ಮಹಿಳೆಯರನ್ನು ಒಲಿಸಿಕೊಳ್ಳುವ ಭರದಲ್ಲಿ ಫ್ಲಿಪ್‌ಕಾರ್ಟ್ ಪುರುಷರಿಗೆ ಅವಹೇಳನ ಮಾಡುವಂಥ ಜಾಹೀರಾತು ನೀಡಿದ್ದು, ಇದಕ್ಕೆ ಭಾರಿ ಪ್ರತಿಭಟನೆ ಎದುರಾಗಿದೆ. ಏನಿದೆ ಅಂಥದ್ದು?
ಇ-ಕಾಮರ್ಸ್ ಕಂಪೆನಿಯ ಪೈಪೋಟಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫ್ಲಿಪ್‌ಕಾರ್ಟ್, ಅಮೇಜಾನ್ ಮುಂಚೂಣಿಯಲ್ಲಿದ್ದರೆ, ಇದೇ ರೀತಿ ಹತ್ತು-ಹಲವು ಕಂಪೆನಿಗಳು ಹುಟ್ಟಿಕೊಂಡಿವೆ. ಆದ್ದರಿಂದ ಸಹಜವಾಗಿಯೇ ಪೈಪೋಟಿ ಹೆಚ್ಚಾಗುತ್ತಿದೆ. ತನ್ನೆಡೆ ಗ್ರಾಹಕರನ್ನು ಸೆಳೆಯಲು ಈ ಕಂಪೆನಿಗಳು ಇನ್ನಿಲ್ಲದ ಸರ್ಕಸ್ ನಡೆಸುತ್ತಲೇ ಇರುತ್ತವೆ. ಆದರೆ ಇದೇ ಕಾರಣಕ್ಕೆ ಇದಾಗಲೇ ಹಲವಾರು ಬಾರಿ ಕೇಸುಗಳನ್ನೂ ಹಾಕಿಸಿಕೊಂಡಿವೆ. ಗ್ರಾಹಕರು ಯಾವುದೋ ವಸ್ತು ಆರ್ಡರ್ ಮಾಡಿದರೆ ಇನ್ನಾವುದೋ ವಸ್ತುಗಳು ಸರಬರಾಜು ಮಾಡಿ, ಸಂಕಷ್ಟಕ್ಕೆ ಸಿಲುಕಿಕೊಂಡಿರುವಲ್ಲಿ ಅಮೇಜಾನ್ಗೆ ದೊಡ್ಡ ಕೆಟ್ಟ ಹೆಸರು ಇದೆ. ಇದರ ವಿರುದ್ಧ ಇದಾಗಲೇ ಗ್ರಾಹಕರ ಕೋರ್ಟ್ಗಳಲ್ಲಿ ಸಾಕಷ್ಟು ಕೇಸುಗಳಿವೆ.
ಆದರೆ ಇದೀಗ ಕುತೂಹಲದ ಘಟನೆಯೊಂದು ಫ್ಲಿಪ್ಕಾರ್ಟ್ನಲ್ಲಿ ನಡೆದಿದೆ. ಅದೇನೆಂದರೆ ತಮ್ಮ ಒಂದು ಪ್ರಾಡಕ್ಟ್ ಪ್ರಚಾರಕ್ಕೆ ಫ್ಲಿಪ್‌ಕಾರ್ಟ್ ಕೊಟ್ಟಿರೋ ಜಾಹೀರಾತು ಈಗ ಪುರುಷ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ. ಇದು ಪುರುಷರನ್ನು ಸ್ತ್ರೀದ್ವೇಷಿ ಎನ್ನುವಂತೆ ಮಾಡುತ್ತಿದ್ದು, ಪುರುಷರ ಮಾನಹರಣ ಮಾಡುತ್ತಿರುವುದಾಗಿ ದೂರಿ ಪುರುಷ ಸಂಘಟನೆಗಳಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಫ್ಲಿಪ್‌ಕಾರ್ಟ್ ಈ ಜಾಹೀರಾತನ್ನು ಹಿಂದಕ್ಕೆ ಪಡೆದುಕೊಂಡು ಕ್ಷಮೆ ಕೋರಬೇಕು ಎಂದು ಸಂಘಟನೆಗಳು ಒತ್ತಾಯಿಸುತ್ತಿವೆ. ಈ ಗಲಾಟೆ ಬಳಿಕ ಜಾಹೀರಾತನ್ನು ಫ್ಲಿಪ್‌ಕಾರ್ಟ್ ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದರೂ, ಅದನ್ನು ಡೌನ್ಲೋಡ್ ಮಾಡಿಕೊಂಡವರು ವಿಡಿಯೋ ಶೇರ್ ಮಾಡುತ್ತಲೇ ಇದ್ದಾರೆ.
ಮಕ್ಕಳನ್ನು ಹ್ಯಾಂಡ್ಬ್ಯಾಗ್ನಂತೆ ಬಳಸೋದೆಂಥ ಸಂಸ್ಕೃತಿ? ಐಶ್ವರ್ಯ ರೈಗೆ ಮಾಳವಿಕಾ ಅವಿನಾಶ್ ಹೇಳಿದ್ದಿಷ್ಟು...
ಗಂಡಂದಿರು ಆಲಸಿ, ಸೋಮಾರಿ, ದಂಡಪಿಂಡ, ಕೆಲಸಕ್ಕೆ ಬಾರದವ ಎಂಬೆಲ್ಲಾ ರೀತಿಯ ಅರ್ಥ ಕೊಡುತ್ತಲೇ ಸಾಗುತ್ತದೆ ಈ ಜಾಹೀರಾತು. ಅದಕ್ಕಾಗಿಯೇ ಇಷ್ಟೆಲ್ಲಾ ದ್ವೇಷಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಬಿಗ್ ಬಿಲಿಯನ್ ಡೇಸ್ ಆಫರ್ ಕುರಿತು ನೋಡಬಹುದು. ಇದರಲ್ಲಿ ಹ್ಯಾಂಡ್ಬ್ಯಾಗ್ ಕುರಿತು ಹೇಳಲಾಗಿದೆ. ಇಷ್ಟೊಂದು ಚೀಪ್ ಆಗಿರೋ ಹ್ಯಾಂಡ್ಬ್ಯಾಗ್ಸ್ ಖರೀದಿ ಮಾಡಿದ ಮೇಲೆ ಅದು ಗಂಡನಿಗೆ ಗೊತ್ತಾಗದಂತೆ ಹೇಗೆ ಅಡಗಿಸಿ ಇಡುವುದು ಎಂದು ಜಾಹೀರಾತಿನಲ್ಲಿ ತೋರಿಸಲಾಗಿದೆ. ಇದು ಹ್ಯಾಂಡ್ಬ್ಯಾಗ್ ಜಾಹೀರಾತು ಆಗಿದ್ದರೂ ಇದೇ ಜಾಹೀರಾತಿನಲ್ಲಿ ಕಪಾಟು, ಹಾಸಿಗೆ, ಮಂಚ ಇತ್ಯಾದಿಗಳ ಕುರಿತ ಜಾಹೀರಾತನ್ನೂ ಮಾಡಲಾಗಿದೆ.
ಕೊಂಡುಕೊಳ್ಳುವ ಹ್ಯಾಂಡ್ಬ್ಯಾಗ್ಗಳನ್ನು ಹಾಸಿಗೆ ಕೆಳಗೆ ಅಡಗಿಸಿ ಇಡುವುದು ಸುಲಭ ಎಂದು ಹಾಸಿಗೆ ಜಾಹೀರಾತು ತೋರಿಸಲಾಗಿದೆ. ನಂತರ ಕಪಾಟಿನ ಒಳಗೆ ಅದನ್ನು ಹೇಗೆ ಅಡಗಿಸಿ ಇಡಬಹುದು ಎಂದು ಕಪಾಟಿನ ಪ್ರಮೋಟ್ ಮಾಡಲಾಗಿದೆ. ಇದೆಲ್ಲಾ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಮಹಿಳೆಯರನ್ನು ಖುಷಿ ಪಡಿಸುವುದಕ್ಕಾಗಿಯೋ ಏನೋ, ಪ್ರತಿಬಾರಿಯೂ ಟಿಪ್ಸ್ ಹೇಳುವಾಗ ನಿಮ್ಮ ಮೂರ್ಖ ಪತಿಗೆ ಇದು ತಿಳಿಯುವುದಿಲ್ಲ, ನಿಮ್ಮ ಶತದಡ್ಡ ಗಂಡನಿಗೆ ಇದು ಅರ್ಥವಾಗುವುದಿಲ್ಲ, ನೀವು ಅಡಗಿಸಿ ಇಟ್ಟಿರೋದು ಪೆದ್ದು ಗಂಡನಿಗೆ ತಿಳಿಯುವುದಿಲ್ಲ.... ಹೀಗೆ ಹಲವಾರು ಶಬ್ದಗಳ ಪ್ರಯೋಗವನ್ನು ಗಂಡಸಿನ ಮೇಲೆ ಮಾಡಲಾಗಿದೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ. ಹಲವು ಹೆಂಗಸರು ಕೂಡ ಈ ಜಾಹೀರಾತಿನ ವಿರುದ್ಧ ಕಿಡಿ ಕಾರಿದ್ದಾರೆ. ನಿಮ್ಮ ಈ ಸಾಮಗ್ರಿಗಳಿಗಿಂತ ನಮಗೆ ಗಂಡನೇ ಮೇಲು ಎಂದೆಲ್ಲಾ ಹೇಳಿದ್ದಾರೆ. ಇಷ್ಟು ಕೆಟ್ಟ ಪದ ಇರುವುದನ್ನು ನೋಡಿ ಗಂಡಸರು ಸುಮ್ಮನೆ ಬಿಟ್ಟಾರೆಯೇ? ಫ್ಲಿಪ್‌ಕಾರ್ಟ್ ಕ್ಷಮೆಗೆ ಆಗ್ರಹಿಸಿದ್ದಾರೆ. ಆದರೆ ಈ ಮೂಲಕ ಇದರ ವಿಡಿಯೋ ನೋಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ! ಭಾರೀ ಪ್ರತಿಭಟನೆ ಎದುರಾದ ಬೆನ್ನಲ್ಲೇ ಇ-ಕಾಮರ್ಸ್ ಕಂಪನಿ ಪುರುಷರ ಕ್ಷಮೆಯಾಚಿಸಿದೆ .
ಸ್ನಾನದ ವೀಡಿಯೋ ಪೋಸ್ಟ್ ಮಾಡಿದ ಸೀತಾರಾಮ ಸೀತಾಗೆ ಈಗ ಮನೆಯಲ್ಲಿರೋ ಇರುವೆ ಚಿಂತೆ!
