
ಮುಂಬೈ (ಜು. 06) ಸೋಶಿಯುಲ್ ಮೀಡಿಯಾದಲ್ಲಿ ಬರುವ ಅನಪೇಕ್ಷಿತ ಕಮೆಂಟ್ ಗಳ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಲಿಮಿಟೆಡ್ ಸೆಕ್ಷನ್ ಆಯ್ಕೆ ಮಾಡಿಕೊಂಡಿದ್ದಾರೆ. ಕರೀನಾ ಕಪೂರ್ ಖಾನ್, ಅಲಿಯಾ ಭಟ್, ಕರಣ್ ಜೋಹರ್ ಸಹ ಮಿಮಿಟ್ ಹೇರಿಕೊಂಡಿದ್ದಾರೆ.
ಅಲಿಯಾ ಭಟ್ ತಾಯಿ ಸೋನಿ ರಾಜ್ದಾನ್ ಸಹ ಕಮೆಂಟ್ ಗಳನ್ನು ಲಿಮಿಟ್ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಯೂಸ್ ಮಾಡುವುದನ್ನು ನಾನು ಪ್ರೀತಿಸುತ್ತೇನೆ, ಆದರೆ ಕೆಲವರು ಕಾರಣವಿಲ್ಲದೆ ದೂಷಿಸುವ, ಕೆಟ್ಟ ಪದಗಳಲ್ಲಿ ನಿಂದಿಸುವ ಕಮೆಂಟ್ ಹಾಕುತ್ತಾರೆ. ಇದರಲ್ಲಿ ಯಾವ ಆಸಕ್ತಿದಾಯಕ ಸಂಗತಿಗಳು ಇರುವುದಿಲ್ಲ ಇದೇ ಕಾರಣಕ್ಕೆ ಲಿಮಿಟ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸುಶಾಂತ್ ಸಾವು; ಕಪಿಲ್ ಕೆಣಕಿದವನಿಗೆ ಶರ್ಮಾ ಸಖತ್ ಪಂಚ್!
ತೆರೆಯ ಹಿಂದೆ ಅನೇಕ ಯುದ್ಧಗಳು ನಡೆಯುತ್ತಿರುತ್ತವೆ, ಆದರೆ ಇದು ಯಾವುದು ಕಮೆಂಟ್ ಹಾಕುವವರಿಗೆ ಗೊತ್ತಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ರೀತಿಯ ಕೆಟ್ಟ ಪ್ರವೃತ್ತಿ ಕಡಿಮೆ ಆದ ಮೇಲೆ ಮತ್ತೆ ಕಮೆಂಟ್ ಸ್ವೀಕಾರ ಮಾಡುತ್ತೇನೆ ಎಂಬ ಭರವಸೆಯನ್ನು ಸೋನಿ ನೀಡಿದ್ದಾರೆ. ಈ ಕೆಟ್ಟ ವರ್ತನೆಯಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂಬ ಆರೋಪವನ್ನು ಮಾಡಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ಸೋಶಿಯಲ್ ಮೀಡಿಯಾದಲ್ಲಿ ನೆಪ್ಟೋಯಿಸಮ್ ಕೂಗು ಎದ್ದಿತ್ತು. ಅನೇಕ ಸೆಲಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಕಮೆಂಟ್ ಗಳ ಸುರಿಮಳೆಯಾಯಿತು. ಸೋನಾಕ್ಷಿ ಸಿನ್ಹಾ ಟ್ವಿಟರ್ ನಿಂದ ಹೊರನಡೆದರೆ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅನನ್ಯಾ ಪಾಂಡೆ ಕಮೆಂಟ್ ಗಳನ್ನು ಲಿಮಿಡೆಡ್ ಮಾಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.