ಬೆಲ್ ಬಾಟಮ್ ಸಿನಿಮಾದಲ್ಲಿ ಪಾಕಿಸ್ತಾನ ವಿರುದ್ಧ ಅನೇಕ ವಿಚಾರಗಳಿವೆ ಎಂದು ಪಾಕ್ ವ್ಯಕ್ತಿ ಕೇಳಿದ ಪ್ರಶ್ನೆಗೆ ಅಕ್ಷಯ್ ಕುಮಾರ್ ಉತ್ತರ ನೀಡಿದ್ದಾರೆ.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸತತ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಈ ವರ್ಷ ರಿಲೀಸ್ ಆದ ಅಕ್ಷಯ್ ಕುಮಾರ್ ಸಿನಿಮಾಗಳು ಯಾವುದೂ ಸಕ್ಸಸ್ ಕಂಡಿಲ್ಲ. ಅಂದಹಾಗೆ 2022ರಲ್ಲಿ ಅಕ್ಷಯ್ ಕುಮಾರ್ ಅವರ 5 ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಇದ್ಯಾವ ಸಿನಿಮಾಗಳು ಸಹ ಅಭಿಮಾನಿಗಳ ಹೃದಿಯ ಗೆದ್ದಿಲ್ಲ, ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ ಸಕ್ಸಸ್ ಕಂಡಿಲ್ಲ. ಸದ್ಯ ಅಕ್ಷಯ್ ಕುಮಾರ್ ವಿಭಿನ್ನ ರೀತಿಯ ಸಿನಿಮಾಗಳ ಬಗ್ಗೆ ಗಮನ ಹರಿಸಿದ್ದಾರೆ. ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ಸೌದಿ ಅರೇಬಿಯಾದ ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದ ಅಕ್ಷಯ್ ಕುಮಾರ್ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಅನೇಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ನಡುವೆ ಪಾಕ್ ವ್ಯಕ್ತಿಯೊಬ್ಬ ಬೆಲ್ ಬಾಟಮ್ ಸಿನಿಮಾ ಪಾಕಿಸ್ತಾನದ ವಿರುದ್ಧವಾಗಿ ತೋರಿಸಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಪಾಕ್ ವ್ಯಕ್ತಿಯ ಪ್ರಶ್ನೆಗೆ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿರುವ ಅಕ್ಷಯ್ ಕುಮಾರ್ ಕೇವಲ ಸಿನಿಮಾ ಅಷ್ಟೆ ಎಂದು ಹೇಳಿದರು.
ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಮ್ ಸಿನಿಮಾ 2021ರಲ್ಲಿ ರಿಲೀಸ್ ಆಗಿದೆ. ರಂಜಿತ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಇಂಡಿಯನ್ ಏರ್‌ಲೈನ್ಸ್‌ನ ವಿಮಾನ ಅಪಹರಣ ಮತ್ತು ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆಯ ಸುತ್ತ ಸುತ್ತುವ ಕತೆ ಇದೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪಾಕ್ ವ್ಯಕ್ತಿಯ ಪ್ರಶ್ನೆ
ಪಾಕಿಸ್ತಾನದ ವ್ಯಕ್ತಿ ಅಕ್ಷಯ್ ಕುಮಾರ್ ಬಳಿ 'ನಾನು ನಿಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನದಿಂದ ಬಂದಿದ್ದೇನೆ. ನನ್ನದೊಂದು ವಿನಂತಿ. ನೀವು ಪ್ಯಾಡ್ ಮ್ಯಾನ್ ಮತ್ತು ಟಾಯ್ಲೆಟ್‌ನಂತಹ ಅದ್ಭುತ ಚಲನಚಿತ್ರಗಳನ್ನು ಮಾಡುತ್ತೀರಿ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಮಸ್ಯೆಗಳಿವೆ. ನಿಮ್ಮ ಇತ್ತೀಚಿನ ಚಲನಚಿತ್ರ ಬೆಲ್ ಬಾಟಮ್ ನಲ್ಲಿ ಪಾಕಿಸ್ತಾನದ ವಿರುದ್ಧ ಕೆಲವು ವಿಚಾರಗಳಿವೆ' ಎಂದು ಹೇಳಿದರು.
ಲೈಂಗಿಕ ಶಿಕ್ಷಣದ ಬಗ್ಗೆ ಅಕ್ಷಯ್ ಕುಮಾರ್ ಚಿತ್ರ; 'ನನ್ನ ಜೀವನದ ಅತ್ಯುತ್ತಮ ಸಿನಿಮಾವಾಗಲಿದೆ' ಎಂದ ನಟ
ಅಕ್ಷಯ್ ಕುಮಾರ್ ಉತ್ತರ
ಪಾಕ್ ವ್ಯಕ್ತಿಗೆ ಉತ್ತರ ನೀಡಿದ ಅಕ್ಷಯ್ ಕುಮಾರ್, 'ಸರ್ ಇದು ಕೇವಲ ಸಿನಿಮಾವಾಗಿದೆ. ಅದರ ಬಗ್ಗೆ ತುಂಬಾ ಗಂಭೀರವಾಗಬೇಡಿ. ಇದು ಕೇವಲ ಸಿನಿಮಾ. ಅಂತಹ ಹಲವಾರು ವಿಷಯಗಳಿವೆ. ಸಿನಿಮಾ ಅಷ್ಟೆ ಸರ್' ಎಂದು ಹೇಳಿದರು.
ಬೆಲ್ ಬಾಟಮ್ ಸಿನಿಮಾ ಬಗ್ಗೆ
ಬೆಲ್ ಬಾಟಮ್ 1980ರ ದಶಕದ ಕತೆಯ ಸಿನಿಮಾವಾಗಿದೆ. ಅಕ್ಷಯ್ ಭಾರತದ ಸೀಕ್ರೆಟ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ವಿದೇಶಗಳಲ್ಲಿ ವ್ಯಾಪಕವಾಗಿ ಟೀಕಿಸಲ್ಪಟ್ಟಿತು. ಅದರಲ್ಲೂ ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲಿ ಈ ಸಿನಿಮಾವನ್ನು ನಿಷೇಧಿಸಲಾಗಿತ್ತು. ಈ ಚಿತ್ರದಲ್ಲಿ ವಾಣಿ ಕಪೂರ್, ಲಾರಾ ದತ್ತಾ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಸಿನಿಮಾದಿಂದ ದೂರವಾಗಿರುವ 90ರ ದಶಕದ ಈ ನಟರು ಈಗೇನು ಮಾಡ್ತಿದ್ದಾರೆ ಗೊತ್ತಾ?
ಅಕ್ಷಯ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕೊನೆಯದಾಗಿ ರಾಮ್ ಸೇತು ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣುವಲ್ಲಿ ವಿಫಲವಾಗಿದೆ. ಈ ವರ್ಷ ಅಕ್ಷಯ್ ಕುಮಾರ್ ನಟನೆಯ 5 ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವ ಸಿನಿಮಾಗಳು ಸಹ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳ ಮೇಲೆ ಕುತೂಹ ಹೆಚ್ಚಾಗಿದೆ.