
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಸತತ ಸೋಲಿನಿಂದ ಅಕ್ಷಯ್‌ಗೆ ಹೊರಬರಲು ಈ ವರ್ಷವೂ ಸಾಧ್ಯವಾಗಿಲ್ಲ. ಕಳೆದ ವರ್ಷ ರಿಲೀಸ್ ಆಗಿದ್ದ ಅಕ್ಷಯ್ 5 ಸಿನಿಮಾಗಳು ಹೀನಾಯ ಸೋಲು ಕಂಡಿತ್ತು. ಈ ವರ್ಷದ ಪ್ರಾರಂಭದಲ್ಲಿ ಬಂದ ಸೆಲ್ಫಿ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ಇದು ಮತ್ತೆ ಹಿಂತಿರುಗಿ ನೋಡುವ ಸಮಯವಾಗಿದೆ. ತನ್ನನ್ನು ಬದಲಾಯಿಸಿಕೊಳ್ಳುವ ಸಮಯ ಎಂದು ಹೇಳಿದ್ದಾರೆ. ಜೊತೆಗೆ ಸೋಲಿನ ಹೊಣೆಯನ್ನು ಅಕ್ಷಯ್ ಕುಮಾರ್ ಅವರೇ ಹೊತ್ತುಕೊಂಡಿದ್ದಾರೆ.
ಸತತ ಸೋಲಿನ ಬಗ್ಗೆ ಮಾತನಾಡಿದ ಅಕ್ಷಯ್, 'ಈ ಸೋಲು ನನಗೆ ಮೊದಲ್ಲ. ನನ್ನ ವೃತ್ತಿ ಜೀವನದಲ್ಲಿ ನಾನು ಒಂದೇ ಬಾರಿಗೆ 16 ಸತತ ಫ್ಲಾಪ್‌ಗಳನ್ನು ಕಂಡಿದ್ದೆ. ಒಂದು ಸಮಯವಿತ್ತು. ಸತತ ಎಂಟು ಚಿತ್ರಗಳು ಸೋತಿತ್ತು. ಈಗ ನಾನು ಸತತವಾಗಿ ಮೂರು-ನಾಲ್ಕು ಚಿತ್ರಗಳನ್ನು ಹೊಂದಿದ್ದೇನೆ ಅವು ಕೆಲಸ ಮಾಡಲಿಲ್ಲ. ಅದು ನಿಮ್ಮ ಸ್ವಂತ ತಪ್ಪಿನಿಂದ ನಡೆಯುತ್ತದೆ. ಪ್ರೇಕ್ಷಕರು ಬದಲಾಗಿದ್ದಾರೆ, ನೀವು ಬದಲಾಗಬೇಕು. ನೀವು ಮತ್ತೆ ಹೊಸದಾಗಿ ಪ್ರಾರಂಭಿಸಬೇಕು ಏಕೆಂದರೆ ಪ್ರೇಕ್ಷಕರು ಬೇರೆ ಏನನ್ನೋ ಬಯಸುತ್ತಿದ್ದಾರೆ' ಎಂದು ಹೇಳಿದರು.
'ಇದು ಉತ್ತಮ ಎಚ್ಚರಿಕೆಯಾಗಿದೆ. ನಿಮ್ಮ ಚಲನಚಿತ್ರಗಳು ಕೆಲಸ ಮಾಡದಿದ್ದರೆ, ಅದು ನಿಮ್ಮ ತಪ್ಪು. ನಿಮ್ಮ ಚಲನಚಿತ್ರಗಳು ಸತತವಾಗಿ ವಿಫಲವಾದಾಗ, ಅದು ನಿಮಗೆ ಎಚ್ಚರಿಕೆಯಾಗಿದೆ ನೀವು ಬದಲಾಗುವ ಸಮಯ. ನಾನು ಬದಲಾಗಲು ಪ್ರಯತ್ನಿಸುತ್ತಿದ್ದೇನೆ, ನಾನು ಮಾಡಬಲ್ಲೆ. ಚಿತ್ರಗಳು ಫ್ಲಾಪ್ ಆದಾಗ ಪ್ರೇಕ್ಷಕರನ್ನು ದೂಷಿಸಬಾರದು ಎಂದು ಎಲ್ಲರಿಗೂ ಹೇಳಲು ಬಯಸುತ್ತೇನೆ ಎಂದು ಅಕ್ಷಯ್ ಹೇಳಿದರು. 'ಪ್ರೇಕ್ಷಕರನ್ನು ಅಥವಾ ಬೇರೆಯವರನ್ನು ದೂಷಿಸಬೇಡಿ. ಇದು ನನ್ನ ತಪ್ಪು, 100%. ಇದು ಸಂಪೂರ್ಣ ನನ್ನ ಆಯ್ಕೆಯ ಮೇಲಿರುತ್ತದೆ.' ಎಂದು ಹೇಳಿದರು.
ಮುಂದುವರೆದ ಅಕ್ಷಯ್ ಕುಮಾರ್ ಸೋಲಿನ ಸರಣಿ; ನೆಲಕಚ್ಚಿದ ವರ್ಷದ ಮೊದಲ ಸಿನಿಮಾ, ಕಾಲೆಳೆದ ಕಂಗನಾ ರಣಾವತ್
ಲಾಕ್ ಡೌನ್ ಬಳಿಕ ಬಂದ ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಬೆಲ್ ಬಾಟಮ್, ಶೆಟ್ಟಿ-ಸೂರ್ಯವಂಶಿ ಹಾಗೂ 2022ರಲ್ಲಿ ಬಂದ ರಕ್ಷಾ ಬಂಧನ, ಸಾಮ್ರಾಟ್ ಪೃಥ್ವಿರಾಜ್ ಸೇರಿದಂತೆ ಇತ್ತೀಚೆಗಷ್ಟೆ ಬಂದ ಸೆಲ್ಫಿ ಸಿನಿಮಾದ ವರೆಗೂ ಯಾವ ಸಿನಿಮಾಗಳು ಹಿಟ್ ಆಗಿಲ್ಲ. ಸೆಲ್ಫಿ ಸಿನಿಮಾ ಮೊದಲ ದಿವನೇ ನೀರಸ ಪ್ರತಿಕ್ರಿಯೆ ಕಂಡಿದೆ. ಮೊದಲ ದಿನ 1.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅಕ್ಷಯ್ ಕುಮಾರ್ ಸಿನಿಮಾ ಅಂದ್ರೆ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ದೊಡ್ಡ ನಿರೀಕ್ಷೆ ಇರುತ್ತದೆ. ಆದರೆ ಕೇವಲ 1.30 ಕೋಟಿ ಗಳಿಕೆ ಮಾಡಿರುವುದು ಅಚ್ಚರಿ ಮೂಡಿಸಿದೆ.
ಚಿಂತೆ ಮಾಡ್ಬೇಡ ಮಗ, ದೇವರು ನಿನ್ನೊಂದಿಗೆ ಇದ್ದಾನೆ; ತಾಯಿಯನ್ನು ನೆನೆದು ಕಣ್ಣೀರಿಟ್ಟ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಬಳಿ ಇರುವ ಸಿನಿಮಾಗಳು
ಸಾಲು ಸಾಲು ಸೋಲು ಕಂಡರೂ ಅಕ್ಷಯ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಓ ಮೈ ಗಾಡ್-2, ಸೂರರೈ ಪೋಟ್ರು ಹಿಂದಿ ರಿಮೇಕ್, ಬಡೆ ಮಿಯನ್ ಚೋಟೆ ಮಿಯನ್, ಹೇರಾ ಫೆರಿ, ಮರಾಠಿ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.