ಅರ್ಜೆಂಟ್​ ಬಂದ್ರೂ ಬಾತ್​ರೂಮ್​ಗೆ ಹೋಗಲು ಪರದಾಡಿದ್ರಂತೆ ಆಲಿಯಾ! ಸೀರೆ ಫಜೀತಿ ಬಗ್ಗೆ ಹೇಳಿದ್ದೇನು ಕೇಳಿ

By Suchethana D  |  First Published Sep 25, 2024, 3:30 PM IST

ಮೆಟ್​ ಗಾಲಾ ಷೋನಲ್ಲಿ ಉದ್ದದ ಸೀರೆ ಉಟ್ಟು ವಾಷ್​ರೂಮ್​ಗೆ ಹೋಗಲು ಪೇಚಾಡಿರುವ ಬಗ್ಗೆ ನಟಿ ಆಲಿಯಾ ಭಟ್​ ಕಪಿಲ್​ ಶರ್ಮಾ ಷೋನಲ್ಲಿ ಹೇಳಿದ್ದೇನು ಕೇಳಿ 
 


ದಿ ಗ್ರೇಟ್ ಇಂಡಿಯನ್ ಕಪಿಲ್ ಷೋ ಸೀಸನ್ 2ರ ಮೊದಲ ಸಂಚಿಕೆಯಲ್ಲಿ  ಬಾಲಿವುಡ್​ ಸೆಲೆಬ್ರಿಟಿಗಳಾದ ಆಲಿಯಾ ಭಟ್, ಕರಣ್ ಜೋಹರ್, ವಾಸನ್ ಬಾಲಾ ವೇದಾಂಗ್ ರೈನಾ ಅತಿಥಿಗಳಾಗಿ ಆಗಮಿಸಿದ್ದರು. ತಮ್ಮ ಮುಂಬರುವ ಚಿತ್ರ ಜಿಗ್ರಾ ಪ್ರಚಾರಕ್ಕಾಗಿ ಇವರು ಈ ಷೋನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಆಲಿಯಾ ಭಟ್​ ಮತ್ತು ಕರಣ್​ ಜೋಹರ್​ ತಮ್ಮ ಸುದೀರ್ಘ ಪಯಣದ ಕುರಿತು ಮಾತನಾಡಿದ್ದಾರೆ. ಜೊತೆಗೆ,  ಆಲಿಯಾ ಭಟ್​ ಅವರು ತಮ್ಮ ಮತ್ತ ಪತಿ ರಣಬೀರ್ ಕಪೂರ್ ಹಾಗೂ ಮಗಳು ರಾಹಾ ನಡುವಿನ ಬಾಂಧವ್ಯದ ಕುರಿತು ವಿವರಣೆ ನೀಡಿದ್ದಾರೆ. ಜೊತೆಗೆ  23 ಅಡಿ ಉದ್ದದ ರೈಲಿನಲ್ಲಿ ಸೀರೆಯಲ್ಲಿ ಮೆಟ್ ಗಾಲಾದಲ್ಲಿ ಭಾಗವಹಿಸಿದ ಅನುಭವವನ್ನು ಕೂಡ ಶೇರ್​ ಮಾಡಿದ್ದಾರೆ. 

ಅಂದಹಾಗೆ, ಕರಣ್ ಜೋಹರ್ ಬಾಲಿವುಡ್​ನ ಹಲವರ ಗಾಡ್​ಫಾದರ್​. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸೆಲೆಬ್ರಿಟಿ ಮಕ್ಕಳಿಗಾಗಿ ಅವರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರಾ, ಅನನ್ಯಾ ಪಾಂಡೆ ಸೇರಿದಂತೆ ಅನೇಕರನ್ನು ಅವರು ಚಿತ್ರರಂಗಕ್ಕೆ ಪರಿಚಯ ಮಾಡಿದವರ ಕೂಡ ಅವರೇ. ಅವರು ಪರಿಚಯಿಸಿದ ಎಲ್ಲರೂ ಬಾಲಿವುಡ್​​ನಲ್ಲಿ ಖ್ಯಾತನಾಮರಾಗಿರೋದು ವಿಶೇಷ.   ಇದೇ ಕಾರಣಕ್ಕೆ ಈ ಷೋನಲ್ಲಿ ಕಪಿಲ್ ಶರ್ಮಾ ಅವರು,  ಕರಣ್ ಅವರನ್ನು ಬಾಲಿವುಡ್​ ಉದ್ಯಮದ "ಭೀಷ್ಮ ಪಿತಾಮಹ" ಎಂದು ಕರೆದಿದ್ದಾರೆ.  ಅನೇಕ ಜನರು ಅವರ ಸಲಹೆಯನ್ನು ಪಡೆಯುತ್ತಾರೆ ಎಂದಿದ್ದಾರೆ.

Tap to resize

Latest Videos

undefined

ಗಂಡಂದಿರನ್ನು ಹೀಗಾ ಮೂದಲಿಸೋದು ಫ್ಲಿಪ್‌ಕಾರ್ಟ್? ಹಕ್ಕಿಗಾಗಿ ಪುರುಷರಿಂದ ಪ್ರತಿಭಟನೆ!

ಇದೇ ಸಂದರ್ಭದಲ್ಲಿ ಕರಣ್​ ಜೋಹರ್​ ಅವರ ಕೃಪೆಯಿಂದಾಗಿ ತಮಗೆ  ಮೆಟ್ ಗಾಲಾ ಫ್ಯಾಷನ್​ ವೀಕ್​ನಲ್ಲಿ ಪಾಲ್ಗೊಳ್ಳುವ ಅವಕಾಶಗಳ ಕುರಿತು ಆಲಿಯಾ ಭಟ್​  ಹೇಳಿದರು. ಸುಮಾರು 23 ಅಡಿ ಉದ್ದದ ಸೀರೆಯನ್ನು ನನಗೆ ತೊಡಿಸಲಾಗಿತ್ತು. ಇದೇ ಕಾರಣಕ್ಕೆ ಆರು ಗಂಟೆ ಅರ್ಜೆಂಟ್​ ಆದ್ರೂ ವಾಷ್​ರೂಮ್​ಗೆ ಹೋಗಲು ಸಾಧ್ಯವಾಗಿರಲಿಲ್ಲ ಎಂದು ನಟಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ದಯವಿಟ್ಟು ಇಂಥ ಡ್ರೆಸ್​ ಧರಿಸಬೇಡಿ. ಒಂದು ವೇಳೆ ಧರಿಸಿದ್ರೂ ವಾಷ್​ರೂಮ್​ ಆಸೆ ಬಿಡಿ ಎಂದು ಇಂಥ ಈವೆಂಟ್​ಗಳಲ್ಲಿ ಭಾಗಿಯಾಗುವವರಿಗೆ ನಟಿ ಸಲಹೆ ಕೊಟ್ಟಿದ್ದಾರೆ! ಅಷ್ಟಕ್ಕೂ ಸೆಲೆಬ್ರಿಟಿಗಳು ಇಂಥ ದೊಡ್ಡ ದೊಡ್ಡ ಫಂಕ್ಷನ್​ಗಳಲ್ಲಿ ಮಣಭಾರದ ಡ್ರೆಸ್​ ಹಾಕುವುದು ಮಾಮೂಲು ತಾನೆ. ಮೇಲೆ ಎಲ್ಲಾ ಓಪನ್​ ಇರುತ್ತದೆ. ಆದರೆ ಕೆಳಗೆ ಮಾತ್ರ ಕಿಲೋಮೀಟರ್​ಗಟ್ಟಲೆ ಬಟ್ಟೆ ನೆಲದ ಮೇಲೆ ಹೊರಳಾಡುತ್ತಿರುತ್ತದೆ. ಅಂಥದ್ದೇ ಒಂದು ಬಟ್ಟೆ ತೊಟ್ಟು ನಟಿಗೆ ಈ ಫಜೀತಿ ಆಗಿತ್ತಂತೆ! 
 
ಇದೆ ಸಮಯದಲ್ಲಿ ಆಲಿಯಾ, ಮಗಳು ರಾಹಾ ಕುರಿತು ಮಾತನಾಡಿದ್ದಾರೆ.  ರಣಬೀರ್ ರಾಹಾಳನ್ನು ಸ್ವಂತವಾಗಿ ನೋಡಿಕೊಳ್ಳಲು ಸಮರ್ಥನಾಗಿದ್ದಾರೆ ಎಂದಿದ್ದಾರೆ. ರಣಬೀರ್​ ಮಗಳನ್ನು ಆಡಿಸಲು ಹೊಸ ಹೊಸ ತಂತ್ರ ರೂಪಿಸುತ್ತಾರೆ.  ಅವುಗಳನ್ನು ನೋಡುವುದೇ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಆಲಿಯಾ ಭಟ್​ರನ್ನು ತಮ್ಮ ಮಗಳಂತೆ ನೋಡುವ ಕರಣ್​ ಜೋಹರ್​, ‘ನನಗೆ ಮೊದಲು ಮಗಳ ಫೀಲ್ ಬಂದಿದ್ದು ಆಲಿಯಾಳಿಂದ. ಫೋಟೋಶೂಟ್ ನಡೆಯುತ್ತಿತ್ತು. ಅವಳು ಫಿಟ್​ ಆಗಿ ಇಟ್ಟುಕೊಳ್ಳಲು ಕಳೆದ ಮೂರು ತಿಂಗಳಿಂದ ಸರಿಯಾದ ಊಟವನ್ನೇ ಮಾಡಿರಲಿಲ್ಲ. ಅಂದು ಅವಳು ವ್ಯಾನಿಟಿ ವ್ಯಾನ್ ಒಳಗೆ ಬಂದಳು. ಅವಳಿಗೆ ಕಪ್ ಕೇಕ್​ ನೀಡಲಾಯಿತು. ನಾನು ಇದನ್ನು ತಿನ್ನಲಾ ಎಂದು ಕೇಳಿದಳು. ಆಗ ನನ್ನಲ್ಲಿರುವ ತಂದೆ ಜಾಗೃತ ಆಯಿತು’ ಎಂದರು. 

ಶೂಟಿಂಗ್ ವೇಳೆ ಭಾಗ್ಯಳನ್ನು ಒದೆಯಲು ಹೋದ ಶ್ರೇಷ್ಠಾ ಪಾತ್ರಧಾರಿಯ ಹಿಂಬದಿ ಡ್ಯಾಮೇಜ್​!

click me!