ಅಂಬಾನಿ ಫ್ಯಾಮಿಲಿ ಫಂಕ್ಷನ್‌ನಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಶಾರುಖ್ ಖಾನ್

Published : Mar 03, 2024, 01:11 PM ISTUpdated : Mar 03, 2024, 01:15 PM IST
ಅಂಬಾನಿ ಫ್ಯಾಮಿಲಿ ಫಂಕ್ಷನ್‌ನಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ ಶಾರುಖ್ ಖಾನ್

ಸಾರಾಂಶ

ಅದು 'ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ವೇದಿಕೆ. ಅಲ್ಲಿ ನಟ ಶಾರುಖ್ ನಿರೂಪಕರಾಗಿ, ಅಂಬಾನಿ ಕುಟುಂಬದ ಸೆಲೆಬ್ರಿಟಿ ಫ್ರೆಂಡ್‌ ಆಗಿ ಬಂದಿದ್ದಾರೆ.

ಬಾಲಿವುಡ್ ನಟ ಶಾರುಖ್‌ ಖಾನ್ ವಿಭಿನ್ನವಾಗಿ, ವಿಶಿಷ್ಠವಾಗಿ ಮಾತನಾಡುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ದೊಡ್ಡ ವೇದಿಕೆಯೊಂದರಲ್ಲಿ ಬ್ಲಾಕ್ ಜುಬ್ಬಾ-ಪೈಜಾಮ ಧರಿಸಿ ಮಾತನಾಡುತ್ತಿರುವ ಬಾಲಿವುಡ್ ನಟ ಕಿಂಗ್ ಖಾನ್ ಮೇಲೆ ಕೆಳಗೆ ಕುಳಿತಿರುವ ಎಲ್ಲರ ಕಣ್ಣು ನೆಟ್ಟಿದೆ. ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ನಟ ಶಾರುಖ್ ಖಾನ್ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಅಲ್ಲಿದ್ದವರು ಕೂಡ 'ಜೈ ಶ್ರೀರಾಮ್' ಎಂದಿದ್ದಾರೆ. 

ಯಾಕೆ ನಟ ಶಾರುಖ್ ಖಾನ್ ವೇದಿಕೆಗೆ ಬಂದು ಜೈ ಶ್ರೀರಾಮ್ ಎಂದು ಹೇಳಿದ್ದಾರೆ? ಕಾರಣ, ಅದು 'ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ವೇದಿಕೆ. ಅಲ್ಲಿ ನಟ ಶಾರುಖ್ ನಿರೂಪಕರಾಗಿ, ಅಂಬಾನಿ ಕುಟುಂಬದ ಸೆಲೆಬ್ರಿಟಿ ಫ್ರೆಂಡ್‌ ಆಗಿ ಬಂದಿದ್ದಾರೆ. ಅದಕ್ಕೇ ಹಾಗೆ ಹೇಳಿದ್ದಾರೆ. ಅಂಬಾನಿ ಕುಟುಂಬ ಅವರನ್ನು ಸಕಲ ಗೌರವಗಳೊಂದಿಗೆ ಆಮಂತ್ರಿಸಿದೆ. ಕುಟುಂಬ ಸ್ನೇಹಿತರಾಗಿ ನಟ ಶಾರೂಖ್ ಫಂಕ್ಷನ್‌ಗೆ ಬಂದವರು, ವೇದಿಕೆಗೆ ಬಂದು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಅಲ್ಲಿರುವವರ ಜತೆ ಕಮ್ಯುನಿಕೇಟ್ ಮಾಡಿದ್ದಾರೆ, ತಮಗೆ ಅನಿಸಿದ್ದನ್ನು ನಿರೂಪಣೆ ಮಾಡಿದ್ದಾರೆ.

ಧೀರ ಭಗತ್ ರಾಯ್ 'ಏನು ಕರ್ಮ' ಅಂತ ಹಾಡಿದ್ರು; ಸದ್ದು ಮಾಡ್ತಿದೆ ರಾಕೇಶ್-ಸುಚರಿತಾ ಹೆಜ್ಜೆ!

ಹೌದು, ಅದು ಭಾರತದ ಖ್ಯಾತ ಉದ್ಯಮಿ, ಶ್ರೀಮಂತರಲ್ಲಿ ಶ್ರೀಮಂತರ ಸಾಲಿನಲ್ಲಿ ನಿಲ್ಲುವ ಅಂಬಾನಿ ಕುಟುಂಬದ ಫಂಕ್ಷನ್. ಅಲ್ಲಿ ಅಂಬಾನಿ ಕುಟುಂಬದ ವರ ಅನಂತ ಅಂಬಾನಿ ಹಾಗು ಅಮೇರಿಕಾದಲ್ಲಿ ಓದಿ, ಅಂಬಾನಿ ಕುಟುಂಬದ ಸೊಸೆಯಾಗಲಿರುವ ಮರ್ಚಂಟ್ ಫ್ಯಾಮಿಲಿಯ ರಾಧಿಕಾ ಮರ್ಚಂಟ್ ಅವರಿಬ್ಬರ 'ಪ್ರೀ ವೆಡ್ಡಿಂಗ್ ಸೆರಮನಿ' ನಡೆಯುತ್ತಿದೆ. ಸಹಜವಾಗಿಯೇ ದೇಶ-ವಿದೇಶಗಳಿಂದ ಬಂದಿರುವ ಸೆಲೆಬ್ರಟಿಗಳು, ಆಗರ್ಭ ಶ್ರೀಮಂತರು ಅಲ್ಲಿದ್ದಾರೆ. ಅವರನ್ನು ಆ ಕ್ಷಣದಲ್ಲಿ ಮನರಂಜಿಸಲು ಬಾಲಿವುಡ್ ಬಾದಷಹ, ನಟ ಶಾರುಖ್ ಖಾನ್ ಬಂದಿದ್ದಾರೆ. ಅಂಬಾನಿ ಕುಟುಂಬಕ್ಕೂ ನಟ ಶಾರುಖ್‌ಗೂ ಅವಿನಾಭಾವ ಸಂಬಂಧವಿದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು.

ಮತ್ತೆರಡು ಸಿನಿರಂಗದ ಮೇಲೆ 'KRG' ಕಣ್ಣು; ತಮಿಳು-ಮಲಯಾಳಂಗೂ ಕಾಲಿಟ್ಟ ಕಾರ್ತಿಕ್ ಗೌಡ!

ಎಲ್ಲಿ ಹೇಗಿರಬೇಕು, ಏನು ಹೇಳಬೇಕು ಎಂದು ಚೆನ್ನಾಗಿ ಅರಿತಿರುವ ನಟ, ಭಾರತದಲ್ಲಿ ಭಾರತೀಯನಾಗಿದ್ದರೆ ಸಾಕು ಎಂದು ಬಲ್ಲ ನಟ ಶಾರುಖ್ ಖಾನ್, ಆ ವೇದಿಕೆಯಲ್ಲಿ 'ಜೈ ಶ್ರೀರಾಮ್' ಎಂದು ಹೇಳಿ ಕಾರ್ಯಕ್ರಮ ಶುರು ಮಾಡಿದ್ದಾರೆ. ಜತೆಗೆ, ಅಲ್ಲಿ  ಬಂದಿರುವ ಎಲ್ಲ ವಯೋಮಾನದವರನ್ನೂ ಗೌರವಿಸುವ ರೀತಿಯಲ್ಲಿ ಬಹಳಷ್ಟು ಗೌರವದ ಪದಗಳನ್ನು ನಟ ಶಾರುಖ್ ಖಾನ್ ಹೇಳಿದ್ದಾರೆ. ಆ ಮೂಲಕ ಎಲ್ಲರನ್ನೂ ಅಚ್ಚರಿ ಹಾಗೂ ಖುಷಿ ಮೂಡಿಸಿದ್ದಾರೆ. ಶಾರುಖ್ ಈ ನಡೆಗೆ ಇದೀಗ  ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.  

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?