ಬಾಲಿವುಡ್ ನಟಿ ಅಲಿಯಾ ಭಟ್ ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮೀರ್ ಖಾನ್ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಅಂದಹಾಗೆ ಇಬ್ಬರು ತೆರೆಹಂಚಿಕೊಳ್ಳುತ್ತಿರುವುದು ಸಿನಿಮಾಗಾಗಿ ಅಲ್ಲ, ಜಾಹೀರಾತಿನಲ್ಲಿ ಎನ್ನುವ ಮಾತು ಕೇಳಿಬಂದಿದೆ.
ಅಲಿಯಾ ಭಟ್(Alia Bhatt) ಬಾಲಿವುಡ್ ನ ಟಾಪ್ ನಟಿಯರ ಸಾಲಿನಲ್ಲಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಲಿಯಾ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ಮೊದಲ ಆಯ್ಕೆಯಾಗಿರುವ ಅಲಿಯಾ ಇದುವರೆಗೂ ಆಮೀರ್ ಖಾನ್ ಜೊತೆ ತೆರೆ ಹಂಚಿಕೊಂಡಿಲ್ಲ. ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್(Aamir Khan) ಜೊತೆ ಕೆಲಸ ಮಾಡುವ ಅವಕಾಶ ಅಲಿಯಾಗೆ ಇನ್ನು ಒದಗಿಬಂದಿಲ್ಲ.
ಅಂದಹಾಗೆ ಅಲಿಯಾ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್(shahrukh khan) ಜೊತೆ ನಟಿಸಿದ್ದಾರೆ. ಡಿಯರ್ ಜಿಂದಗಿ ಸಿನಿಮಾದಲ್ಲಿ ಅಲಿಯಾ, ಶಾರುಖ್ ಜೊತೆ ತೆರೆಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆಯೂ ಅಲಿಯಾ ನಟಿಸಬೇಕಿತ್ತು. ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಅಲಿಯಾ ಮತ್ತು ಸಲ್ಮಾನ್(Salman Khan) ಒಟ್ಟಿಗೆ ನಟಿಸಬೇಕಿತ್ತು. ಆದರೆ ಆ ಸಿನಿಮಾ ಪ್ರಾರಂಭದಲ್ಲಿ ನಿಂತ ಕಾರಣ ಇಬ್ಬರು ಒಂದೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಅಲ್ಲಿಗೆ ನಿಂತಿದೆ. ಇದೀಗ ಅಲಿಯಾ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಜೊತೆ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
'RRR' ಚಿತ್ರದ ಬಗ್ಗೆ ಅಲಿಯಾಗೆ ಅಸಮಾಧಾನ; ರಾಜಮೌಳಿಯನ್ನು Unfollow ಮಾಡಿದ ನಟಿ
ಅಂದಹಾಗೆ ಅಲಿಯಾ, ಆಮೀರ್ ಖಾನ್ ಜೊತೆ ಸಿನಿಮಾದಲ್ಲಿ ನಟಿಸುತ್ತಿಲ್ಲ, ಬದಲಿಗೆ ಜಾಹೀರಾತಿನಲ್ಲಿ ಆಮೀರ್ ಖಾನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಜಾಹೀರಾತಿನ ಚಿತ್ರೀಕರಣ ಸಹ ಮಾಡಿ ಮುಗಿಸಲಾಗಿದೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. ಆಮೀರ್ ಖಾನ್ ಜೊತೆ ಕೆಲಸ ಮಾಡಲು ಅಲಿಯಾ ತುಂಬಾ ಎಕ್ಸೈಡ್ ಆಗಿದ್ದಾರೆ. ಇಬ್ಬರು ತೆರೆಮೇಲೆ ಅದ್ಭುತವಾಗಿ ಕಾಣಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಅಳಿಯಾ ಮತ್ತು ಆಮೀರ್ ಖಾನ್ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಸಾಧ್ಯವಾಗಿಲ್ಲ. ಇತ್ತೀಚಿಗಷ್ಟೆ ಬಿಡುಗಡೆಯಾದ ಆರ್ ಆರ್ ಆರ್ ಪ್ರಿ ರಿಲೀಸ್ ಈವೆಂಟ್ ನಲ್ಲಿ ಆಮೀರ್ ಮತ್ತು ಅಲಿಯಾ ಇಬ್ಬರೂ ವೇದಿಕೆ ಹಂಚಿಕೊಂಡಿದ್ದರು. ಇದೇ ವೇದಿಕೆಯಲ್ಲಿ ದಕ್ಷಿಣ ಭಾರತದ ಕಲಾವಿದರಾದ ರಾಮ್ ಚರಣ್, ಜೂ ಎನ್ ಟಿ ಆರ್ ಮತ್ತು ನಿರ್ದೇಶಕ ರಾಜಮೌಳಿ ಸಹ ಇದ್ದರು.
ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಆಕ್ಟಿಂಗ್ ಬಗ್ಗೆ ನಟ ರಾಮ್ ಚರಣ್ ಮಾತುಗಳಿದು!
ಇಬ್ಬರು ಆದಷ್ಟು ಬೇಗ ಒಟ್ಟಿಗೆ ಸಿನಿಮಾ ಮಾಡಲಿ ಎಂದ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಲ್ಲಿವರೆಗೂ ಇಬ್ಬರನ್ನು ಅಭಿಮಾನಿಗಳು ಜಾಹೀರಾತಿನಲ್ಲಿ ನೋಡಿ ಆನಂದಿಸಲಿದ್ದಾರೆ. ಆಮೀರ್ ಖಾನ್ ಸದ್ಯ ಲಾಲ್ ಸಿಂಗ ಚಡ್ಡಾ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಆಮೀರ್ ಖಾನ್ ಆಗಸ್ಟ್ ನಲ್ಲಿ ತೆರೆಗೆ ಬರುವುದನ್ನು ಕಾಯುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇನ್ನು ನಟಿ ಅಲಿಯಾ ಭಟ್ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಅಲಿಯಾ ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿದ್ದಾರೆ. ರಾಕಿ ಔರ್ ರಾಣಿ ಕು ಪ್ರೇಮ್ ಕಹಾನಿ, ಡಾರ್ಲಿಂಗ್ಸ್ ಸೇರಿದಂತೆ ಇನ್ನು ಅನೇಕ ಸಿನಿಮಾಗಳಿವೆ. ಬಾಲಿವುಡ್ ಜೊತೆಗೆ ಅಲಿಯಾ ಹಾಲಿವುಡ್ ಕಡೆಯು ಮುಖ ಮಾಡಿದ್ದಾರೆ.