ಅರ್ಬಾಜ್ ಖಾನ್‌ ಜೊತೆ ವಿಚ್ಛೇದನದ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಹಾಟ್ ನಟಿ ಮಲೈಕಾ ಅರೋರಾ

By Shruthi Krishna  |  First Published Dec 4, 2022, 12:00 PM IST

ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ವಿಚ್ಛೇದನದ ಮತ್ತು ಅರ್ಬಾಜ್ ಖಾನ್ ಖಾನ್ ಬಗ್ಗೆ ಮತಾನಾಡಿ ಕಣ್ಣೀರಿಟ್ಟಿದ್ದಾರೆ. 


ಬಾಲಿವುಡ್ ಹಾಟ್ ನಟಿ, ಡಾನ್ಸರ್ ಮಲೈಕಾ ಅರೋರಾ ಸದ್ಯ ಹೊಸ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗಲಿರುವ ಮಲೈಕಾ ಹೊಸ ರಿಯಾಲಿಟಿ ಶೋ 'ಮೂವಿಂಗ್ ಇನ್ ವಿತ್ ಮಲೈಕಾ' ಶೋ ನಡೆಸಿಕೊಡುತ್ತಿದ್ದಾರೆ. ಸದ್ಯ ಈ ಶೋನ ಟೀಸರ್ ರಿಲೀಸ್ ಆಗಿದ್ದು ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿದ್ದಾರೆ ಮಲೈಕಾ. ಫರ್ಹಾ ಖಾನ್ ಜೊತೆ ನಡೆದ ಸಂವಾದದಲ್ಲಿ ಮಲೈಕಾ ತನ್ನ ಜೀವನದ ಬಗ್ಗೆ ಮಾತನಾಡಿದ್ದಾರೆ. ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಮಲೈಕಾ ಕಣ್ಣೀರಿಟ್ಟರು. ಮಲೈಕಾ ಬೆಸ್ಟ್ ಫ್ರೆಂಡ್ ಕರೀನಾ ಕಪೂರ್ ಕೂಡ ಮಾತನಾಡಿ ಮಲೈಕಾರನ್ನು ಹಾಡಿಹೊಗಳಿದರು. ಇನ್ನು ಮಲೈಕಾ ಅರೋರಾ ಸಹೋದರಿ ಅಮೃತಾ ಆರೋರಾ ಕೂಡ ಮಲೈಕಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು. 

'ಲೈಫ್‌ನಲ್ಲಿ ನಾನು ಮುಂದೆ ಹೋಗಿದ್ದೇನೆ, ನನ್ನ ಎಕ್ಸ್ ಕೂಡ ಮುಂದೆ ಸಾಗಿದ್ದಾರೆ. ಆದರೆ ನೀವು  ಯಾವಾಗ ಮುಂದೆ ಸಾಗುತ್ತೀರಿ' ಎಂದು ಮಲೈಕಾ ಕೇಳಿದ್ದಾರೆ. ಮತ್ತೊಂದು ದೃಶ್ಯದಲ್ಲಿ, ಮಲೈಕಾ ತನ್ನ ಜೀವನದ ನಿರ್ಧಾರಗಳ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದರು. 'ನನ್ನ ಜೀವನದಲ್ಲಿ ನಾನು ಮಾಡಿದ ಪ್ರತಿಯೊಂದು ನಿರ್ಧಾರವು ಸಂಪೂರ್ಣವಾಗಿ ಯೋಗ್ಯವಾಗಿದೆ. ನಾನು ಸಂತೋಷವಾಗಿದ್ದೇನೆ' ಎಂದು ಹೇಳಿ ಭಾವುಕರಾದರು. ಫರ್ಹಾ ಖಾನ್ ಸಮಾಧಾನ ಪಡಿಸದರು. 'ಅಯ್ಯೋ, ನೀನು ಅಳುತ್ತಿರುವಾಗಲೂ ಸುಂದರವಾಗಿ ಕಾಣುತ್ತೀಯ' ಫರ್ಹಾ ತಮಾಷೆ ಮಾಡಿದರು.

ಮಲೈಕಾ ಅರೋರಾ ಪ್ರೆಗ್ನೆಂಸಿ ಸುದ್ದಿ ಕೋಪಗೊಂಡ ಅರ್ಜುನ್ ಕಪೂರ್!

Tap to resize

Latest Videos

ಅಂದಹಾಗೆ ಈ ಹೊಸ ರಿಯಾಲಿಟಿ ಶೋ ಡಿಸೆಂಬರ್ 5 ಹಾಟ್‌ಸ್ಟಾರ್ ನಲ್ಲಿ ಪ್ರಸಾರವಾಗಲಿದೆ. ಸೋಮವಾರ ಮತ್ತು ಗುರುವಾರ ರಾತ್ರಿ 8 ಗಂಟೆಗೆ ಡಿಸ್ನಿ ಪ್ಲಸ್‌ಹಾಟ್‌ಸ್ಟಾರ್‌ನಲ್ಲಿ ಮಾತ್ರ ಸ್ಟ್ರೀಮಿಂಗ್ ಆಗಲಿದೆ.  ಮಲೈಕಾ ಪೋಸ್ಟ್ ಗೆ ಅಭಿಮಾನಿಗಳು ಮತ್ತು ಸಿನಿ ಗಣ್ಯರು ಸಹ ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಡಿನೋ ಮೊರಿಯಾ ಕಾಮೆಂಟ್ಮಾಡಿ 'ಗುಡ್ ಲಕ್ ಮಾಲಾ' ಎಂದಿದ್ದಾರೆ.  ಇನ್ನೂ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಚೈಯ್ಯಾ ಚೈಯ್ಯಾಯಿಂದ ಅಪ್‌ ಜೈಸಾ ಕೋಯಿ: ಯುವಕರ ನಿದ್ರೆಗೆಡಿಸಿದ ಮಲೈಕಾ ಐಟಂ ನಂಬರರ್ಸ್

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ನವೆಂಬರ್ 2002ರಲ್ಲಿ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. ಇಬ್ಬರೂ  ಸುಮಾರು 18 ವರ್ಷಗಳ ಕಾಲ ಸಂಸಾರ ನಡೆಸಿದಿರು. ಆದರೆ 2017ರಲ್ಲಿ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು. ಆದರೆ ತಮ್ಮ ಮಗನಿಗೆ ಸಹ-ಪೋಷಕತ್ವವನ್ನು ಮುಂದುವರೆಸಿದ್ದಾರೆ. ಮಲೈಕಾ ಈಗ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ಮತ್ತೊಂದೆಡೆ ಅರ್ಬಾಜ್ ಖಾನ್ ಮಾಡೆಲ್ ಜಾರ್ಜಿಯಾ ಆಂಡ್ರಿಯಾ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಬಾಜ್ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

 

click me!