ಅನಂತ್ ಅಂಬಾನಿ ಜೊತೆ ಆಲಿಯಾ ಪುತ್ರಿ ರಾಹಾ ಕ್ಯೂಟ್ ಮಾತುಕತೆ ನಡೆಸಿದ್ದು, ಈಗಲೇ ಸ್ಕೆಚ್ ಹಾಕಿದ್ದಾಳೆ ಎಂದ ಫ್ಯಾನ್ಸ್. ವಿಡಿಯೋದಲ್ಲಿ ಏನಿದೆ ನೋಡಿ...
ಬಾಲಿವುಡ್ ನಟಿ ಆಲಿಯಾ ಭಟ್-ರಣಬೀರ್ ಕಪೂರ್ ದಂಪತಿ ಈಚೆಗಷ್ಟೇ ತಮ್ಮ ಪುತ್ರಿ "ರಾಹಾʼಳ ಮೊಗವನ್ನು ಜಗತ್ತಿಗೆ ಪರಿಚಯಿಸಿದ್ದರು. ಕಳೆದ ಡಿಸೆಂಬರ್ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮಗುವಿನೊಂದಿಗೆ ಇರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಕ್ರಿಸ್‌ಮಸ್ ಹಬ್ಬದ ದಿನ ಇವರಿಬ್ಬರು ತಮ್ಮ ಪುಟ್ಟ ಮಗುವನ್ನು ಎಲ್ಲರಿಗೂ ತೋರಿಸಿದ್ದರು. ಅಂದಹಾಗೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು 2022ರ ಏಪ್ರಿಲ್ 14ರಂದು ವಿವಾಹವಾಗಿದ್ದರು. ನವೆಂಬರ್ 6, 2022ರಂದು ಇವರಿಗೆ ರಾಹಾ ಎಂಬ ಮಗಳು ಜನಿಸಿದ್ದಾರೆ. ಇದೀಗ ರಾಹಾಳಿಗೆ ಎರಡನೆ ವರ್ಷವಾಗುತ್ತಾ ಬಂದಿದೆ. ಮುಂದಿನ ತಿಂಗಳು ರಾಹಾಗೆ ಎರಡನೆಯ ಹುಟ್ಟುಹಬ್ಬದ ಸಂಭ್ರಮ.
ಈ ನಡುವೆ ಈ ತಾರಾ ದಂಪತಿ ಅನಂತ್ ಅಂಬಾನಿ ಅವರ ಮದುವೆಗೆ ಆಹ್ವಾನಿಸಿದ್ದಾರೆ. ಅಷ್ಟಕ್ಕೂ ಗುಜುರಾತಿನ ಜಾಮ್ನಗರದಲ್ಲಿ ಅಂಬಾನಿ ಕುಟುಂಬದ ಮದುವೆ ಸಂಭ್ರಮ ಮನೆ ಮಾಡಿದೆ. ಇದಾಗಲೇ ಕೆಲವು ದಿನಗಳಿಂದ ಗಣ್ಯಾತಿಗಣ್ಯರು ಜಾಮ್ನಗರದಲ್ಲಿ ಜಮಾಯಿಸಿದ್ದಾರೆ. ಮುಕೇಶ್ ಅಂಬಾನಿ-ನೀತಾ ಅಂಬಾನಿ ಮತ್ತು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ (Pre Wedding) ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ ದಂಡೇ ಹರಿದುಬಂದಿದೆ. ಬಾಲಿವುಡ್ನ ನಟ-ನಟಿಯರು ಇದಾಗಲೇ ವೇದಿಕೆ ಮೇಲೆ ಕಿಚ್ಚು ಹೊತ್ತಿಸುತ್ತಿದ್ದಾರೆ. ವಿಭಿನ್ನ ರೀತಿಯಲ್ಲಿ ಪರ್ಫಾರ್ಮ್ ಮಾಡುತ್ತ ಮದುವೆ ಸಂಭ್ರಮವನ್ನು ನೂರ್ಮಡಿಗೊಳಿಸುತ್ತಿದ್ದಾರೆ. ಇದಾಗಲೇ 72 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರೋ ಗಾಯಕಿ ರಿಹಾನಾ ಭರ್ಜರಿ ಪರ್ಫಾಮೆನ್ಸ್ ನೀಡಿದ್ದಾರೆ. ಬಾಲಿವುಡ್ ತಾರೆಯರು ಕೂಡ ಇಂಥ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಕೋಟ್ಯಂತರ ರೂಪಾಯಿ ಪಡೆಯುವುದು ಇದ್ದರೂ ಈ ಕಾರ್ಯಕ್ರಮದ ಬಗ್ಗೆ ಇನ್ನೂ ಬಹಿರಂಗಗೊಂಡಿಲ್ಲ.
ಅಂಬಾನಿ ಪುತ್ರನ ಮದ್ವೆಯಲ್ಲಿ ಗರ್ಭಿಣಿ ದೀಪಿಕಾ ಭರ್ಜರಿ ಡ್ಯಾನ್ಸ್: ಹಣದ ದುರಾಸೆ ಯಾಕಮ್ಮಾ ಎಂದ ಫ್ಯಾನ್ಸ್
ಇದರ ನಡುವೆಯೇ ಆಲಿಯಾ ರಾಹಾಳನ್ನು ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಅನಂತ್ ಅವರು ರಾಹಾ ಜೊತೆ ಮಾತುಕತೆ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಪುಟಾಣಿ ರಾಹಾ ಕೂಡ ಅನಂತ್ ಅವರ ಜೊತೆ ತನ್ನದೇ ಮುದ್ದು ಭಾಷೆಯಲ್ಲಿ ಮಾತನಾಡಿದ್ದಾಳೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ದೊಡ್ಡವರ ಮಕ್ಕಳು ದೊಡ್ಡವರನ್ನು ಹೇಗೆ ಬಹುಬೇಗ ಗುರುತಿಸುತ್ತಾರೆ ನೋಡಿ ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಆಲಿಯಾಳೇ ಇನ್ನು ಚಿಕ್ಕಮಗುವಿನಂತೆ ಇದ್ದಾಳೆ, ಅವರ ಕೈಯಲ್ಲಿ ಇನ್ನೊಂದು ಮಗುವನ್ನು ನೋಡುವುದು ಕುತೂಹಲ ಎನಿಸುತ್ತದೆ ಎಂದಿದ್ದಾರೆ. ಇನ್ನು ಕೆಲವರು ಶ್ರೀಮಂತರ ಮನೆ ಸೇರಲು ರಾಹಾ ಈಗಲೇ ಸ್ಕೆಚ್ ಹಾಕಿದಂತಿದೆ ಎಂದು ತಮಾಷೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಎಲ್ಲರೂ ಒಂದೇ ರೀತಿಯ ಬಟ್ಟೆ ಧರಿಸಿರುವುದು ಕುತೂಹಲ ಕೆರೆಳಿಸಿದೆ. ಒಟ್ಟಿನಲ್ಲಿ ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಇದೇ ವೇಳೆ, ಮದುಮಕ್ಕಳಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಭರ್ಜರಿ ಡ್ಯಾನ್ಸ್. ತೆರೆಮೆರೆ ಪ್ಯಾರ್ಕೆ ಚರ್ಚಾ ಎಂಬ ಹಳೆಯ ಹಿಂದಿ ಹಾಡಿಗೆ ಜೋಡಿ ಭರ್ಜರಿ ಸ್ಟೆಪ್ ಹಾಕಿದ್ದು ಜನರನ್ನು ರಂಜಿಸಿದೆ. ಇದಾಗಲೇ ಲಕ್ಷಾಂತರ ಕೋಟಿ ರೂಪಾಯಿಗಳ ಒಡೆಯರಾಗಿದ್ದರೂ ಸರಳ ನಡೆ-ನುಡಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದೆ ಈ ಜೋಡಿ. ಅದರಲ್ಲಿಯೂ ಅನಂತ್ ಅಂಬಾನಿಯವರ ಸರಳತೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಮದುಮಕ್ಕಳು: ತೆರೆ ಮೆರೆ ಪ್ಯಾರ್ಕೆ ಹಾಡಿಗೆ ಭರ್ಜರಿ ಸ್ಟೆಪ್
ಗರ್ಭಿಣಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಜೊತೆ ಸ್ಟೆಪ್ ಹಾಕಿ ಟ್ರೋಲ್ಗೂ ಒಳಗಾಗುತ್ತಿದ್ದರೆ, ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ರಾಮ್ ಚರಣ್ ಜತೆಗೆ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿನ ಹುಕ್ ಸ್ಟೆಪ್‌ಗೆ ಭರ್ಜರಿ ಡಾನ್ಸ್ ಮಾಡಿದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಯೂ ಅಂಬಾನಿ ಫ್ಯಾಮಿಲಿಯ ಮದುವೆ ಕಾರ್ಯಕ್ರಮದಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿಯೂ ವೇದಿಕೆ ಮೇಲೆ ಡಾನ್ಸ್ ಮೂಲಕ ಎಲ್ಲರನ್ನು ರಂಜಿಸಿದರು. ಮದುವೆಗೆ ಆಗಮಿಸಿದ ರಾಣಿ ಮುಖರ್ಜಿ ಕೆಂಪು ವರ್ಣದ ಸೀರೆಯಲ್ಲಿ ಕಂಗೊಳಿಸಿದರು.