ್ತಿರುವೆ' ಎಂದು ರಣಬೀರ್ ಹೇಳಿದ್ದಾರೆ. 

Tap to resize

Latest Videos

'ಒಂದು ವಿಚಾರ ರಣಬೀರ್‌ನಲ್ಲಿ ನಾನು ತುಂಬಾ ಇಷ್ಟ ಪಡುವುದು ಆತನ ಮೌನ. ರಣಬೀರ್ good listner. ಆದರೆ ನಾನು ಸಹಿಸಿಕೊಳ್ಳುವುದು ಕೂಡ ಇದೇ ವಿಚಾರವನ್ನು. ಕೆಲವೊಮ್ಮೆ ನಾನು ಕೇಳಿರುವುದಕ್ಕೆ ರಣಬೀರ್ ಉತ್ತರ ಕೊಡುವುದಿಲ್ಲ ಆಗ ನಾನು ಉತ್ತರ ಕೊಡು ಎಂದು ಕಾಟ ಕೊಡುವೆ. ಇದು ಆತನ ಗುಣ ಆದರೆ ನನಗೆ ಕಷ್ಟವಾಗುತ್ತದೆ' ಎಂದು ಆಲಿಯಾ ಭಟ್ ಹೇಳಿದ್ದಾರೆ. 

ಪಿಂಕ್ ಕಫ್ತಾನ್ ಧರಿಸಿ ಪತಿ ಜೊತೆ ಸಿಂಪಲ್ ಪೋಸ್ ನೀಡಿದ ಗರ್ಭಿಣಿ ಅಲಿಯಾ; ಫೋಟೋ ವೈರಲ್

ತಯಾರಿ:

'ಮಗುವನ್ನು ಬರ ಮಾಡಿಕೊಳ್ಳುವುದಕ್ಕೆ ಸಂಪೂರ್ಣ ತಯಾರಿ ಮಾಡಿದ್ದೀವಿ. ಮಗು ಬರುವುದಕ್ಕೂ ಮುನ್ನ ನಾವು ರೂಮ್‌ ಕೂಡ ರೆಡಿ ಮಾಡಿದ್ದೀವಿ. ಆ ಸಮಯ ಬಂದಾಗಲೇ ನಮಗೆ ಸರಿಯಾಗಿ ಏನು ಬೇಕು ಬೇಡ ಅನ್ನೋದು ಗೊತ್ತಾಗುವುದು. ಈ ಸಮಯ ಹೇಗೆ ಅನಿಸುತ್ತಿದೆ ಎಂದು ಹೇಳುವುದಕ್ಕೆ ಕಷ್ಟ ಆಗುತ್ತದೆ ಆದರೆ ನಾನು ತುಂಬಾನೇ ಎಂಜಾಯ್ ಮಾಡುತ್ತಿರುವೆ ಮಗು ನೋಡಲು ಕಾಯುತ್ತಿರುವೆ' ಎಂದಿದ್ದಾರೆ ರಣಬೀರ್.

ಗರ್ಭಿಣಿ ಪತ್ನಿಯನ್ನು ನಿರ್ಲಕ್ಷಿಸಿದ್ರಾ ರಣಬೀರ್? 'ಅಲಿಯಾ ಮೇಲೆ ಪ್ರೀತಿ ಇಲ್ವಾ' ಎಂದ ನೆಟ್ಟಿಗರು

'ನನ್ನಲ್ಲಿ ಸ್ಟುಡೆಂಟ್ ಗುಣಗಳು ಹೆಚ್ಚಿದೆ. ಹೀಗಾಗಿ ನಾನು ಏನೆಲ್ಲಾ ಬೇಕು ಬೇಡ ಅನ್ನೋದನ್ನು ಚೆಕ್ ಮಾಡಿಕೊಂಡಿರುವೆ. ಈ ವಿಚಾರದಲ್ಲಿ ರಣಬೀರ್‌ನಿಂದ ಒಂದು ಪಾಠ ಕಲಿತಿರುವೆ - ಎಷ್ಟೇ ತಯಾರಿ ಮಾಡಿಕೊಂಡರೂ ಆ ಸಮಯದಲ್ಲಿ ನಾನು ತಯಾರಾಗಿ ಇರುವುದಿಲ್ಲ ಈ ಮಗು ಬೆಳೆಸುವ ವಿಚಾರದಲ್ಲಿ ನಾವು ಎಂದೂ ಸಂಪೂರ್ಣವಾಗಿ ತಯಾರಾಗಿರುವುದಿಲ್ಲ. ದಿನ ಬರುತ್ತಿದ್ದಂತೆ ನಾವು ನಡೆಯುತ್ತಿರುವೆವು' ಎಂದಿದ್ದಾರೆ ಆಲಿಯಾ.

'ಕೆಲವು ದಿನಗಳಿಂದ ಆಲಿಯಾ ಮತ್ತು ನನ್ನ ನಡುವೆ ಜಗಳ ಆಗುತ್ತಿದೆ. ಆಕೆ ಬುಕ್‌ ತಂದುಕೊಟ್ಟಿದ್ದಾಳೆ. ನಾನು 4ನೇ ಚಾಪ್ಟರ್‌ನಲ್ಲಿ ನಿಂತಿರುವೆ. ನಾನು ಹೇಳುವುದು ಒಂದೇ ಬುಕ್‌ನಿಂದ ನಾವು ಏನೂ ಕಲಿಯುವುದಕ್ಕೆ ಆಗೋಲ್ಲ ಬುಕ್ ನೋಡಿ ಮಗುವನ್ನು ಬೆಳೆಸುವುದಕ್ಕೆ ಆಗೋಲ್ಲ ಜೀವ ಹೇಗೆ ಎದುರಾಗುತ್ತದೆ ಎಂದು ನಾನು ಎಂಜಾಯ್ ಮಾಡಿಕೊಂಡು ದಿನ ಬೆಳೆಸಬೇಕು' ಎಂದು ರಣಬೀರ್ ಹೇಳಿದ್ದಾರೆ.

click me!