ನೋರಾ ಜೊತೆ ಅಕ್ಷಯ್ ಕುಮಾರ್ ರೊಮ್ಯಾಂಟಿಕ್ ಡಾನ್ಸ್; ಟ್ವಿಂಕಲ್‌ ಖನ್ನಾಗೆ ಟ್ಯಾಗ್ ಮಾಡಿ ಕಾಲೆಳೆದ ಫ್ಯಾನ್ಸ್

By Shruthi Krishna  |  First Published Feb 11, 2023, 12:37 PM IST

ನಟಿ ನೋರಾ ಫತೇಹಿ ಜೊತೆ ಅಕ್ಷಯ್ ಕುಮಾರ್ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದಾರೆ. ವಿಡಿಯೋವನ್ನು ಟ್ವಿಂಕಲ್‌ ಖನ್ನಾಗೆ ಟ್ಯಾಗ್ ಮಾಡಿ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. 


ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಭಾರತದ ಭೂಪಟದ ಮೇಲೆ ಕಾಲಿಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಅಕ್ಷಯ್ ಕುಮಾರ್ ಬಳಿಕ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಜೊತೆ ಡಾನ್ಸ್ ಮಾಡಿ ಸುದ್ದಿಯಾಗಿದ್ದರು. ಮಾಲಿವುಡ್ ಸ್ಟಾರ್ ಮೋಹನ್ ಲಾಲ್ ಮತ್ತು ಅಕ್ಷಯ್ ಕುಮಾರ್ ಡಾನ್ಸ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೊಂದು ಡಾನ್ಸ್ ವಿಡಿಯೋ ವೈರಲ್ ಆಗಿದೆ. ಅಕ್ಷಯ್ ಕುಮಾರ್ ಡಾನ್ಸ್ ನೋಡಿ ಅಭಿಮಾನಿಗಳು ಅವರ ಟ್ವಿಂಕಲ್ ಖನ್ನಾಗೆ ಟ್ಯಾಗ್ ಮಾಡುತ್ತಿದ್ದಾರೆ.  

ಅಕ್ಷಯ್ ಕುಮಾರ್ ಸದ್ಯ ಸಲ್ಫಿ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಸೆಲ್ಫಿ ಪ್ರಚಾರ ವೇಳೆ ಅಕ್ಷಯ್ ಕುಮಾರ್ ಬಾಲಿವುಡ್ ಖ್ಯಾತ ಡಾನ್ಸರ್ ಮತ್ತು ನಟಿ ನೋರಾ ಜೊತೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಸೆಲ್ಫಿ ಸಿನಿಮಾದ ಹಾಡಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ. ಅಕ್ಷಯ್ ಕುಮಾರ್ ಮತ್ತು ನೋರಾ ರೊಮ್ಯಾಂಟಿಕ್ ಡಾನ್ಸ್ ಅಭಿಮಾನಿಗಳ ಹೃದಯ ಗೆದ್ದಿದೆ. ಆದರೆ ಅಭಿಮಾನಿಗಳು ಈ ವಿಡಿಯೋವನ್ನು ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾಗೆ ಟ್ಯಾಗ್ ಮಾಡಿ ಕಾಲೆಳೆಯುತ್ತಿದ್ದಾರೆ. 

Tap to resize

Latest Videos

ವಿಡಿಯೋದಲ್ಲಿ ನೋರಾ ಮತ್ತು ಅಕ್ಷಯ್ ಇಬ್ಬರೂ ಹಳೆಯ ಸೇತುವೆಯ ಕೆಳಗೆ ನೃತ್ಯ ಮಾಡಿದ್ದಾರೆ. ನೋರಾ ಸಖತ್ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದಾರೆ. ನಿಯಾನ್ ಹಸಿರು ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಇಬ್ಬರೂ ಸುಂದರವಾಗಿ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ. ಜೊತೆಗೆ ಟ್ರೋಲ್ ಕೂಡ ಮಾಡಿದ್ದಾರೆ. 

ಮೋಹನ್ ಲಾಲ್ ಜೊತೆ ಅಕ್ಷಯ್ ಕುಮಾರ್ ಮಸ್ತ್ ಡಾನ್ಸ್; ಕುಣಿದು ಕುಪ್ಪಳಿಸಿದ ಸ್ಟಾರ್ಸ್ ವಿಡಿಯೋ ವೈರಲ್

ಅನೇಕರು ಕಾಮೆಂಟ್ ಮಾಡಿ, 'ಯಾರಾದರೂ ಈ ವಿಡಿಯೋವನ್ನು ಟ್ವಿಂಕಲ್ ಖನ್ನಾ ಅವರಿಗೆ ಟ್ಯಾಗ್ ಮಾಡಿ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಟ್ವಿಂಕಲ್ ಖನ್ನಾ ಮೇಡಮ್ ದಯವಿಟ್ಟು ಇಬ್ಬರ ಡಾನ್ಸ್ ನೋಡಿ' ಎಂದು ಹೇಳಿದ್ದಾರೆ. ಅನೇಕರು ಟ್ವಿಂಕಲ್ ಹೆಸರು ಹೇಳಿ ಅಕ್ಷಯ್ ಕುಮಾರ್ ಕಾಲೆಳೆದಿದ್ದಾರೆ. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 
 
 
 
 
 
 
 
 
 
 
 
 
 
 

A post shared by Akshay Kumar (@akshaykumar)

ನಾಚಿಕೆ ಆಗ್ಬೇಕು; ಭಾರತದ ಭೂಪಟ ತುಳಿದ ಅಕ್ಷಯ್ ಕುಮಾರ್‌ನ ತರಾಟೆ ತೆಗೆದುಕೊಂಡ ನೆಟ್ಟಿಗರು

ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ವರ್ಷ ತೆರೆಗೆ ಬರುತ್ತಿರುವ ಅಕ್ಷಯ್ ಕುಮಾರ್ ಮೊದಲ ಸಿನಿಮಾ ಇದಾಗಿದೆ. ಕಳೆದ ವರ್ಷ ಅಕ್ಷಯ್ ನಟನೆಯ ಯಾವ ಸಿನಿಮಾಗಳು ಹಿಟ್ ಆಗಿಲ್ಲ. ಈ ವರ್ಷವಾದರೂ ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡುತ್ತಾ ಎಂದು ಕಾದುನೋಡಬೇಕಿದೆ. ಅಷ್ಟಕ್ಕೂ ಸೆಲ್ಫಿ ಸಿನಿಮಾ ಸೌತ್ ಸಿನಿಮಾದ ರಿಮೇಕ್ ಆಗಿದೆ. ಮಲಯಾಳಂನ ಡ್ರೈವರ್ ಲೈಸೆನ್ಸ್ ಸಿನಿಮಾದ ರಿಮೇಕ್  ಆಗಿದೆ. ಈ ಸಿನಿಮಾ ಬಾಲಿವುಡ್ ಮಂದಿಯ ಹೃದಯ ಗೆಲ್ಲುತ್ತಾ ಕಾದುನೋಡಬೇಕಿದೆ. 

click me!