ಪಾಕ್ ಸಿನಿಮಾದಲ್ಲಿ ನಟಿಸುತ್ತೇನೆ; ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ರಣಬೀರ್ ಕಪೂರ್ ಹೇಳಿಕೆ

By Shruthi KrishnaFirst Published Feb 25, 2023, 5:43 PM IST
Highlights

ಪಾಕಿಸ್ತಾನದ ಸಿನಿಮಾದಲ್ಲಿ ನಟಿಸಲು ಬಯಸುತ್ತೇನೆಎಂದು ಹೇಳಿದ್ದ ರಣಬೀರ್ ಕಪೂರ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. 

ಬಾಲಿವುಡ್ ನಟ ರಣಬೀರ್ ಕಪೂರ್ ಪಾಕಿಸ್ತಾನದ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಣಬೀರ್ ಕಪೂರ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ವಿವಾದ ದೊಡ್ಡದಾಗುತ್ತಿದಂತೆ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ. ರಣಬೀರ್ ಸದ್ಯ ತು ಜೂತಿ ಮೇನ್ ಮಕ್ಕರ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರ ವೇಳೆ ರಣಬೀರ್ ಕಪೂರ್ ಪಾಕ್ ಸಿನಿಮಾದಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿದ್ದರು ಎನ್ನಲಾಗಿದೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಣಬೀರ್ ರೆಡ್ ಸೀ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ರಣಬೀರ್ ಪ್ಯಾನೆಲ್‌ನ ಭಾಗವಾಗಿದ್ದರು. ಪಾಕಿಸ್ತಾನಿ ನಿರ್ದೇಶಕರೊಬ್ಬರು  ಪಾಕ್ ಸಿನಿಮಾದಲ್ಲಿ ನಟಿಸಲು ಮುಕ್ತರಾಗಿದ್ದೀರಾ ಎಂದು ಪ್ರಶ್ನೆ ಕೇಳಿದರು. ಆ ಪ್ರಶ್ನೆಗೆ ಉತ್ತರಿಸಿದ್ದ ರಣಬೀರ್, 'ಖಂಡಿತ, ಸರ್. ಕಲಾವಿದರಿಗೆ, ವಿಶೇಷವಾಗಿ ಕಲೆಗೆ ಯಾವುದೇ ಗಡಿಗಳಿಲ್ಲ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿ, ನಾನು ಇಷ್ಟಪಡುತ್ತೇನೆ' ಎಂದು ಹೇಳಿದ್ದರು. ರಣಬೀರ್ ಹೇಳಿಕೆ ಈಗ ವೈರಲ್ ಆಗಿದೆ. 

ರಣಬೀರ್ 30,000 ಬೆಲೆಯ ರಮ್ ಕುಡಿಸಿದ್ರು; ಶೂಟಿಂಗ್‌ನಲ್ಲಿ ಅತಿಯಾಗಿ ಕುಡಿದ ಘಟನೆ ಬಿಚ್ಚಿಟ್ಟ ನಟ ಸೌರಭ್

Latest Videos

ವಿವಾದ ದೊಡ್ಡದಾಗುತ್ತಿದ್ದಂತೆ ರಣಬೀರ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. ನಾನು ಚಲನಚಿತ್ರೋತ್ಸವಕ್ಕೆ ಹೋಗಿದ್ದೆ, ಅಲ್ಲಿ ಬಹಳಷ್ಟು ಪಾಕಿಸ್ತಾನಿ ಚಲನಚಿತ್ರ ನಿರ್ದೇಶಕರು ನನಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದರು, ‘ನಿಮಗೆ ಉತ್ತಮ ಸ್ಕ್ರಿಪ್ಟ್ ಸಿಕ್ಕಿದ್ದರೆ ನೀವು ಸಿನಿಮಾ ಮಾಡುತ್ತೀರಾ?’ ಎಂದು ಕೇಳಿದರು. ನನಗೆ ಯಾವುದೇ ರೀತಿಯಲ್ಲಿ ವಿವಾದವಾಗುವುದು ಇಷ್ಟವಿರಲಿಲ್ಲ. ನನಗೆ ಸಿನಿಮಾ ಸಿನಿಮಾ ಅಷ್ಟೆ, ಕಲೆ ಕಲೆ ಅಷ್ಟೆ.  ನಾನು ಫವಾದ್ ಖಾನ್ ಜೊತೆ  ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ' ಎಂದು ರಣಬೀರ್ ಹೇಳಿದ್ದಾರೆ. ಫವಾದ್ ಖಾನ್ ಪಾಕಿಸ್ತಾನಿ ನಟ. 

ಆಲಿಯಾ ರಣಬೀರ್‌ ದಾಖಲೆ ಮುರಿದ ಸಿದ್ಧಾರ್ಥ್‌ ಮಲ್ಹೋತ್ರ- ಕಿಯಾರಾ ದಂಪತಿ

'ನನಗೆ ಪಾಕಿಸ್ತಾನದ ಸಾಕಷ್ಟು ಕಲಾವಿದರು ಗೊತ್ತಿದೆ. ರಹತ್ (ಫತೇ ಅಲಿ ಖಾನ್) ಮತ್ತು ಅತೀಫ್ ಅಸ್ಲಾಂ ಅವರು ಹಿಂದಿ ಚಿತ್ರರಂಗಕ್ಕೆ ಕೊಡುಗೆ ನೀಡಿದ ಮಹಾನ್ ಗಾಯಕರು. ಹಾಗಾಗಿ, ಸಿನಿಮಾ ಸಿನಿಮಾ ಅಷ್ಟೆ. ಸಿನಿಮಾಗಳಿಗೂ ಗಡಿ ಇದೆ ಎಂದು ನಾನು ಭಾವಿಸಲ್ಲ. ಆದರೆ, ಸಹಜವಾಗಿ, ನೀವು ಕಲೆಯನ್ನು ಗೌರವಿಸಬೇಕು ಆದರೆ ಅದೇ ಸಮಯದಲ್ಲಿ, ಕಲೆ ನಿಮ್ಮ ದೇಶಕ್ಕಿಂತ ದೊಡ್ಡದಲ್ಲ. ಆದ್ದರಿಂದ, ನಿಮ್ಮ ದೇಶದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ ಯಾರಾದರೂ, ನಿಮ್ಮ ಮೊದಲ ಆದ್ಯತೆ ಯಾವಾಗಲೂ ನಿಮ್ಮ ದೇಶವಾಗಿರುತ್ತದೆ' ಎಂದು ರಣಬೀರ್ ಕಪೂರ್ ಹೇಳಿದ್ದರು.  

click me!