ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಮಗಳನ್ನುನೋಡಲು ಯಾರಿಗೂ ಅವಕಾಶ ನೀಡುತ್ತಿಲ್ಲವಂತೆ. ಹತ್ತಿರದ ಸ್ನೇಹಿತರಿಗೂ ಮಗಳನ್ನು ನೋಡಲು ಬಿಡುತ್ತಿಲ್ಲವಂತೆ.
ಬಾಲಿವುಡ್ ಸ್ಟಾರ್ ಜೋಡಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವನ್ನು ಸ್ವಾಗತಿಸಿದರು. ನವೆಂಬರ್ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಲಿಯಾ ದಂಪತಿಗೆ ಅಭಿಮಾನಿಗಳು ಮತ್ತು ಗಣ್ಯರಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಅಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದರು. ಮೊನ್ನೆಯಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ ಅಲಿಯಾ ಮತ್ತು ರಣಬೀರ್ ಕಪೂರ್ ಅವರ ವಿಡಿಯೋ ವೈರಲ್ ಆಗಿವೆ. ರಣಬೀರ್ ಕಪೂರ್ ಮಗಳನ್ನು ಎತ್ತಿಕೊಂಡಿದ್ದರು. ಆದರೆ ಮಗಳ ಫೋಟೋವನ್ನು ಇನ್ನು ರಿವೀಲ್ ಮಾಡಿಲ್ಲ ಹಾಗಾಗಿ ಅಲಿಯಾ ಮತ್ತು ರಣಬೀರ್ ಕಪೂರ್ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಸದ್ಯ ಸ್ಟಾರ್ ಜೋಡಿ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬಂದಿದೆ. ಮಗಳನ್ನು ನೋಡಲು ಅಲಿಯಾ ದಂಪತಿ ಯಾರಿಗೂ ಬಿಡುತ್ತಿಲ್ಲವಂತೆ. ಸಂಬಂಧಿಕರು ಹಾಗೂ ಸ್ನೇಹಿತರಿಗೂ ಅಲಿಯಾ ಮತ್ತು ರಣಬೀರ್ ಮಗವನ್ನು ನೋಡಲು ಅವಕಾಶ ಸಿಗುತ್ತಿಲ್ಲವಂತೆ. ತೀರ ಹತ್ತಿರದ ಸಂಬಂಧಿಕರು ಮಾತ್ರ ಅಲಿಯಾ ದಂಪತಿ ಮಗವನ್ನು ನೋಡುತ್ತಿದ್ದಾರೆ. ಯಾರಿಗೂ ಮಗುವನ್ನು ನೋಡಲು ಬಿಡದಿರಲು ಕಾರಣ ಮಗುವಿನ ಫೋಟೋ ವೈರಲ್ ಆಗುತ್ತೆ ಎನ್ನುವ ಭಯವಂತೆ. ಹೌದು ಮಗಳ ಫೋಟೋವನ್ನು ಯಾರಾದೂ ಕ್ಲಿಕಿಸಿ ವೈರಲ್ ಮಾಡುವ ಭಯದಿಂದ ಯಾರನ್ನು ಮನೆಯೊಳಗೆ ಸೇರಿಸುತ್ತಿಲ್ಲವಂತೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ದಂಪತಿಯ ಹಾಗೆ ಅಲಿಯಾ ಮತ್ತು ರಣಬೀರ್ ಕಪೂರ್ ಸಹ ತಮ್ಮ ಮಗುವಿನ ಫೋಟೋವನ್ನು ರಿವೀಲ್ ಮಾಡಲು ಸಿದ್ಧರಿಲ್ಲ. ಹಾಗಾಗಿ ಎಲ್ಲರನ್ನೂ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲವಂತೆ ರಣಬೀರ್ ದಂಪತಿ. ಮತ್ತೊಂದು ಕಾರಣವೆಂದರೆ ಕೋವಿಡ್ 19. ಕೊರೊನಾ ಕಾರಣದಿಂದ ಎಲ್ಲರನ್ನೂ ತಮ್ಮ ಮಗುವಿನಿಂದ ದೂರ ಇಡುತ್ತಿದ್ದಾರೆ. ಮನೆಗೆ ಬರುವವರು ಕೊರೊನಾ ನೆಗೆಟಿವ್ ರಿಪೋರ್ಟ್ ಹಿಡಿದು ಬರಬೇಕಂತೆ. ಸಿಕ್ಕಾಪಟ್ಟೆ ಕಟ್ಟು ನಿಟ್ಟಿನ ನಿಯಮ ಮಾಡಿರುವ ಕಾರಣ ಅಲಿಯಾ ಮನೆಗೆ ಎಂಟ್ರಿ ಕೊಡುವವರು ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ.
Alia Bhatt- Ranbir Kapoor: ಮದುವೆಯಾದ 7 ತಿಂಗಳಿಗೆ ತಾಯಿಯಾದ ಆಲಿಯಾ; ನೆಟ್ಟಿಗರಿಂದ ಸಖತ್ ಟ್ರೋಲ್
ಅಲಿಯಾ ಮತ್ತು ರಣಬೀರ್ ಮದುವೆಯಾಗಿ 6 ತಿಂಗಳಿಗೆನೇ ಮಗುವನ್ನು ಸ್ವಾಗತ ಮಾಡಿದ್ದಾರೆ. ಹಾಗಾಗಿ ಈ ಸ್ಟಾರ್ ಜೋಡಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ನೆಟ್ಟಿಗರ ಕಾಮೆಂಟ್ ಮತ್ತು ಟ್ರೋಲ್‌ಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದ ಅಲಿಯಾ ಜೋಡಿ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.
ಆಲಿಯಾ ಭಟ್ ತಮ್ಮ ಮಗಳಿಗೆ ಈ ಹೆಸರು ಇಡುತ್ತಾರಂತೆ!
ಇನ್ನು ಅಲಿಯಾ ಭಟ್ ಸಿನಿಮಾ ವಿಚಾರಕ್ಕೆ ಬರುವುದಾರೇ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಇನ್ನು ಸಿನಿಮಾ ಜೊತೆಗೆ ಅಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಸದ್ಯ ನಿಂತಿದೆ. ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.