ಆಲಿಯಾ ಭಟ್ ತಮ್ಮ ಮೊದಲ ರಾತ್ರಿಯ ಅನುಭವ ಹಂಚಿಕೊಂಡಿದ್ದು, ಅದು ನಿಜಕ್ಕೂ ದಣಿವಿನಿಂದ ಕೂಡಿದ್ದಾಗಿತ್ತು ಎಂದಿದ್ದಾರೆ. ಮದುವೆಯ ನಂತರದ 'ಮೊದಲ ರಾತ್ರಿ' ಬಗ್ಗೆ ಹಲವು ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ, ಅದು ಸಿನಿಮಾಗಳಲ್ಲಿ ತೋರಿಸುವಂತೆ ಇರುವುದಿಲ್ಲ ಎಂದು.
ಬಾಲಿವುಡ್ ನಟಿ ಆಲಿಯಾ ಭಟ್ ಪ್ರಕಾರ ಫಸ್ಟ್ ನೈಟ್ ಅನ್ನೋದೇ ಇಲ್ಲವಂತೆ. ಕರಣ್ ಜೋಹರ್ ಶೋನಲ್ಲಿ ಆಕೆ ಹೀಗೆ ಹೇಳಿದ್ದಾಳೆ. ಆಲಿಯಾ ಭಟ್ ಈ ವರ್ಷದ ಆರಂಭದಲ್ಲೇ ರಣಬೀರ್ ಕಪೂರ್‌ನನ್ನು ಮದುವೆಯಾದಳು. ಅವರದು ಡ್ರೀಮ್ ವೆಡ್ಡಿಂಗ್. ಹಾಗಾಗಿ ಅವರ ಫರ್ಸ್ ನೈಟ್ ಕೂಡ ಹಾಗೇ ಇದ್ದಿರಬಹುದಲ್ವಾ? ಈ ಕುತೂಹಲ ನಿಮಗೆ ಇದ್ದರೆ ಸಹಜ. ಈ ಪ್ರಶ್ನೆ ಸೆಲೆಬ್ರಿಟಿ ಕರಣ್ ಜೋಹರ್‌ನನ್ನೂ ಕೂಡ ಕಾಡಿದೆ. ಕಾಫಿ ವಿತ್ ಕರಣ್ ಹೊಸ ಸೀಸನ್‌ನ ಮೊದಲ ಸಂಚಿಕೆಯಲ್ಲಿ, ಕರಣ್ ಆಲಿಯಾ ಭಟ್‌ಳನ್ನು ಈ ಬಗ್ಗೆ ಕೇಳಿದ.
ಕೂಡಲೇ ಆಲಿಯಾ ಹೇಳಿದ್ದ ಹೀಗೆ- “ಸುಹಾಗ್ ರಾತ್ (ಮೊದಲ ರಾತ್ರಿ) ಅಂತ ಏನೂ ಇರಲ್ಲ. ನೀವು ತುಂಬಾ ದಣಿದಿರುತ್ತೀರಿ” ಅಂತ. ಈ ಮಾತು ಕರಣ್ ಶೋದಲ್ಲಿ ಎಲ್ಲರನ್ನೂ ನಗುವಂತೆ ಮಾಡಿತು. ಇದು ನಿಜಾನಾ? ಭಾರತೀಯ ಮಹಿಳೆ ಈ ಬಗ್ಗೆ ಏನ್ ಹೇಳ್ತಾಳೆ? ಮದುವೆಯ ನಂತರದ 'ಮೊದಲ ರಾತ್ರಿ' ಬಗ್ಗೆ ಮಾತನಾಡುವ ಕೆಲವು ಮಹಿಳೆಯರು ಹೇಳುವ ಪ್ರಕಾರ, ಅದು ಸಿನಿಮಾಗಳಲ್ಲಿ ಇರುವಂತೆ ಡ್ರೀಮಿಯಾಗಿ ಇರೋಲ್ಲವಂತೆ.
undefined
"ನಾನು ನನ್ನ ಆತ್ಮೀಯ ಸ್ನೇಹಿತನನ್ನೇ ಮದುವೆಯಾದೆ. ಮೊದಲ ರಾತ್ರಿಗೆ ದೊಡ್ಡ ಹೋಟೆಲ್‌ನಲ್ಲಿ ಅಲಂಕಾರಿಕ ಕೋಣೆಯನ್ನು ಬುಕ್ ಮಾಡಿದೆವು. ಅದನ್ನು ವ್ಯರ್ಥ ಮಾಡುವ ಬದಲು, ನಾವು ಸಾಕಷ್ಟು ರೂಮ್ ಸರ್ವಿಸ್‌ಗೆ ಹೇಳಿದೆವು. ನಮ್ಮ ನೆಚ್ಚಿನ ಚಲನಚಿತ್ರಗಳನ್ನು ನೋಡಿದೆವು. ನಮ್ಮ ಮದುವೆಗೆ ಬಂದ ಅತಿಥಿಗಳ ಬಗ್ಗೆ ಹರಟೆ ಹೊಡೆದೆವು. ಅದು ಅತ್ಯುತ್ತಮ ರಾತ್ರಿಯಾಗಿತ್ತು. ಆದರೆ ಸೆಕ್ಸ್ ಮಾಡಲಿಲ್ಲ” ಎನ್ನುತ್ತಾಳೆ ಈ ಶೋ ನೋಡಿದ ಒಬ್ಬ ಸೆಲೆಬ್ರಿಟಿ.
“ನಂಗೆ ಅರೇಂಜ್ಡ್ ಮ್ಯಾರೇಜ್ ಆಯ್ತು. ನಾನು ಅದುವರೆಗೂ ಯಾರ ಜೊತೆಗೂ, ಭಾವಿ ವರನ ಜೊತೆಗೂ ಸೆಕ್ಸ್ ಮಾಡಿರಲಿಲ್ಲ. ಅಂದರೆ ನಾನು ಕನ್ಯೆಯಾಗಿದ್ದೆ. ಮದುವೆಯ ಮೊದಲ ರಾತ್ರಿ ಬಗ್ಗೆ ತುಂಬಾ ಉತ್ಸುಕಳಾಗಿದ್ದೆ. ಆದರೆ ಮದುವೆ ಸಮಾರಂಭ ತುಂಬಾ ಸುದೀರ್ಘವಾಗಿತ್ತು. 'ಸುಹಾಗ್ ರಾತ್' ನಮಗೆ ತೀವ್ರವಾದ ಅಗ್ನಿಪರೀಕ್ಷೆಯಾಗಿತ್ತು. ದಿನಗಟ್ಟಲೆ ಮದುವೆಯ ತಯಾರಿಯಲ್ಲಿದ್ದ ನನ್ನ ಗಂಡ ಸುಸ್ತಾಗಿದ್ದ. ಕೋಣೆಗೆ ಬರುತ್ತಲೇ ಆತ ನಿದ್ರೆಗೆ ಜಾರಿದ. ಆ ರಾತ್ರಿ ನಾನು ನಿರಾಶೆಗೊಂಡೆ. ಆದರೆ ಈಗ ನೋಡಿದಾಗ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ" ಎನ್ನುತ್ತಾಳೆ ಇನ್ನೊಬ್ಬಾಕೆ.
“ನನ್ನ ಗಂಡ ಸೈನ್ಯದಲ್ಲಿದ್ದ. ನಾನು ಅವನನ್ನು ಮೊದಲೂ ಭೇಟಿ ಮಾಡಲು ಆಗಲಿಲ್ಲ. ಅವಸರದಲ್ಲಿ ಮದುವೆ ಆದೆವು. ಮದುವೆಯ ನಂತರ ಡ್ಯೂಟಿಗೆ ಆ ದಿನವೇ ಹೊರಟುಹೋದ. 'ಸುಹಾಗ್ ರಾತ್'ಗಾಗಿ ನಾನು ಅಳುತ್ತಿದ್ದೆ. ನಂತರ ಅವನು ಬೇಗನೆ ಹಿಂತಿರುಗಿದ!” ಎನ್ನುತ್ತಾಳೆ ಇನ್ನೊಬ್ಬಳು.
ಪ್ರಿಯಾಂಕಾ ಚೋಪ್ರಾ ಬಾಯಿಂದ ಇದೆಂಥಾ ಮಾತು, ಲೈಫ್ ರಿಯಾಲಿಟಿ ಅಂದ್ರೆ ಇದೇನಾ..!?
“ಮದುವೆಯ ದೀರ್ಘ ಸಮಾರಂಭಗಳ ಕಾರಣ ನಾವಿಬ್ಬರೂ ದಣಿದಿದ್ದೆವು. ನಾನು ಧರಿಸಿದ್ದ ಭಾರಿ ಲೆಹೆಂಗಾದ ಕಾರಣ ನನ್ನ ಎಲ್ಲಾ ಸ್ನಾಯುಗಳು ಸೆಳೆತವನ್ನು ಅನುಭವಿಸುತ್ತಿದ್ದವು. ಆದರೆ ಆ ರಾತ್ರಿ ನಮಗೆ ಲೈಂಗಿಕತೆಗೆ ಶಕ್ತಿ ಇರಲಿಲ್ಲ. ನಾವು ಮುದ್ದಾಡಿದೆವು. ಮಾತನಾಡಿದೆವು ಮತ್ತು ನಿದ್ರಿಸಿದೆವು. ಎರಡನೇ ರಾತ್ರಿ ನಮಗೆ ನಿಜಕ್ಕೂ ಮೊದಲ ರಾತ್ರಿಯಾಗಿತ್ತು" ಎನ್ನುತ್ತಾಳೆ ಮತ್ತೊಬ್ಬಳು.
"ನಮ್ಮ ಮದುವೆ ಸಣ್ನದಾಗಿ ಆಯಿತು. ನಾವು ನಮ್ಮ ಬಹಳಷ್ಟು ಸ್ನೇಹಿತರು ಮತ್ತು ಸೋದರಸಂಬಂಧಿಗಳನ್ನು ಆಹ್ವಾನಿಸಿದ್ದೆವು. ಮದುವೆಯ ನಂತರ, ಅವರೆಲ್ಲರೂ ನಮ್ಮ ಕೋಣೆಯಲ್ಲಿ ಒಟ್ಟುಗೂಡಿದರು ಮತ್ತು ನಾವು ಇಡೀ ರಾತ್ರಿ ಅವರೊಂದಿಗೆ ಹರಟೆ ಹೊಡೆದೆವು. ಹಿರಿಯರೊಬ್ಬರು ಬಂದು ನಮ್ಮನ್ನು ಅದಕ್ಕೆ ಬಿಟ್ಟುಬಿಡಿ ಎಂದು ಹೇಳಿದ್ದು ನನಗೆ ನೆನಪಿದೆ! ಆದರೆ ಅವರು ಹೋಗಲೇ ಇಲ್ಲ. ನಾವು ಚಂದವಾಗಿ ಸಮಯ ಕಳೆದೆವು. ಆದರೆ ಸುಹಾಗ್ ರಾತ್‌ನಲ್ಲಿ ಏನು ಮಾಡಬೇಕೋ ಅದನ್ನು ಮಾಡಲಿಲ್ಲ! '' ಇದು ಮತ್ತೊಬ್ಬಾಕೆಯ ಅನುಭವ.
ಹೆಚ್ಚಿನವರದು ಈ ರೀತಿಯ ಅನುಭವ ಇರಬಹುದು. ಯಾಕೆಂದರೆ ಮದುವೆಯ ದಿನದ ಕಾರ್ಯಕ್ರಮಗಳ ದಣಿವಿನಿಂದಾಗಿ ಯಾರಿಗೂ ಸೆಕ್ಸ್‌ನಲ್ಲಿ ತೊಡಗುವ ಆಸಕ್ತಿ, ಶಕ್ತಿ ಉಳಿದಿರುವುದಿಲ್ಲ. ಅದನ್ನೇ ಆಲಿಯಾ ಹೇಳಿದ್ದಾಳೆ. ಮಹಿಳೆಯರಷ್ಟೇ ಅಲ್ಲ, ಬಹಳಷ್ಟು ಮಂದಿ ಆಲಿಯಾ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುತ್ತಾರೆ. ನೀವೇನಂತೀರಿ?
ಹಿಂದೂ ಗಂಡನಿಗೆ ಡಿವೋರ್ಸ್ ನೀಡಿ ಫರ್ಹಾನ್ ಜೊತೆ ಮದುವೆ; ಪತಿ ಬಲವಂತವಾಗಿ ದೈಹಿಕ ಸಂಬಂಧ ಬೆಳಸ್ತಿದ್ದ ಎಂದ ನಟಿ