ಹಾಲಿವುಡ್‌ ಮಾರ್ಕೆಟ್ ಮೇಲೆ ಕಣ್ಣಿಟ್ಟ ರಾಜಮೌಳಿ; ಮಹೇಶ್ ಬಾಬು ಚಿತ್ರಕ್ಕೆ 'ಆವೆಂಜರ್' ಸ್ಟಾರ್ ಕರೆತಂದ ನಿರ್ದೇಶಕ

By Shruiti G Krishna  |  First Published Sep 27, 2022, 1:08 PM IST

ಎಸ್ ಎಸ್ ರಾಜಮೌಳಿ ತನ್ನ ಮುಂದಿನ ಸಿನಿಮಾದಲ್ಲಿ ಹಾಲಿವುಡ್ ಸಿನಿಮಾರಂಗವನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ರಾಜಮೌಳಿ ಮುಂದಿನ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಹಾಲಿವುಡ್‌ನ ಜನಪ್ರಿಯ ಹೀರೋ ನಟಿಸುತ್ತಿದ್ದಾರೆ ಎನ್ನುವ ಸುದ್ದು ವೈರಲ್ ಆಗಿದೆ.


ಎಸ್ ಎಸ್ ರಾಜಮೌಳಿ, ಬಾಹುಬಲಿ ಸಿನಿಮಾ ಮೂಲಕ ಇಡೀ ಭಾರತೀಯ ಸಿನಿಮಾರಂಗವೇ ಅಚ್ಚರಿ ಪಡುವಂತೆ ಮಾಡಿದ ನಿರ್ದೇಶಕ. ಬಾಹುಬಲಿ ಪಾರ್ಟ್-1, ಪಾರ್ಟ್-2 ಮೂಲಕ ಅದ್ಭುತ ಸೃಷ್ಟಿಸಿದ್ದ ರಾಜಮೌಳಿ ಬಳಿಕ ಭಾರತದ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡರು. ಇಡೀ ಭಾರತವೇ ರಾಜಮೌಳಿ ಅವರನ್ನು ಹಾಗೂ ಅವರ ಸಿನಿಮಾವನ್ನು ಕೊಂಡಾಡಿದರು. ದಕ್ಷಿಣ ಭಾರತದ ಸಿನಿಮಾಗಳು ಕೇವಲ ದಕ್ಷಿಣಕ್ಕೆ ಮಾತ್ರ ಸೀಮಿತವಾಗಿತ್ತು. ಭಾರತೀಯ ಸಿನಿಮಾರಂಗ ಎಂದರೆ ಬಾಲಿವುಡ್ ಮಾತ್ರ ಎನ್ನುವ ಮಟ್ಟಕ್ಕೆ ಗುರುತಿಸಿಕೊಂಡಿತ್ತು. ಭಾರತದಲ್ಲಿ ಬಾಲಿವುಡ್‌ಗೆ ಮಾತ್ರ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು. ಆದರೆ ಅದನ್ನೆಲ್ಲಾ ಬ್ರೇಕ್ ಮಾಡಿ ಬೇರೆ ಭಾಷೆಯಲ್ಲೂ ಅದ್ಭುತ ಸಿನಿಮಾಗಳು ಬರುತ್ತೆ, ಉತ್ತಮವಾಗಿ ಮಾರ್ಕೆಟ್ ಮಾಡಬಹದು ಎಂದು ತೋರಿಸಿಕೊಟ್ಟ ನಿರ್ದೇಶಕ ರಾಜಮೌಳಿ.ಬಾಹುಬಲಿ ಬಳಿಕ ದಕ್ಷಿಣದಲ್ಲಿ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡವು. ಇತ್ತೀಚಿಗೆ ರಿಲೀಸ್ ಆದ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಕೂಡ ಅಷ್ಟೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. 

ಇದೀಗ ರಾಜಮೌಳಿ ಟಾರ್ಗೆಟ್ ಏನಿದ್ರು ಹಾಲಿವುಡ್. ಹೌದು ತನ್ನ ಮುಂದಿನ ಸಿನಿಮಾದಲ್ಲಿ ಹಾಲಿವುಡ್ ಸಿನಿಮಾರಂಗವನ್ನು ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ರಾಜಮೌಳಿ ಸದ್ಯ ತೆಲುಗು ಸ್ಟಾರ್ ಮಹೇಶ್ ಬಾಬು ಅವರ ಜೊತೆ ಮತ್ತೊಂದು ಬಿಗ್ ಬಜೆಟ್ ನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದ್ದು ಇದನ್ನ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.ರಾಜಮೌಳಿ ಮುಂದಿನ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಹಾಲಿವುಡ್‌ನ ಜನಪ್ರಿಯ ಹೀರೋ, ಆವೆಂಜರ್ ಖ್ಯಾತಿಯ ಕ್ರಿಸ್ ಹೆಮ್ಸ್‌ವರ್ತ್ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

Oscars 2023ಗೆ ಅಧಿಕೃತ ಪ್ರವೇಶವಾಗದ RRR ಚಿತ್ರ: ಅಭಿಮಾನಿಗಳ ಆಕ್ರೋಶ

Tap to resize

Latest Videos

ರಾಜಮೌಳಿ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಬಾಹುಬಲಿ ಮತ್ತು ಆರ್ ಆರ್ ಆರ್ ಸಿನಿಮಾಗಳು ಭಾರತೀಯ ಸಿನಿಮಾರಂಗ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. 

ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ದಿನಗಳ ಹಿಂದೆ, ಎಸ್‌ಎಸ್ ರಾಜಮೌಳಿ ಅಮೆರಿಕನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿ ಸಿಎಎ ಜೊತೆ ಸಹಿ ಹಾಕಿದ್ದರಾ ಎಂಬ ಸುದ್ದಿ ವೈರಲ್ ಆಗಿತ್ತು. ಅಲ್ಲದೇ ಹಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಸದ್ಯ ಕ್ರಿಸ್  ಹೆಮ್ಸ್‌ವರ್ತ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ರಾಜಮೌಳಿ ಅವರ  ಹಾಲಿವುಡ್ ನಂಟಿನ ರಹಸ್ಯ ಬಹಿರಂಗವಾಗಿದೆ.

ರಿವೀಲ್ ಆಯ್ತು ರಾಜಮೌಳಿ-ಪ್ರಿನ್ಸ್ ಮಹೇಶ್ ಬಾಬು ಸಿನಿಮಾ ಸೀಕ್ರೆಟ್!

ರೌಜಮೌಳಿ ಸಿನಿಮಾ ಅಂದರೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿರುತ್ತದೆ. ಇದೀಗ ಹಾಲಿವುಡ್ ಸ್ಟಾರ್ ಕೂಡ ಎಂಟ್ರಿ ಕೊಟ್ಟಿದ್ದಾರೆ ಅಂದ್ಮೇಲೆ ಹೇಗಿರಲಿದೆ ಸಿನಿಮಾ ಎನ್ನುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಆದರೆ ಈ ಸಿನಿಮಾಗಾಗಿ ಇನ್ನು ಕೆಲವು ತಿಂಗಳು ಕಾಯಬೇಕಿದೆ.  

click me!