ದಿಶಾ ಪಟಾನಿ ಅವರ ಜೊತೆ ಬ್ರೇಕಪ್ ಆದ ಬಳಿಕ ನಟ ಟೈಗರ್ ಶ್ರಾಫ್ಗೆ ಈಗ ಇನ್ನೋರ್ವ ದಿಶಾ ಸಿಕ್ಕಿದ್ದಾರೆ. ಏನಿದು ವಿಷಯ? ನಟ ಹೇಳಿದ್ದೇನು?
ಸಿನಿಮಾ ಲೋಕದಲ್ಲಿ ಲವ್, ಬ್ರೇಕಪ್, ಡಿವೋರ್ಸ್, ಅಕ್ರಮ ಸಂಬಂಧ, ಲಿವ್ ಇನ್ ಎಲ್ಲವೂ ಕಾಮನ್ನೇ. ಅದರಲ್ಲೇನೂ ಹೊಸ ವಿಷಯವಿಲ್ಲ. ಅದೇ ರೀತಿ ಬಾಲಿವುಡ್‌ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದೇ ಫೇಮಸ್ ಆಗಿರೋ ದಿಶಾ ಪಟಾನಿ ಕೂಡ ಈ ಸಾಲಿಗೆ ಸೇರಿದವರು. ತಮ್ಮ ಬಾಯ್ಫ್ರೆಂಡ್ ಆಗಿದ್ದ ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ (Tiger Shroff)ಗೆ ಶಾಕ್ ನೀಡಿದ್ದ ನಟಿ ಹೊಸ ಫ್ರೆಂಡ್ ಜೊತೆ ಡೇಟಿಂಗ್ ನಡೆಸುತ್ತಿರುವ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಟೈಗರ್ ಮತ್ತು ದಿಶಾ ಹಲ ವರ್ಷಗಳಿಂದ ಡೇಟ್ ಮಾಡುತ್ತಿದ್ದರು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇಂದಿಗೂ ತಾವು ಸಂಬಂಧದಲ್ಲಿದ್ದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎಂದಿರಲಿಲ್ಲ. ಆದರೆ ಒಟ್ಟಿಗೇ ಮಾತ್ರ ಇದ್ದ ಬಗ್ಗೆ ಸಾಕಷ್ಟು ಪುರಾವೆಗಳು ಇದ್ದವು. ಆದರೆ ಇದರ ನಡುವೆಯೇ, ಉಲ್ಟಾ ಹೊಡೆದ ದಿಶಾ, ಮೊನ್ನೆಯಷ್ಟೇ ಹೊಸ ಬಾಯ್‌ಫ್ರೆಂಡ್‌ನನ್ನು ಪರಿಚಯಿಸಿದ್ದರು. ಅಲೆಕ್ಸಾಂಡರ್ ಅಲೆಕ್ಸಿಕ್ (Aleksander Alexilic) ಜೊತೆ ದಿಶಾ ಪಟಾಣಿ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಹೊಸ ಬಾಯ್ಫ್ರೆಂಡ್ ಎಂದಿದ್ದರು.
ಇದೀಗ, ದಿಶಾರ ಎಕ್ಸ್ ಬಾಯ್ಫ್ರೆಂಡ್ ಟೈಗರ್ ಶ್ರಾಫ್ ಕುರಿತು ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ದಿಶಾ ಪಟಾಣಿ ಕೈಕೊಟ್ಟ ಮೇಲೆ ಇನ್ನೋರ್ವ ದಿಶಾ ಜೊತೆ ಟೈಗರ್ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಅಷ್ಟಕ್ಕೂ ತಮಗೆ ಕಮಿಟೆಡ್ ರಿಲೇಶನ್ಶಿಪ್ನಲ್ಲಿ ನಂಬಿಕೆ ಇಲ್ಲ ಎನ್ನುವ ಟೈಗರ್, ನಟಿ ದಿಶಾ ಪಟಾಣಿ (Disha Patani) ಬಳಿಕ ಈಗ ಇನ್ನೋರ್ವ ದಿಶಾ (ದೀಶಾ ಎಂದೂ ಹೇಳಲಾಗುತ್ತದೆ) ಧನುಕಾ ಹಿಂದೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಬಾಂಬೆ ಟೈಮ್ಸ್ ಪ್ರಕಾರ, 33 ವರ್ಷದ ಟೈಗರ್, ಪ್ರೊಡಕ್ಷನ್ ಹೌಸ್‌ನಲ್ಲಿ ಹಿರಿಯ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ದೀಶಾ ಧನುಕಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ದಿಶಾ ಪಟಾನಿಯವರಿಂದ ಬೇರೆಯಾದ ಬಳಿಕ, ಒಂದೂವರೆ ವರ್ಷದಿಂದ ದೀಶಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. 'ದೀಶಾ ಟೈಗರ್ಗೆ ಆಗಾಗ್ಗೆ ಸ್ಕ್ರಿಪ್ಟ್‌ಗಳ ಬಗ್ಗೆ ಸಲಹೆಗಳನ್ನು ನೀಡುತ್ತಾರೆ, ಟೈಗರ್ ಕುಟುಂಬವೂ ದೀಶಾ ಅವರನ್ನೇ ಇಷ್ಟಪಡುತ್ತಿದೆ ಎಂದೇ ವರದಿಯಾಗಿದೆ.
ಟೈಗರ್ ಶ್ರಾಫ್ಗೆ ಶಾಕ್ ನೀಡಿದ ದಿಶಾ ಪಟಾನಿ: ಹೊಸ ಬಾಯ್ಫ್ರೆಂಡ್ ಪರಿಚಯಿಸಿದ ನಟಿ!
ಆದರೆ ಈ ಸಂಬಂಧವನ್ನೂ ನಟ ಟೈಗರ್ ಒಪ್ಪಿಕೊಳ್ಳುತ್ತಿಲ್ಲ. ನಾನು ಕಳೆದ ಎರಡು ವರ್ಷಗಳಿಂದ ಒಂಟಿಯಾಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ನನ್ನ ಹೆಸರು ಕೆಲವರ ಜೊತೆ ಕೇಳಿ ಬರುತ್ತಿದೆ. ಆದರೆ ಅದ್ಯಾವುವೂ ಸತ್ಯವಾದುದಲ್ಲ ಎಂದು ಟೈಗರ್ ಹೇಳುವ ಮೂಲಕ ದೀಶಾ ಧನುಕಾ (Deesha Dhanuka) ಜೊತೆಗಿನ ಡೇಟಿಂಗ್ ವಿಷಯವನ್ನು ಅಲ್ಲಗಳೆದಿದ್ದಾರೆ.
ಅಂದಹಾಗೆ ದಿಶಾ ಪಟಾಣಿ ಮತ್ತು ಟೈಗರ್ ನಡುವೆ ಸಂಬಂಧ ಶುರುವಾದದ್ದು ಇಬ್ಬರೂ ಸಿನಿಮಾಕ್ಕೆ ಬರುವ ಮೊದಲೇ. ನಂತರ ಬಘಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಗೆಳೆಯನವೇ ಪ್ರೇಮಾಂಕುರವಾಗಲು ಕಾರಣವಾಯ್ತು ಎನ್ನಲಾಗಿದೆ. ಇಷ್ಟಿದ್ದರೂ ಜೋಡಿ ಜೊತೆಜೊತೆಯಾಗಿಯೇ ಹೋದರೂ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಈಗ ಹೊಸ ಗೆಳೆಯನನ್ನು ಪರಿಚಯಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರೆ, ಇತ್ತ ದೀಶಾ ಜೊತೆ ಟೈಗರ್ ಹೆಸರು ಕೇಳಿಬರುತ್ತಿದೆ. ಈ ಬಣ್ಣದ ಲೋಕದಲ್ಲಿ (Cine Industry) ಕಾಣುವುದೆಲ್ಲವೂ ಸತ್ಯವಲ್ಲ, ಸತ್ಯವಾಗಿದ್ದರೂ ಎಲ್ಲವೂ ವಿಚಿತ್ರ ಸಂಬಂಧಗಳೇ ಎನ್ನುವ ಮಾತು ಕೂಡ ಇಲ್ಲಿ ಉಲ್ಲೇಖಾರ್ಹ.