ಕಳೆದ ಕೆಲ ತಿಂಗಳಿನಿಂದ ನಟಿ ರಾಖಿ ಸಾವಂತ್ ಭಾರಿ ಸುದ್ದಿಯಲ್ಲಿದ್ದಾರೆ. ಸದ್ಯ ಅವರ ಎರಡನೆಯ ಪತಿ ಜೈಲಿನಲ್ಲಿರುವಾಗಲೇ ನಟಿ ಮದುಮಗಳ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಏನಿದರ ಅಸಲಿಯತ್ತು?
ರಾಖಿ ಸಾವಂತ್ (Rakhi Sawant) ಕಳೆದೆರಡು ತಿಂಗಳುಗಳಿಂದ ಭಾರಿ ಸುದ್ದಿಯಲ್ಲಿರುವ ನಟಿ. ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಂತರ, ಮೈಸೂರು ಕೋರ್ಟ್‌ಗೆ (Mysore Court) ಹಾಜರಾಗಿ ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದರು. 'ಆದಿಲ್ ನನ್ನನ್ನು ಮದುವೆಯಾಗಿದ್ದಾರೆ. ನನಗೆ ನ್ಯಾಯ ಬೇಕು. ಇಂದು ಬೆಳಗ್ಗೆ ಆದಿಲ್ ತಂದೆ ಜೊತೆ ಮಾತನಾಡಿರುವೆ. ನಾನು ಹಿಂದೂ ಆಗಿರುವ ಕಾರಣ ನನ್ನನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿರುವೆ ಎನ್ನುವ ವಿಚಾರವನ್ನು ಅವರಿಗೆ ತಿಳಿಸುತ್ತಿದ್ದಂತೆ ನನ್ನ ಕರೆ ಸ್ವೀಕರಿಸುತ್ತಿಲ್ಲ. ತಲಾಖ್ ಕೊಡುವುದಾಗಿ ಪತಿ ಆದಿಲ್ ಹೆದರಿಸುತ್ತಿದ್ದಾರೆ' ಎಂದು ರಾಖಿ ಸಾವಂತ್ ಹೇಳಿದ್ದರು. ಇವೆಲ್ಲಾ ಡ್ರಾಮಾಗಳು ನಡುವೆಯೇ ಈಗ ರಾಖಿ ಸಾವಂತ್ ವಧುವಿನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈಕೆ ಮೂರನೆಯ ಮದುವೆಗೆ ಸಿದ್ಧರಾಗಿದ್ದಾರೆ ಎಂದು ಭಾರಿ ಸುದ್ದಿಯಾಗುತ್ತಿದೆ.
ಅಂದಹಾಗೆ ರಾಖಿ ಮೊದಲು ರಾಕೇಶ್ ಎನ್ನುವವರ ಜೊತೆ ಮದುವೆಯಾಗಿದ್ದರು. ನಂತರ ಅವರ ಜೊತೆ ಸಂಬಂಧ ಕಳಚಿಕೊಂಡು ಮೈಸೂರಿನ ಆದಿಲ್ ಖಾನ್ ದುರ್ರಾನಿಯನ್ನು (Adil Khan Durrani) ಮದುವೆಯಾಗಿ ಬುರ್ಖಾ ಕೂಡ ತೊಟ್ಟಿಕೊಂಡು ಅಲ್ಲಾನನ್ನು ಪ್ರಾರ್ಥಿಸಿದ್ದರು. ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದರು. ನಂತರ ನಾನು ಫ್ರಿಜ್ ಒಳಗೆ ಹೋಗಲ್ಲ, ನನ್ನನ್ನು ಆದಿಲ್ ಸಾಯಿಸಿನೇ ಬಿಡುತ್ತಾನೆ ಎಂದು ಕಣ್ಣೀರು ಹಾಕಿದ್ದು, ಮುಂದಿನ ಕಥೆಗಳೆಲ್ಲಾ ಈಗ ಇತಿಹಾಸ. ಇಂತಿಪ್ಪ ರಾಖಿ ಮತ್ತೆ ಲೈಮ್ ಲೈಟ್‌ಗೆ ಬಂದಿದ್ದಾರೆ. ಅವರು ಇನ್ನೊಂದು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ.
ಗಂಡ ಜೈಲಿಗೆ ಹೋಗ್ತಿದ್ದಂತೆ ಬದ್ಧ ವೈರಿಯನ್ನು ತಬ್ಬಿ ಮುದ್ದಾಡಿದ ರಾಖಿ ಸಾವಂತ್!
ಬ್ರೈಡಲ್ ಲುಕ್ನಲ್ಲಿ (Bridal Look) ರಾಖಿ ಕಾಣಿಸಿಕೊಂಡಿದ್ದು, ಬಹಳ ಖುಷಿಯಲ್ಲಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಶೇರ್ ಮಾಡಿಕೊಂಡಿದ್ದಾರೆ. ಕೈಯಲ್ಲಿ ಬಣ್ಣದ ಬಳೆಗಳು, ತಲೆಯ ಮೇಲೆ ಸುಂದರವಾದ ದುಪಟ್ಟಾ ಮತ್ತು ವಧುವಿನ ಉಡುಗೆಯಲ್ಲಿ ರಾಖಿ ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದಾರೆ. ವೈರಲ್ ಫೋಟೋಗಳಲ್ಲಿ ರಾಖಿ ಅವರು ಚಿನ್ನಾಭರಣಗಳಿಂದ ಅಲಂಕರಿಸಲ್ಪಟ್ಟ ಗೋಲ್ಡನ್ ಬ್ರೈಡಲ್ ಲೆಹಂಗಾ(Golden Lehanga)ವನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಸುಂದರವಾಗಿ ಕಾಣುತ್ತಾರೆ. ಈ ಹಿನ್ನೆಲೆಯಲ್ಲಿ ಎರಡನೆಯ ಪತಿ ಜೈಲಿನಲ್ಲಿ ಇರುವಾಗಲೇ ರಾಖಿ ಮತ್ತೊಂದು ಮದುವೆಯಾಗುತ್ತಿದ್ದಾರೆ ಎಂದು ಸುದ್ದಿಯಾಗಿದೆ.
ಆದರೆ ಅಸಲಿಯತ್ತೇ ಬೇರೆ. ಸದ್ಯ ರಾಖಿ ಹೇಳಿಕೊಂಡಿರೋ ಪ್ರಕಾರ, ನೀವ್ಯಾರು ಊಹಿಸಿದಂತೆ ಇದು ನನ್ನ ಮತ್ತೊಂದು ಮದುವೆಯ ಫೋಟೋ ಶೂಟ್ (Photo Shoot) ಅಲ್ಲ. ಬದಲಿಗೆ ನನ್ನ ಗಂಡ ಮೋಸ ಮಾಡಿರುವ ಕಾರಣ, ಇನ್ನು ಸತ್ತರೂ ನಾನು ಮತ್ತೆ ಮದುವೆಯಾಗುವುದಿಲ್ಲ. ಸತ್ತು ಸಮಾಧಿಯಾದರೂ ನಾನು ಮದುವೆಯಾಗಲ್ಲ ಎಂದು ರಾಖಿ ಹೇಳಿದ್ದಾರೆ. ನನ್ನ ಹೊಸ ಹಾಡು ಬರುತ್ತಿದೆ. ಇದರಲ್ಲಿ ನಾನು ವಧುವಿನ ಲುಕ್ನಲ್ಲಿ ಬರಲಿದ್ದೇನೆ. ಅದಕ್ಕಾಗಿಯೇ ಈ ಗೆಟಪ್ ಎಂದಿದ್ದಾರೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ, ಆದರೆ ಆದಿಲ್ ಒಬ್ಬ ಹುಡುಗಿಯ ಮೇಲೆ ಅತ್ಯಾಚಾರವೆಸಗಿದವನು, ಮುಂಬೈನ ಹುಡುಗಿಯೊಂದಿಗೂ ಸಂಬಂಧ ಹೊಂದಿದ್ದನು ನಂತರ ನನ್ನ ಹಣ ತೆಗೆದುಕೊಂಡು ಓಡಿ ಹೋದವನು. ಅವನಿಂದಾಗಿ ನನ್ನ ತಾಯಿ ತೀರಿಕೊಂಡರು. ನಾನು ಅವನಿಗೆ ಹಣ ನೀಡಿದ್ದೆ, ಆದರೆ ಅವನು ತನ್ನ ತಾಯಿಗೆ ಸಮಯಕ್ಕೆ ಸರಿಯಾಗಿ ಆತ ಚಿಕಿತ್ಸೆ ನೀಡಲಿಲ್ಲ, ಇದರಿಂದಾಗಿ ಅವಳು ಸತ್ತಳು. ನಾನೆಂದೂ ಮದುವೆಯಾಗುವುದಿಲ್ಲ, ಸತ್ತರೂ ಮದುವೆಯಾಗುವುದಿಲ್ಲ ಎಂದು ರಾಖಿ ಹೇಳಿದ್ದಾರೆ.
ಹಣ ಪೀಕಲು ರಾಖಿ ಮೊದಲ ಗಂಡಂಗೂ ಹೀಗೆ ಮಾಡಿದ್ಲು ಎಂದ ಆದಿಲ್ ಲಾಯರ್!