ಲೈಂಗಿಕ ಶಿಕ್ಷಣದ ಬಗ್ಗೆ ಅಕ್ಷಯ್ ಕುಮಾರ್ ಚಿತ್ರ; 'ನನ್ನ ಜೀವನದ ಅತ್ಯುತ್ತಮ ಸಿನಿಮಾವಾಗಲಿದೆ' ಎಂದ ನಟ

By Shruthi Krishna  |  First Published Dec 4, 2022, 4:33 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಲೈಗಿಂಕ ಶಿಕ್ಷಣ ಕುರಿತಾಗಿ ಸಿನಿಮಾ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ.


ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸದ್ಯ ಹಿಂದಿ ಜೊತೆಗೆ ಮರಾಠಿಗೆ ಹಾರಿದ್ದಾರೆ. ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳು ಸೋತ ಬಳಿಕ ಅಕ್ಷಯ್ ಕುಮಾರ್ ಮರಾಠಿಯಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ವರ್ಷಅಕ್ಷಯ್ ಕುಮಾರ್ ಅವರ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ನಿರಾಶಾದಾಯಕ ವರ್ಷವಾಗಿದೆ. ವಿಭಿನ್ನ ವಿನೂತನ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಲೈಗಿಂಕ ಶಿಕ್ಷಣ ಕುರಿತಾಗಿ ಸಿನಿಮಾ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ. ಸೌದಿ ಅರೇಬಿಯಾದ ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದ ನಟ ಅಕ್ಷಯ್ ಕುಮಾರ್ ಈ ವಿಚಾರ ಬಹಿರಂಗ ಬಹಿರಂಗ ಪಡಿಸಿದರು.  

'ಇದು ಬಹಳ ಮುಖ್ಯವಾದ ವಿಷಯವಾಗಿದೆ. ಬಹಳಷ್ಟು ಮಂದಿಗೆ ಈ ಬಗ್ಗೆ ಅರಿವಿಲ್ಲ. ನಾವು ಶಾಲೆಯಲ್ಲಿ ಎಲ್ಲಾ ರೀತಿಯ ವಿಷಯಗಳನ್ನು ಕಲಿಯುತ್ತೇವೆ. ಪ್ರಪಂಚದ ಎಲ್ಲಾ ಶಾಲೆಗಳಲ್ಲಿಯೂ ಲೈಂಗಿಕ ಶಿಕ್ಷಣ ಇರಬೇಕು ಎಂದು ನಾನು ಬಯಸುತ್ತೇನೆ. ಆದರೆ ಇದು ಕಾರ್ಯರೂಪಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಶುರು ಮಾಡುತ್ತೇವೆ' ಎಂದು ಅವರು ಹೇಳಿದರು. ಜೊತೆಗೆ 'ಇದು ನಾನು ಮಾಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ' ಎಂದು ಹೇಳಿದ್ದಾರೆ. 

Tap to resize

Latest Videos

'ನಾನು ಸಾಮಾಜಿಕ ಚಲನಚಿತ್ರಗಳನ್ನು ಮಾಡಲು ಇಷ್ಟಪಡುತ್ತೇನೆ, ಅದು ವಿಶೇಷವಾಗಿ ನನ್ನ ದೇಶದಲ್ಲಿ ಮತ್ತು ಯಾರ ಜೀವನದಲ್ಲಿಯಾದರೂ ಬದಲಾವಣೆ ತರುತ್ತದೆ' ಎಂದು ಅಕ್ಷಯ್ ಕುಮಾರ್ ಹೇಳಿದರು. 

ಸಿನಿಮಾದಿಂದ ದೂರವಾಗಿರುವ 90ರ ದಶಕದ ಈ ನಟರು ಈಗೇನು ಮಾಡ್ತಿದ್ದಾರೆ ಗೊತ್ತಾ?

'ನಾನು ಅಂಥ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುತ್ತೇನೆ, ಆದರೆ ನಾನು ಅದನ್ನು ವಾಣಿಜ್ಯ ರೀತಿಯಲ್ಲಿ ಮಾಡುತ್ತೇನೆ. ಅಲ್ಲಿ ಹಾಡುಗಳು, ಹಾಸ್ಯ, ಡ್ರಾಮ, ದುರಂತ ಎಲ್ಲಾ ಇದೆ. ನಾನು ನೈಜ ಕಥೆಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ಅದನ್ನು ಅಳವಡಿಸಿಕೊಂಡು ವಾಣಿಜ್ಯ ರೀತಿಯಲ್ಲಿ ಬಳಸಿಕೊಳ್ಳುತ್ತೇನೆ' ಎಂದು ಹೇಳಿದರು. 

ಸೌದಿ ಅರೇಬಿಯಾದಲ್ಲಿ ಬಾಲಿವುಡ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಅಕ್ಷಯ್ ಕುಮಾರ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಚಪ್ಪಾಳೆ, ಶಿಳ್ಳೆ ಜೋರಾಗಿತ್ತು. ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು. 

ಅಕ್ಷಯ್ ಕುಮಾರ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಹಿಂದಿ ಸಿನಿಮಾ ಜೊತೆಗೆ ಮರಾಠಿ ಸಿನಿಮಾ ಮಾಡುತ್ತಿದ್ದಾರೆ. ಮರಾಠಿಯ ಖ್ಯಾತ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ 'ವೇದತ್ ಮರಾಠಿ ವೀರ್ ದೌಡಲೆ ಸಾತ್' ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಮಹಾರಾಜನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ಮಾಪಕ ವಸೀಂ ಖುರೇಷಿ ಬಂಡವಾಳ ಹೂಡುತ್ತಿದ್ದಾರೆ. 

ಗಲ್ವಾನ್ ಹೇಳಿಕೆ: ದೇಶಕ್ಕೆ ನಿಮಗಿಂತ ರಿಚಾ ಚಡ್ಡಾ ಹೆಚ್ಚು ಪ್ರಸ್ತುತ; ಅಕ್ಷಯ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಕಿಡಿ

ಅಕ್ಷಯ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕೊನೆಯದಾಗಿ ರಾಮ್ ಸೇತು ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣುವಲ್ಲಿ ವಿಫಲವಾಗಿದೆ. ಈ ವರ್ಷ ಅಕ್ಷಯ್ ಕುಮಾರ್ ನಟನೆಯ 5 ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವ ಸಿನಿಮಾಗಳು ಸಹ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳ ಮೇಲೆ ಕುತೂಹ  ಹೆಚ್ಚಾಗಿದೆ. 
 

click me!