ಅಭಿಮಾನಿಗಳಿಗೆ ಗುಡ್ ನ್ಯೂಸ್; ವಿಚ್ಛೇದನ ಬಳಿಕ ಮತ್ತೆ ಒಂದಾಗ್ತಿದ್ದಾರೆ ನಾಗ ಚೈತನ್ಯ-ಸಮಂತಾ

By Suvarna News  |  First Published Nov 11, 2022, 3:07 PM IST

ವಿಚ್ಛೇದನ ಬಳಿಕ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 


ಟಾಲಿವುಡ್ ಸ್ಟಾರ್ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ನೀಡಿ ಒಂದು ವರ್ಷದ ಮೇಲಾಯಿತು. ಇಂದಿಗೂ ಈ ಜೋಡಿಯ ವಿಚ್ಛೇದನ ಸುದ್ದಿ ಸದ್ದು ಮಾಡುತ್ತಿದೆ. ಟಾಲಿವುಡ್‌ನ ಈ ಸುಂದರ ಜೋಡಿಯ ಡೈವೋರ್ಸ್ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಕ್ಯೂಟ್ ಕಪಲ್ ನಡುವೆ ಏನಾಯಿತು ಎಂದು ಅನೇಕ ಅಭಿಮಾನಿಗಳು ಮರುಕ ಪಟ್ಟಿದ್ದರು. ಇಬ್ಬರೂ ಬೇರೆ ಬೇರೆಯಾದ ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾದರು. ಸಮಂತಾ ಸದ್ಯ ಯಶೋದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇಂದು (ನವೆಂಬರ್ 11) ಅವರ ಯಶೋದ ಸಿನಿಮಾ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಅಂದಹಾಗೆ ಸಮಂತಾ ಇತ್ತೀಚಿಗಷ್ಟೆ ಅನಾರೋಗ್ಯದ ವಿಚಾರವಾಗಿ ಸುದ್ದಿಯಾಗಿದ್ದರು. ಸಮಂತಾ ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಬಳಿಕ ಯಶೋದ ಪ್ರಮೋಷನ‌ಗಾಗಿ ಸಮಂತಾ ಕ್ಯಾಮರಾ ಮುಂದೆ ಬಂದರು. ಇದೀಗ ಸಮಂತಾ ಮತ್ತು ನಾಗಚೈತನ್ಯ ಜೋಡಿ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಚ್ಧೇದನ ಪಾವಾಸ್ ಪಡೆದ್ರಾ? ಎಂದು ಅಚ್ಚರಿ ಪಡಬೇಡಿ. ಇಬ್ಬರೂ ಮತ್ತೆ ಒಂದಾಗುತ್ತಿರುವುದು ಸಿನಿಮಾದಲ್ಲಿ ನಿಜ ಜೀವನದಲ್ಲಿ ಅಲ್ಲ. ಹೌದು ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ಸಿನಿಮಾಗಾಗಿ ಒಂದಾಗುತ್ತಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

Tap to resize

Latest Videos

ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ವೃತ್ತಿಪರರು. ಹಾಗಾಗಿ ವೈಯಕ್ತಿಕವಾಗಿ ಏನೇ ಆಗಿದ್ದರೂ ವೃತ್ತಿಯಲ್ಲಿ ತರಬಾರದು ಎನ್ನುವ ಕಾರಣಕ್ಕೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಈಗಾಗಲೇ ಸಿನಿಮಾ ಮಾತುಕತೆ ಕೂಡ ಆಗಿದೆಯಂತೆ. ಆದರೆ ಈ ಬಗ್ಗೆ ಇನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ. ಇಬ್ಬರೂ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿರುವ  ಸುದ್ದಿ ಕೇಳಿ ಅಭಿಮಾನಿಗಳು ಸಹ ಸಖತ್ ಥ್ರಿಲ್ ಆಗಿದ್ದಾರೆ. ಅಂದುಕೊಂಡಂತೆ ಆದರೆ ನಾಗ್-ಸ್ಯಾಮ್ ಜೋಡಿಯ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ. 

ನಾನಿನ್ನೂ ಸತ್ತಿಲ್ಲ; ಅನಾರೋಗ್ಯದ ಬಗ್ಗೆ ನಟಿ ಸಮಂತಾ ಕಣ್ಣೀರು

ಅನಾರೋಗ್ಯದ ಬಗ್ಗೆ ಸಮಂತಾ ಕಣ್ಣೀರು 

'ಕೆಲವು ದಿನಗಳು ತುಂಬಾ ಒಳ್ಳೆಯದಾಗಿರುತ್ತೆ, ಕೆಲವು ದಿನಗಳು ಕೆಟ್ಟದ್ದಾಗಿರುತ್ತದೆ. ನಾನು ಒಂದು ಹೆಜ್ಜೆ ಇಡುವುದು ಕಷ್ಟ ಎಂದು ಭಾವಿಸಿದ್ದೆ. ಈಗ ಹಿಂದೆ ತಿರುಗಿ ನೋಡಿದ್ರೆ ಇಲ್ಲಿವರೆಗೂ ಬಂದಿದ್ದೀನಾ ಎಂದು ನನಗೆ ಅಶ್ಚರ್ಯವಾಗುತ್ತದೆ. ನಾನಿಲ್ಲಿ ಫೈಟ್ ಮಾಡೋಕೆ ಇದ್ದೀನಿ' ಎಂದು ಹೇಳಿದರು.  ಅನಾರೋಗ್ಯ ಎಂದರೆ ಜೀವನಕ್ಕೆ ಅಪಾಯಯ ಉಂಟುಮಾಡುವ ಸ್ಥಿತಿಯಲ್ಲಿ ಇಲ್ಲ ಎಂದರು. 'ಒಂದು ವಿಶಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಸ್ಥಿತಿ ಜೀವಕ್ಕೆ ಅಪಾಯಕಾರಿ ಎಂದು ಅನೇಕ ವರದಿಗಳನ್ನು ನೋಡಿದೆ. ಆದರೆ ಇದು ಜೀವಕ್ಕೆ ಅಪಾಯಕಾರಿಯಲ್ಲ. ನಾನು ಇನ್ನೂ ಸತ್ತಿಲ್ಲ. ಇಂಥ ಹೆಡ್ ಲೈನ್ ಗಳು ತುಂಬಾ ಅಗತ್ಯ ಎಂದು ಭಾವಿಸಿಲ್ಲ' ಎಂದು ಹೇಳಿದರು. ಸಮಂತಾ ಭಾವುಕ ಸಂದರ್ಶನದ ವಿಡಿಯೋ ವೈರಲ್ ಆಗಿದೆ.

Samantha ಜೀವನ ಎಷ್ಟೇ ಖರಾಬ್ ಆಗಿರಲಿ ಇದನ್ನು ತಲೆಯಲ್ಲಿಟ್ಟುಕೊಳ್ಳಿ: ಮೊದಲ ಬಾರಿ ಮುಖ ತೋರಿಸಿದ ಸ್ಯಾಮ್

ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶೋದ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಸಮಂತಾ ಬಳಿ ಶಾಕುಂತಲಂ, ಖುಷಿ ಮತ್ತು ಹಿಂದಿಯ ಒಂದು ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. 

click me!