ದಾನ ಧರ್ಮಗಳ ಮೂಲಕ ಹೆಸರು ಮಾಡುತ್ತಿರುವ ನಟ ಅಕ್ಷಯ್ ಕುಮಾರ್ 25 ವರ್ಷದ ಯುವತಿಯೊಬ್ಬಳಿಗೆ ಮರುಜನ್ಮ ನೀಡಿದ್ದಾರೆ... ಅದು ಹೇಗೆ?
ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಇತ್ತೀಚಿನ ಸಿನಿಮಾಗಳು ಯಾವುವೂ ಸರಿಯಾಗಿ ಕೈಹಿಡಿಯುತ್ತಿಲ್ಲ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಸಂಕಷ್ಟದಲ್ಲಿ ಇರುವವರಿಗೆ ಸದಾ ನೆರವಾಗುವ ಗುಣದಿಂದಾಗಿ. ಹಲವರ ಬಾಯಲ್ಲಿ ದೇವರು ಎನಿಸಿಕೊಂಡಿದ್ದಾರೆ ಅಕ್ಷಯ್ ಕುಮಾರ್. ಈ ಹಿಂದೆ ಅವರು, ಹುತಾತ್ಮ ಯೋಧ ಜೀತ್ ರಾಮ್ ಗುರ್ಜಾರ್ ಅವರ ಸಹೋದರ ವಿಕ್ರಮ್ ಸಿಂಗ್ ಅವರಿಗೆ ಸಹಾಯ ಹಸ್ತ ಚಾಚಿದ್ದರು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಈ ಯೋಧನ ಕುಟುಂಬಕ್ಕೆ ₹ 5 ಕೋಟಿ ದೇಣಿಗೆ (Donation) ನೀಡಿದ್ದರು.
ಯೋಧನ ಕುಟುಂಬ ತುಂಬಾ ಆರ್ಥಿಕ ಸಂಕಷ್ಟದಲ್ಲಿತ್ತು. ಅವರ ತಂದೆತಾಯಿ, ಸಹೋದರನ ಪತ್ನಿ ಜತೆಗೆ ಇಬ್ಬರು ಹೆಣ್ಣುಮಕ್ಕಳು ಅವಲಂಬಿತರಾಗಿದ್ದಾರೆ. ಸದ್ಯಕ್ಕೆ ಇಬ್ಬರು ಹೆಣ್ಣುಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಿ ನಡೆಸಿದ್ದರು. ಹಾಗಾಗಿ ಹುತಾತ್ಮ ಯೋಧರ ಕುಟುಂಬ ತೀರ ಸಂಕಷ್ಟದಲ್ಲಿತ್ತು. ಸಹೋದರ ಮಾತ್ರ ಜೀವನಾಧಾರವಾಗಿದ್ದ. ಇದನ್ನು ತಿಳಿದು ಸ್ವತಃ ಅಕ್ಷಯ್ ಕುಮಾರ್ (Akshay Kumar) ಸಹಾಯ ಹಸ್ತ ಚಾಚಿದ್ದರು.
ಅಕ್ಷಯ್ ಕುಮಾರ್ ಮಗ ಆರವ್ ಫೋಟೋ ವೈರಲ್, ಜೊತೆಯಲ್ಲಿರುವ ಮಿಸ್ಟರಿ ಗರ್ಲ್ ಯಾರು?
ಇದೀಗ ಮತ್ತೆ ಹೃದಯವೈಶಾಲ್ಯತೆಯನ್ನು ನಟ ಮೆರೆದಿದ್ದಾರೆ. 25 ವರ್ಷದ ದೆಹಲಿಯ ಯುವತಿಯ ಮರುಜನ್ಮ ನೀಡಿದ್ದಾರೆ. ಆಯುಷಿ ಶರ್ಮಾ (Ayushi Sharma) ಎನ್ನುವ ಯುವತಿಯ ಬಾಳಲ್ಲಿ ಹೊಸ ನಗು ತರಿಸಿದ್ದಾರೆ. ಮೊಮ್ಮಗಳ ಹೃದಯ ಕಸಿಗಾಗಿ ಹಣ ಹೊಂದಾಣಿಕೆ ಮಾಡಲು ಪರದಾಡುತ್ತಿದ್ದ 80 ವರ್ಷದ ಹಿರಿಯ ಜೀವಕ್ಕೆ ಆಸರೆ ನೀಡಿದ್ದಾರೆ.
ಏನಿದು ಘಟನೆ?
ಆಯುಷಿ ಶರ್ಮಾ ಎಂಬ 25 ವರ್ಷದ ಯುವತಿಗೆ ಹುಟ್ಟಿನಿಂದಲೂ ಹೃದಯ ಸಮಸ್ಯೆ. ಆದರೆ ಇದು ಸರಿಹೋಗಬಹುದು ಎನ್ನುವ ಕಾರಣಕ್ಕೆ ಔಷಧೋಪಚಾರ ಮಾಡುತ್ತಿದ್ದರು. ಇದರಲ್ಲಿಯೇ ಸರಿ ಆಗಬಹುದು ಎಂದು ನಂಬಿದ್ದರು.ಆದರೆ ಆಯುಷಿಗೆ 25 ವರ್ಷ ಆಗುತ್ತಿದ್ದಂತೆಯೇ ಸಮಸ್ಯೆ ಉಲ್ಬಣಗೊಂಡಿತು. ವೈದ್ಯರ ಬಳಿ ಹೋದಾಗ ಆಕೆಯ ಹೃದಯ 25 ಪರ್ಸೆಂಟ್ ಅಷ್ಟೇ ಕೆಲಸ ಮಾಡುತ್ತಿದೆ, ಹೀಗೆಯೇ ಬಿಟ್ಟರೆ ಜೀವಕ್ಕೆ ಅಪಾಯ. ಹೃದಯದ ಶಸ್ತ್ರಚಿಕಿತ್ಸೆ ಮಾಡಬೇಕು, ಹೃದಯದ ಕಸಿ ಮಾಡಬೇಕು ಎಂದಿದ್ದರು. ಇದಕ್ಕೆ ಏನಿಲ್ಲವೆಂದರೂ 50 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದಿದ್ದರು.
ಸಲ್ಮಾನ್ ಖಾನ್ ಕರಾಳ ಮುಖ ಜಗಜ್ಜಾಹೀರವಾಗಬೇಕು: ಮತ್ತೊಂದು ಬೇಡಿಕೆ ಇಟ್ಟ ಸೋಮಿ ಖಾನ್
ಮೊಮ್ಮಗಳ ಜೀವವನ್ನು ಉಳಿಸಿಕೊಳ್ಳಲು ಅಜ್ಜ ಯೋಗೇಂದ್ರ ಅರುಣ್ ಪ್ರಕಾರ ಅಲ್ಲಲ್ಲಿ ಸಾಲ ಸೋಲ ಮಾಡಿ ಅಷ್ಟಿಷ್ಟು ಹಣ ಹೊಂದಿಸಿದ್ದರು. ಆದರೆ ಏನು ಮಾಡಿದರೂ 50 ಲಕ್ಷ ರೂಪಾಯಿ ಸಂಗ್ರಹ ಮಾಡುವುದು ಕಷ್ಟವೇ ಆಯಿತು. ಈ ವಿಷಯ ಚಿತ್ರ ನಿರ್ದೇಶk ಡಾ.ಚಂದ್ರಪ್ರಕಾಶ್ ದ್ವಿವೇದಿ (Dr.ChandraPrakash Dwivedi) ಅವರಿಗೆ ತಿಳಿಯಿತು. ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ನಿರ್ದೇಶನ ಮಾಡುತ್ತಿದ್ದ ಅವರು, ಈ ವಿಷಯವನ್ನು ನಟ ಅಕ್ಷಯ್ ಕುಮಾರ್ ಅವರಿಗೆ ತಿಳಿಸಿದರು. ಹಿಂದೆ ಮುಂದೆ ನೋಡದ ನಟ ಅಕ್ಷಯ್ ಕುಮಾರ್, 15 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಇನ್ನಷ್ಟು ಹಣದ ಅವಶ್ಯಕತೆ ಇದ್ದರೆ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.
ತಮ್ಮ ಮೊಮ್ಮಗಳಿಗೆ ಹೊಸ ಜೀವ ನೀಡಿದ ಅಕ್ಷಯ್ ಕುಮಾರ್ ಕುರಿತು ಅಜ್ಜ, 82 ವರ್ಷದ ನಿವೃತ್ತ ಪ್ರಾಂಶುಪಾಲ ಯೋಗೇಂದ್ರ ಅರುಣ್, ಯೋಗೇಂದ್ರ ಅರುಣ್ ಮಾಧ್ಯಮಗಳ ಜೊತೆ ಹೇಳಿಕೊಂಡಿದ್ದಾರೆ. ಮೊಮ್ಮಗಳನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆಯ ಬಗ್ಗೆ ತಿಳಿಯಿತು. ಹೃದಯ ಶಸ್ತ್ರಚಿಕಿತ್ಸೆ (Surgery) ಮಾಡಬೇಕಿತ್ತು. ಹಣದ ಕೊರತೆ ಇತ್ತು. ನಟ ಅಕ್ಷಯ್ ಕುಮಾರ್ ನಮ್ಮ ಪಾಲಿಗೆ ದೇವರಾಗಿ ಬಂದರು. ಈಗ ಹಣದ ಹೊಂದಾಣಿಕೆ ಆಗಿದೆ. ಶಸ್ತ್ರಚಿಕಿತ್ಸೆಯಿಂದ ಮೊಮ್ಮಗಳಿಗೆ ಮರುಜೀವ ಸಿಗಲಿದೆ ಎಂದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟನಿಗೆ ಅಭಿನಂದನೆಗಳ (Congratulation) ಮಹಾಪುರವೇ ಹರಿದುಬರುತ್ತಿದೆ.