Akshay Kumar: ಥೂ ನಿಮ್ಗೆ ನಾಚಿಕೆ ಆಗಲ್ವಾ ಎಂದು ನಟ ಅಕ್ಷಯ್​ ಕುಮಾರ್​ಗೆ ನೆಟ್ಟಿಗರಿಂದ ತರಾಟೆ!

By Suvarna News  |  First Published Apr 10, 2023, 3:14 PM IST

ಕೆಲವು ತಿಂಗಳುಗಳಿಂದ ಭಾರಿ ಸುದ್ದಿಯಲ್ಲಿರುವ ನಟ ಅಕ್ಷಯ್​ ಕುಮಾರ್​ ಅವರು ಈಗ ಷರ್ಟ್​ಲೆಸ್​ ಆಗಿ ಚಿಕ್ಕ ವಯಸ್ಸಿನ ಹುಡುಗಿಯರ ಜೊತೆ ನರ್ತಿಸಿ ಟ್ರೋಲ್​ ಆಗಿದ್ದಾರೆ. 
 


ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಸದಾ ಸುದ್ದಿಯಲ್ಲಿರುತ್ತಾರೆ. ಆಗಾಗ ಟ್ರೋಲಿಗರ ಬಾಯಿಗೆ ತುತ್ತಾಗುವ ಅಕ್ಷಯ್ ಕುಮಾರ್ ಭಾರತದ ಪೌರತ್ವ ಹೊಂದಿಲ್ಲ ಎನ್ನುವ ಟೀಕೆ ವ್ಯಕ್ತವಾಗುತ್ತಿತ್ತು. ಅಕ್ಷಯ್ ಕುಮಾರ್ ಇನ್ನೂ ಕೆನಡಾದ ಪ್ರಜೆ ಆಗಿದ್ದಾರೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿತ್ತು. ಆದರೆ ನಂತರ  ಅಕ್ಷಯ್ ಕೊನೆಗೂ ಕೆನಡಾ ಪೌರತ್ವ ತ್ಯಜಿಸಲು ನಿರ್ಧರಿಸಿ ಎಲ್ಲರ ಬಾಯಿ ಮುಚ್ಚಿಸಿದ್ದರು.  ಭಾರಿ ಟೀಕೆ, ಆಕ್ರೋಶದ ಬಳಿಕ ಪೌರತ್ವ ಬದಾಲಾಯಿಸುವ ಮನಸು ಮಾಡಿ, ಭಾರತವೇ ಸರ್ವಸ್ವ ಎಂದು ಹೇಳಿದ ಮೇಲೆ ಈ ವಿಷಯ ಸ್ವಲ್ಪ ತಣ್ಣಗಾಗಿತ್ತು.  ‘ನಾನು ಕೆನಡಾ ನಾಗರಿಕತೆ ಪಡೆಯುವುದರ ಹಿಂದಿನ ಕಾರಣ ಗೊತ್ತಿಲ್ಲದೆ ಜನರು ಮಾತನಾಡುತ್ತಿದ್ದಾಗ ಬೇಸರವಾಗುತ್ತಿತ್ತು. ಭಾರತವೇ ನನ್ನ ಸರ್ವಸ್ವ. ನಾನು ಏನಾದರೂ ಗಳಿಸಿದ್ದರೆ, ಪಡೆದುಕೊಂಡಿದ್ದರೆ ಅದು ಇಲ್ಲಿಂದ. ನನಗೆ ಹಿಂತಿರುಗಿ ಬರುವ ಅದೃಷ್ಟಸಿಕ್ಕಿದೆ’ ಎಂದಿದ್ದರು.

ಇದಾಗುತ್ತಿದ್ದಂತೆಯೇ ನಟ ಅಕ್ಷಯ್​ ಕುಮಾರ್​ ಅವರ ಸೆಲ್ಫಿ ಸಿನಿಮಾ (Selfie) ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿತು. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಅಕ್ಷಯ್ ಕುಮಾರ್ ಕೂಡ ಅಭಿಮಾನಿಗಳನ್ನು ಮೋಡಿ ಮಾಡಲು ಸೋತಿದ್ದರು. ಅಕ್ಷಯ್ ಕುಮಾರ್ ನಟನೆಯ 5 ಸಿನಿಮಾಗಳು  ರಿಲೀಸ್ ಆಗಿದ್ದವು. ಆದರೆ ಯಾವ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿರಲಿಲ್ಲ. ಸಾಲು ಸಾಲು ಸೋಲಿನಿಂದ ಅಕ್ಷಯ್ ಕಂಗೆಟ್ಟಿದ್ದರು. ಈ ವರ್ಷವಾದರೂ ಸಿನಿಮಾಗಳು ಅಭಿಮಾನಿಗಳ ಹೃದಯ ಗೆಲ್ಲುತ್ತಾ ಎಂದು ಎದುರು ನೋಡುತ್ತಿದ್ದು ಅಕ್ಷಯ್. ಆದರೆ ಈ ವರ್ಷ ಬಂದ ಮೊದಲ ಸಿನಿಮಾವೇ ನೆಲ ಕಚ್ಚಿತ್ತು. ಅಕ್ಷಯ್ ಕುಮಾರ್ ಸದ್ಯ ಸೆಲ್ಫಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸೆಲ್ಫಿ ಸಿನಿಮಾ ಫೆಬ್ರವರಿ 24ರಂದು ರಿಲೀಸ್ ಆಗಿತ್ತು. ಭಾರಿ ನಿರೀಕ್ಷೆಯೊಂದಿಗೆ ಬಂದ ಸೆಲ್ಫಿ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಕಾಣಲಿಲ್ಲ. 

Tap to resize

Latest Videos

Selfie: ಸೆಲ್ಫಿ ಮೂಲಕವೇ ಗಿನ್ನೆಸ್​ ದಾಖಲೆ ಬರೆದ ಅಕ್ಷಯ್​ ಕುಮಾರ್​

ಇದೀಗ ಅಕ್ಷಯ್​ ಕುಮಾರ್​, ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸದ್ದು ಮಾಡುತ್ತಿದೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಭಾರಿ ಟ್ರೋಲ್​ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಈ ವಿಡಿಯೋದಲ್ಲಿ  ಅಕ್ಷಯ್​ ಕುಮಾರ್​ ಮೌನಿ ರಾಯ್ (Mouni Roy) ಮತ್ತು ಸೋನಂ ಬಾಜ್ವಾ ಅವರೊಂದಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಿರುವುದನ್ನು ನೋಡಬಹುದು.  ಅದೇ ಸಮಯದಲ್ಲಿ, 2012 ರಲ್ಲಿ ಬಿಡುಗಡೆಯಾದ 'ಖಿಲಾಡಿ 786' ಚಿತ್ರದ 'ಬಲ್ಮಾ' ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದು, ಅದಕ್ಕೆ ಅಕ್ಷಯ್​ ಕುಮಾರ್​ ಹೆಜ್ಜೆ ಹಾಕಿದ್ದಾರೆ.

ಸುಮ್ಮನೇ ನೃತ್ಯ ಮಾಡಿದರೆ ಈ ಸುದ್ದಿ ಅಷ್ಟು ಸದ್ದು ಮಾಡುತ್ತಿರಲಿಲ್ಲ. ಆದರೆ, ಸಮಸ್ಯೆ ಶುರುವಾಗಿರುವುದು ವಿಡಿಯೋದಲ್ಲಿ  ಅಕ್ಷಯ್ ಶರ್ಟ್​ಲೆಸ್​ ಆಗಿ ಕಾಣಿಸಿಕೊಂಡಿದ್ದಾರೆ.  ಇದನ್ನು ನೋಡಿದ ಜನರು ಕಿಲಾಡಿ ಕುಮಾರ್ ಅವರನ್ನು ಸಕತ್​ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಏನೆಂದರೆ 59 ವರ್ಷದ ಅಕ್ಷಯ್​ ಕುಮಾರ್​, 23-24 ವರ್ಷದ ಯುವತಿಯರ ಜೊತೆ ನೃತ್ಯ ಮಾಡಿದ್ದಾರೆ. ಆದರೆ ಅವರು ಷರ್ಟ್​ಲೆಸ್​ (Shirtless) ಆಗಿ ಕಾಣಿಸಿಕೊಂಡಿದ್ದು, ಇದರಿಂದ ಸಕತ್​ ಟ್ರೋಲ್​ ಆಗುತ್ತಿದ್ದಾರೆ.  ಈ ವಯಸ್ಸಿನಲ್ಲಿ ಬಟ್ಟೆ ಇಲ್ಲದೆ ಹುಡುಗಿಯರೊಂದಿಗೆ ನೃತ್ಯ ಮಾಡುವುದು ಸರಿಯಲ್ಲ ಎಂದು ಹಲವರು ಬರೆದಿದ್ದರೆ,   ನಾಚಿಕೆಯಿಲ್ಲದವರು, ತಮ್ಮ ಮಗಳ ಸಮಾನರಾದ ಯುವತಿಯರ ಜೊತೆ ಷರ್ಟ್​ ಬಿಚ್ಚಿ ನೃತ್ಯ ಮಾಡಲು ನಾಚಿಕೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈ ರೀತಿ ನಾಚಿಕೆ ಇಲ್ಲದ ಕೆಲಸ ಮಾಡುವವರನ್ನು ಭಾರತದ ಬದಲು ಕೆನಡಾಕ್ಕೆ ಕಳುಹಿಸಿ ಎಂದಿದ್ದಾರೆ.

ಆದಾಯ ತೆರಿಗೆ ಪಾವತಿಯ ಗುಟ್ಟು ರಟ್ಟು ಮಾಡಿದ ನಟ Akshay Kumar

ಕೆಲವರು ಮಾತ್ರ  59ರ ಹರೆಯದಲ್ಲೂ ಅಕ್ಷಯ್ ಇಷ್ಟು ಫಿಟ್ (Fit) ಆಗಿದ್ದು ಹೇಗೆ ಎಂದು ಶ್ಲಾಘಿಸುತ್ತಿದ್ದಾರೆ. ಶಾರುಖ್​ ಖಾನ್​ ಸೇರಿದಂತೆ ಕೆಲವು ನಟರನ್ನೂ ಈ ಚರ್ಚೆಯಲ್ಲಿ ತರಲಾಗಿದೆ. ಅವರೆಲ್ಲರೂ ಇದೇ ರೀತಿ ನಾಚಿಕೆ ಬಿಟ್ಟು ಇನ್ನೂ ಚಿಕ್ಕ ವಯಸ್ಸಿನ ನಟಿಯರ ಜೊತೆ ತೀರಾ ಅಶ್ಲೀಲ ಎಂಬಂತೆ ಕುಣಿಯುತ್ತಿದ್ದರೆ, ಅವರಿಗೆ ಗೌರವ ಕೊಟ್ಟು, ಅಕ್ಷಯ್​ ಕುಮಾರ್​ ಅವರ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂದು ಅಕ್ಷಯ್​ ಕುಮಾರ್​ ಪರ ವಹಿಸಿಕೊಂಡಿದ್ದಾರೆ. ಇದರಲ್ಲಿ ನಟರ ತಪ್ಪೇನೂ ಇಲ್ಲ, ದುಡ್ಡು ಕೊಟ್ಟರೆ ಯಾರ ಜೊತೆಯಾದರೂ ಕುಣಿಯುವ ನಟಿಯರು ಇರುವಾಗ ಕೇವಲ ಪುರುಷರತ್ತ ಬೊಟ್ಟು ಮಾಡುವುದು ಏಕೆ ಎಂದು ಇನ್ನು ಹಲವರು ಪ್ರಶ್ನಿಸಿದ್ದಾರೆ. 

It looks so cringe to see 59 yo shirtless uncle dancing with 23- 24yo girls and doing creepy steps just to stay relevant.

What a downfall for Akshay Kumar.pic.twitter.com/DXzdPs0ZQ2

— Dr Nimo Yadav (@niiravmodi)
click me!