ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಪ್ರದರ್ಶನ ಮಾಡ್ತಿದ್ದ ಬಿಚ್ಚೋಲೆ ರಾಣಿ ಶೆರ್ಲಿನ್ ಚೋಪ್ರಾ ಹೊಸ ಅವತಾರಕ್ಕೆ ನೆಟ್ಟಿಗರು ಶಾಕ್ ಆಗಿದ್ದು ಏನು ಕೇಳ್ತಿದ್ದಾರೆ ನೋಡಿ...
ಡ್ರಾಮಾ ಕ್ವೀನ್ ರಾಖಿ ಮುಗೀತು, ಈಗ ಪ್ಲಾಸ್ಟಿಕ್ ರಾಣಿ ಶೆರ್ಲಿನ್ ಚೋಪ್ರಾ ಸರದಿ. ಮೈಸೂರಿನ ಯುವಕ ಆದಿಲ್ ಖಾನ್ ದುರ್ರಾನಿಯನ್ನು ಮದುವೆಯಾಗಿದ್ದ ರಾಖಿ ಸಾವಂತ್, ತಮ್ಮ ಹೆಸರನ್ನು ಫಾತೀಮಾ ಎಂದು ಬದಲಾಯಿಸಿ ಕೊನೆಗೆ ಮಾಡಿದ್ದ ಡ್ರಾಮಾ ಅಷ್ಟಿಷ್ಟಲ್ಲ. ಮೆಕ್ಕಾಕ್ಕೂ ಹೋಗಿ ಬಂದಿದ್ದ ರಾಖಿ ಕೊನೆಗೆ ಗಂಡನ ವಿರುದ್ಧವೇ ದೂರು ಕೊಟ್ಟರೆ, ಅತ್ತ ಆದಿಲ್ ರಾಖಿಗೆ ತಲಾಖ್ ಕೊಡುವ ಮೊದಲೇ ಮತ್ತೊಂದು ಮದ್ವೆಯಾಗಿದ್ದಾರೆ. ಸದ್ಯ ಆ ವಿಷಯ ಅಲ್ಲಿಗೇ ತಣ್ಣಗಾಗಿರುವ ನಡುವೆಯೇ, ತನ್ನ ಅಂಗಾಂಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರೋ ಇನ್ನೋರ್ವ ಡ್ರಾಮಾ ಕ್ವೀನ್ ಶೆರ್ಲಿನ್ ಚೋಪ್ರಾ ಈಗ ಮತಾಂತರ ಆಗಿರುವ ರೀತಿಯಲ್ಲಿ ಪೋಸ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಷ್ಟಕ್ಕೂ, ಶೆರ್ಲಿನ್ ಚೋಪ್ರಾ ಎಂಬ ಹೆಸರು ಕೇಳಿದ ತಕ್ಷಣ, ಸಿನಿ ಪ್ರಿಯರ ಕಣ್ಣೆದುರು ಬರುವುದು ಅಸಭ್ಯ, ಅಶ್ಲೀಲ ಎನ್ನುವಷ್ಟರ ಮಟ್ಟಿಗಿನ ತುಂಡು ಬಟ್ಟೆ ಧರಿಸಿ ಪ್ಲಾಸ್ಟಿಕ್ ದೇಹದ ಪ್ರದರ್ಶನ ಮಾಡುವ ನಟಿಯ ದೃಶ್ಯ. ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳುತ್ತಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದಾಕೆ ಇವರು.
ಈಕೆ ಡೀಸೆಂಟ್ ಡ್ರೆಸ್ ಹಾಕಿರುವ ಫೋಟೋ ಸಿಗುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಶೆರ್ಲಿನ್ ಅವತಾರ ಇದೆ. ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಅದನ್ನು ಪ್ರದರ್ಶಿಸುತ್ತಲೇ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಈ ಮೂಲಕ ನಟಿ ಪ್ರಚಾರ ಗಿಟ್ಟಿಸಿಕೊಂಡರೆ, ಆಕೆಯ ಫೋಟೋ ತೆಗೆಯುವ ಪಾಪರಾಜಿಗಳಿಗೆ ದುಡ್ಡಿನ ಸುರಿಮಳೆಯೇ. ಬಹುತೇಕ ಬಾಲಿವುಡ್ ನಟಿಯಂತೆ ಈಕೆ ಕೂಡ ತೆಳ್ಳಗೆ ಇರಲು ಸಾಕಷ್ಟು ಡಯಟ್ ಪಾಲನೆ, ಯೋಗ, ಜಿಮ್, ವ್ಯಾಯಾಮಗಳ ಮೊರೆ ಹೋಗಿದ್ದರೂ, ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಎದೆ ಭಾಗ ಮಾತ್ರ ನೋಡಲು ಅಸಾಧ್ಯ ಎನ್ನುವಷ್ಟರಮಟ್ಟಿಗೆ ಕಾಣಿಸುತ್ತಿದೆ. ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.
ಹಲವರ ಜೊತೆ ಮಲಗಿದಾಗ ಆಗದ ನಾಚಿಕೆ ಶೆರ್ಲಿನ್ಗೆ ಈ ವಿಷ್ಯಕ್ಕೆ ಆಗ್ತಿದೆಯಂತೆ! ನಟಿ ಏನೆಂದ್ರು ಕೇಳಿ...
ಕೆಲ ದಿನಗಳ ಹಿಂದೆ ನಟಿ, ದೇಹ ಪ್ರದರ್ಶನ ಮಾಡುವ ಬಟ್ಟೆ ತೊಟ್ಟು, ಮೂರ್ತಿಯಂತೆ ಕುಳಿತಿದ್ದೇನೆ. ನನ್ನ ಕೈಕಾಲು ಒತ್ತಲು ಯಾರಾದರೂ ಸಿಗುತ್ತಾರೋ ಎಂದು ನೋಡುತ್ತಿದ್ದೇನೆ ಎಂದು ಬಿಟ್ಟಿ ಆಫರ್ ನೀಡಿದ್ದರು. ಇದೇ ವೇಳೆ ಹಾಕಿಕೊಂಡಿರುವ ಬಟ್ಟೆಯನ್ನು ಕಳಚುವಂತೆ ಮಾಡಿ, ನನ್ನದು ಸೆನ್ಸೆಟಿವ್ ಸ್ಕಿನ್ ನೋಡಿ, ಅದಕ್ಕೆ ಅಲರ್ಜಿ ಆಗುತ್ತಿದೆ ಎಂದು ಹೇಳಿದ್ದರು. ಆದರೆ ಇದೀಗ ಹೊಸ ವೇಷದಲ್ಲಿ ಕಾಣಿಸಿಕೊಂಡು ಸೆನ್ಸ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗಲೆಲ್ಲವೂ ಟ್ರೋಲ್ ಬಿಟ್ಟರೆ ಇನ್ನೇನೂ ಆಗುವುದಿಲ್ಲ. ನಟಿಗೆ ಬೇಕಿರುವುದೂ ಅದೇ. ಇದಕ್ಕಾಗಿಯೇ ಈ ವೇಷ. ಕೆಲವು ಸೆಲೆಬ್ರಿಟಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳಿಗೆ ಇದೊಂದು ರೀತಿಯ ಚಟವಾಗಿದೆ. ಎಲ್ಲಿಯೂ ಅವಕಾಶ ಸಿಗದಾಗ ಸೋಷಿಯಲ್ ಮೀಡಿಯಾದಲ್ಲಿ ದೇಹ ಪ್ರದರ್ಶನ ಮಾಡಿಕೊಂಡು ಟ್ರೋಲ್ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿ. ಅದನ್ನೇ ಶೆರ್ಲಿನ್ ಮಾಡುತ್ತಿದ್ದಾರೆ.
ಶೆರ್ಲಿನ್ ಚೋಪ್ರಾಗೆ ಮಕ್ಕಳೆಂದರೆ ತುಂಬಾ ಇಷ್ಟ ಎಂದು ಹಿಂದೆಯೇ ಹೇಳಿದ್ದರು. ಇದು ಖುಷಿಯ ವಿಚಾರವೇ. ಆದರೆ ಇದೀಗ ಕೆಲವು ಮುಸ್ಲಿಂ ಮಕ್ಕಳ ಜೊತೆ ಅವರದ್ದೇ ರೀತಿಯಲ್ಲಿ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಶೆರ್ಲಿನ್ ಅವರನ್ನು ಪೂರ್ಣ ಡ್ರೆಸ್ನಲ್ಲಿ ನೋಡಬೇಕು ಎಂದರೆ ಸಿಗುವುದೇ ಕಷ್ಟ. ಇದೀಗ ಈಕೆ ಫುಲ್ ಡ್ರೆಸ್ನಲ್ಲಿ ಕಾಣಿಸಿಕೊಂಡಿರುವ ಜೊತೆಗೆ, ಈ ರೀತಿಯಲ್ಲಿ ವೇಷ ಭೂಷಣ ಮಾಡಿರುವುದನ್ನು ನೋಡಿರುವ ಟ್ರೋಲಿಗರು ಪ್ಲಾಸ್ಟಿಕ್ ರಾಣಿಯೂ ಡ್ರಾಮಾ ಕ್ವೀನ್ ರಾಖಿ ಸಾವಂತ್ ಹಾದಿ ಹಿಡಿದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಏನೂ ಅರಿಯದ ಪುಟ್ಟ ಮಕ್ಕಳನ್ನು ತಮ್ಮ ಪ್ರಚಾರದ ಲಾಲಸೆಗೆ ಬಳಸಿಕೊಳ್ಳುತ್ತಿರುವುದಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಸಹ್ಯ, ಅಸಭ್ಯ, ಅಶ್ಲೀಲತೆಗೆ ಹೆಸರಾಗಿರುವ ಇಂಥ ನಟಿ, ಈ ರೀತಿ ಮಾಡುವುದು ಸಹ್ಯವಲ್ಲ ಎಂದು ಕೆಲವರು ಕಮೆಂಟ್ ಕೂಡ ಹಾಕುತ್ತಿದ್ದಾರೆ.
ಶೆರ್ಲಿನ್ ಚೋಪ್ರಾ ಮಗುವನ್ನು ಎತ್ತಿಕೊಂಡ್ರೆ ಪುಟಾಣಿ ಹೀಗೆ ಮಾಡೋದಾ? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!