Pushpa 2; ಅಲ್ಲು ಅರ್ಜುನ್ ಸಿನಿಮಾಗೆ ವಿದೇಶಿ ವಿಲನ್ ಎಂಟ್ರಿ; ನಿರೀಕ್ಷೆ ಹೆಚ್ಚಿಸಿದ ಸುಕುಮಾರ್

By Shruthi Krishna  |  First Published Dec 4, 2022, 1:31 PM IST

ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾಗೆ ವಿದೇಶಿ ವಿಲನ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಮೂಲಕ ನಿರ್ದೇಶಕ ಸುಕುಮಾರ್ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. 


ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದ ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಪುಷ್ಪ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ನಿರ್ದೇಶಕ ಸುಕುಮಾರ್ 2ನೇ ಭಾಗವನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ತಯಾರಿಸುತ್ತಿದ್ದಾರೆ. ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಇದೀಗ ಪಾರ್ಟ್ 2ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಮುಹೂರ್ತ ನರೆವೇರಿದ್ದು ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ಪುಷ್ಪ-2 ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಮತ್ತೊಂದು ಥ್ರಿಲಿಂಗ್ ಸುದ್ದಿ ಬಹಿರಂಗವಾಗಿದೆ. ಪುಷ್ಪ-2ಗೆ ವಿದೇಶಿ ವಿಲನ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಪುಷ್ಪ ಇದೀಗ  ವಿದೇಶಿ ಮಾರುಕಟ್ಟೆ ಮೇಲೆ ಸುಕುಮಾರ್ ಕಣ್ಣಿಟ್ಟಿದ್ದಾರೆ. ಹಾಗಾಗಿ ವಿದೇಶಿ ನಟನನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. 

ಅಂದಹಾಗೆ ಪುಷ್ಪ-2ಗೆ ಎಂಟ್ರಿ ಕೊಟ್ಟಿರುವ ವಿದೇಶಿ ವಿಲನ್ ಮತ್ಯಾರು ಅಲ್ಲ ಸಜ್ಜಾದ್ ಡೆಲಾಫ್ರೂಜ್. ಈಗಾಗಲೇ ಭಯಾನಕ ಪಾತ್ರಗಳ ಮೂಲಕ ನೋಡುಗರನ್ನು ಬೆಚ್ಚಿಬೀಳಿಸಿದ್ದ ನಟ ಸಜ್ಜಾದ್ ಡೆಲಾಫ್ರೂಜ್ ಇದೀಗ ಅಲ್ಲು ಅರ್ಜುನ್ ವಿರುದ್ಧ ತೊಡೆತಟ್ಟಲಿದ್ದಾರೆ ಎನ್ನಲಾಗಿದೆ. ಸಜ್ಜಾದ್ ಡೆಲಾಫ್ರೂಜ್ ಈಗಾಗಲೇ ಸಲ್ಮಾನ್ ಖಾನ್ ನಟನೆಯ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಕ್ರೂರ ಉಗ್ರನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಜೊತೆಗೆ ವೆಬ್ ಸೀರಿಸ್‌ನಲ್ಲೂ ನಟಿಸಿದ್ದರು. ಇದೀಗ ಮತ್ತೆ ಭಾತರದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ರಷ್ಯಾ ಭಾಷೆಯಲ್ಲಿ ರಶ್ಮಿಕಾ ಮಂದಣ್ಣ- ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ 'ಪುಷ್ಪ'; ಯಾವಾಗ ರಿಲೀಸ್?

Tap to resize

Latest Videos

ಇರಾನಿ ಮೂಲಕ ನಟ  ಸಜ್ಜಾದ್ ಡೆಲಾಫ್ರೂಜ್ ದುಬೈನಲ್ಲಿ ಬೆಳೆದರು. ಅನೇಕ ಹಾಲಿವುಡ್ ಸಿನಿಮಾಗಳಲ್ಲಿ ಸಜ್ಜಾದ್ ನಟಿಸಿದ್ದಾರೆ. ಟೈಗರ್ ಜಿಂದಾ ಹೈ ಮತ್ತು ಹಾಟ್‌ಸ್ಟಾರ್ ವೆಬ್ ಸೀರಿಸ್ ನಲ್ಲಿ ನಟಿಸಿದ ಬಳಿಕ ಸಜ್ಜಾದ್ ಭಾರತದಲ್ಲಿ ಸಿಕ್ಕಾಪಟ್ಟೆ ಪೇಮಸ್ ಆದರು. ಇದೀಗ ಸೌತ್ ಸಿನಿಮಾಗೂ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸದಿದ್ದರೂ ಸಜ್ಜಾದ್ ನಟಿಸುವುದು ಕನ್ಫರ್ಮ್ ಎನ್ನುತ್ತಿವೆ ಮೂಲಗಳು. 

ಅಂದಹಾಗೆ ಪುಷ್ಪ-2ನಲ್ಲಿ ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ಕೂಡ ನಟಿಸುತ್ತಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಫಹಾದ್ ಎಂಟ್ರಿ ಕೊಟ್ಟಿದ್ದರು. 2ನೇ ಭಾಗದಲ್ಲಿ ಫಹಾದ್ ಪಾತ್ರ ಸಂಪೂರ್ಣವಾಗಿ ಇರಲಿದೆ. ಫಹಾದ್ ಜೊತೆ ಇದೀಗ ವಿದೇಶಿ ವಿಲನ್ ಕೂಡ ಎಂಟ್ರಿ ಕೊಟ್ಟಿರುವುದು ಪುಷ್ಪ-2 ಸಿನಿಮಾದ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಮತ್ತಷ್ಟು ಹೆಚ್ಚಿಸಿದೆ. 

'ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್' ಸುದ್ದಿ ವೈರಲ್; ಪುಷ್ಪ-2, ವಾರಿಸು ಸಿನಿಮಾಗಳಿಗೆ ಶುರುವಾಯ್ತು ಭಯ

ಪುಷ್ಪ ಪಾರ್ಟ್ 1 ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಬಳಿಕ ನಿರ್ದೇಶಕ ಸುಕುಮಾರ್ ಪುಷ್ಪ-2   ಕಥೆಯನ್ನು  ಕೊಂಚ ಬದಲಾಯಿಸಲಾಗಿದ್ದು ದೊಡ್ಡ ಮಟ್ಟದಲ್ಲಿ ತರಲು ನಿರ್ಧರಿಸಿದ್ದಾರೆ. ರಕ್ತ ಚಂದನದ ಕಳ್ಳ ಸಾಗಣಿಕೆ ಬಗ್ಗೆ ಇರುವ ಸಿನಿಮಾ ಪುಷ್ಪ. ಮೊದಲ ಭಾಗದಲ್ಲಿ ಲಾರಿ ಡ್ರೈವರ್ ಆಗಿದ್ದ ಅಲ್ಲು ಅರ್ಜುನ್ ಕಳ್ಳ ಸಾಗಣಿಕೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಪಾರ್ಟ್-2 ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸದ್ಯ ಚಿತ್ರೀಕರಣ ಪ್ರಾರಂಭವಾಗಿದ್ದು ಇನ್ನೂ ಆರಂಭದ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾದ್ಯತೆ ಇದೆ.  


 

click me!